₹150 ಕೋಟಿ ಗಳಿಸಿದ ‘ಪ್ರೇಮದ ಊರಲಿ’; ಹೀರೋ ಶ್ರೀರಾಮ್ಗೆ ಸಿಕ್ಕಿದ್ದೆಷ್ಟು? ನಟನ ಉತ್ತರ ಕೇಳಿದ್ರೆ ಅಚ್ಚರಿಯಾಗುತ್ತೆ!
ಸೈಟ್ ಮಾರಿ, ಒಡವೆ ಅಡವಿಟ್ಟು ಸಿನಿಮಾ ಮಾಡಿದ್ದ ನಿರ್ಮಾಪಕರು! ನಿದ್ದೆಯಿಲ್ಲದೆ ರಾತ್ರಿ ಕಳೆದಿದ್ದ ಶ್ರೀರಾಮ್! ಸಿನಿಮಾ ಸೂಪರ್ ಹಿಟ್ ಆದ ಬಳಿಕ ಲಾಭದಲ್ಲಿ ಹೀರೋಗೆ ಎಷ್ಟು ಪಾಲು ಸಿಕ್ಕಿದೆ ಗೊತ್ತಾ?
ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಚಿತ್ರದ ಗಳಿಕೆ ₹150 ಕೋಟಿ ದಾಟಿದೆ ಎಂಬ ಚರ್ಚೆಯ ನಡುವೆಯೇ ನಾಯಕ ನಟ ಶ್ರೀರಾಮ್ ಅವರ ಸಂಭಾವನೆ ವಿಚಾರವೂ ಸದ್ದು ಮಾಡುತ್ತಿದೆ. ಇಷ್ಟು ದೊಡ್ಡ ಹಿಟ್ ಕೊಟ್ಟ ಹೀರೋಗೆ ನಿರ್ಮಾಪಕರು ಎಷ್ಟು ಹಣ ಕೊಟ್ಟಿದ್ದಾರೆ? ಲಾಭದಲ್ಲಿ ಪಾಲು ನೀಡಿದ್ದಾರಾ? ಈ ಪ್ರಶ್ನೆಗಳಿಗೆ ಸ್ವತಃ ಶ್ರೀರಾಮ್ ಉತ್ತರ ನೀಡಿದ್ದಾರೆ.

‘ನನಗೆ ಹೆವಿ ಶೇರ್ ಸಿಗುತ್ತಿದೆ!’ಸಿನಿಮಾ ಯಶಸ್ಸಿನ ಬಳಿಕ ಸಂಭಾವನೆ ಹೆಚ್ಚಿಸಿಕೊಂಡಿದ್ದೀರಾ ಎಂಬ ಪ್ರಶ್ನೆಗೆ ಶ್ರೀರಾಮ್ ಕುತೂಹಲಕಾರಿ ಉತ್ತರ ನೀಡಿದ್ದಾರೆ. ಇನ್ನೂ ಯಾವುದೇ ಹೊಸ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಸಂಭಾವನೆ ವಿಚಾರದಲ್ಲೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಲಾಭದಲ್ಲಿ ಪಾಲು ಸಿಕ್ಕಿದೆಯಾ ಎಂಬ ಪ್ರಶ್ನೆಗೆ, ‘ಪ್ರೀತಿಯಲ್ಲಿ ನನಗೆ ಹೆವಿ ಶೇರ್ ಸಿಗುತ್ತಿದೆ. ಆ ಪ್ರೀತಿಯ ಲೆಕ್ಕಾಚಾರದಲ್ಲೇ ಇದ್ದೇನೆ’ ಎಂದು ನಗುತ್ತಾ ಉತ್ತರಿಸಿದ್ದಾರೆ.
ಸೈಟ್ ಮಾರಿ, ಒಡವೆ ಅಡವಿಟ್ಟು ಸಿನಿಮಾ ಮಾಡಿದ್ದ ನಿರ್ಮಾಪಕರು!
ಲಾಭದಲ್ಲಿ ಪಾಲು ಸಿಕ್ಕಿದೆಯಾ ಎಂಬ ಪ್ರಶ್ನೆಗೆ, ‘ಪ್ರೀತಿಯಲ್ಲಿ ನನಗೆ ಹೆವಿ ಶೇರ್ ಸಿಗುತ್ತಿದೆ. ಆ ಪ್ರೀತಿಯ ಲೆಕ್ಕಾಚಾರದಲ್ಲೇ ಇದ್ದೇನೆ’ ಎಂದು ನಗುತ್ತಾ ಉತ್ತರಿಸಿದ್ದಾರೆ.
ಸೈಟ್ ಮಾರಿ, ಒಡವೆ ಅಡವಿಟ್ಟು ಸಿನಿಮಾ ಮಾಡಿದ್ದ ನಿರ್ಮಾಪಕರು!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಹಿಂದೆ ನಿರ್ಮಾಪಕರ ದೊಡ್ಡ ತ್ಯಾಗವಿದೆಯಂತೆ. ಹಣಕಾಸಿನ ಸಂಕಷ್ಟದ ನಡುವೆಯೂ ತಮ್ಮ ಸೈಟ್ ಮಾರಿ, ಒಡವೆಗಳನ್ನು ಅಡವಿಟ್ಟು ಸಿನಿಮಾ ನಿರ್ಮಾಣ ಮಾಡಿದ್ದರಂತೆ. ಅಷ್ಟೆಲ್ಲ ಕಷ್ಟವಿದ್ದರೂ ಕಲಾವಿದರಿಗೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದರು ಎಂದು ಶ್ರೀರಾಮ್ ನೆನಪಿಸಿಕೊಂಡಿದ್ದಾರೆ.
ಸಿನಿಮಾ ಎಷ್ಟೇ ದೊಡ್ಡ ಮಟ್ಟದಲ್ಲಿ ಹಣ ಗಳಿಸಿದರೂ ಅದರ ಲಾಭ ಮೊದಲು ನಿರ್ಮಾಪಕರಿಗೆ ಸಿಗಬೇಕು. ಏಕೆಂದರೆ ಅದಕ್ಕೆ ಅವರು ಅರ್ಹರು ಎಂದು ಶ್ರೀರಾಮ್ ಹೇಳಿದ್ದಾರೆ.
ನಿದ್ದೆಯಿಲ್ಲದೆ ರಾತ್ರಿ ಕಳೆದಿದ್ದ ಶ್ರೀರಾಮ್!
ಸಿನಿಮಾ ಎಷ್ಟೇ ದೊಡ್ಡ ಮಟ್ಟದಲ್ಲಿ ಹಣ ಗಳಿಸಿದರೂ ಅದರ ಲಾಭ ಮೊದಲು ನಿರ್ಮಾಪಕರಿಗೆ ಸಿಗಬೇಕು. ಏಕೆಂದರೆ ಅದಕ್ಕೆ ಅವರು ಅರ್ಹರು ಎಂದು ಶ್ರೀರಾಮ್ ಹೇಳಿದ್ದಾರೆ.
ನಿದ್ದೆಯಿಲ್ಲದೆ ರಾತ್ರಿ ಕಳೆದಿದ್ದ ಶ್ರೀರಾಮ್!
ಸಿನಿಮಾ ಸೋತರೆ ತನ್ನನ್ನು ನಂಬಿ ಹಣ ಹೂಡಿದ ನಿರ್ಮಾಪಕರಿಗೆ ಏನು ಉತ್ತರ ಕೊಡುವುದು? ನಿರ್ದೇಶಕರ ಭವಿಷ್ಯ ಏನಾಗಬೇಕು? ಎಂಬ ಪ್ರಶ್ನೆಗಳು ಶ್ರೀರಾಮ್ ಅವರನ್ನು ಕಾಡುತ್ತಿದ್ದವಂತೆ.
ಕಲಾವಿದರಿಗೆ ಒಂದು ಸಿನಿಮಾ ಸೋತರೂ ಮತ್ತೊಂದು ಅವಕಾಶ ಸಿಗಬಹುದು. ಆದರೆ ಆಸ್ತಿ ಮಾರಿ ಹಣ ಹೂಡಿದ ನಿರ್ಮಾಪಕರ ಪರಿಸ್ಥಿತಿ ಏನಾಗಬೇಕು? ಇದೇ ಚಿಂತೆಯಲ್ಲಿ ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದಾಗಿ ಶ್ರೀರಾಮ್ ಹೇಳಿಕೊಂಡಿದ್ದಾರೆ.
ಶಾಲಾ ದಿನಗಳ ಉದಾಹರಣೆ ಕೊಟ್ಟ ನಟ!

ತಂದೆ-ತಾಯಿ ಕಷ್ಟಪಟ್ಟು ಶಾಲಾ ಶುಲ್ಕ, ಪುಸ್ತಕ, ಬಟ್ಟೆ ಸೇರಿದಂತೆ ಎಲ್ಲದಕ್ಕೂ ಹಣ ಖರ್ಚು ಮಾಡುತ್ತಾರೆ. ವಯಸ್ಸಾದಂತೆ ಅವರ ಕಷ್ಟದ ಅರಿವಾಗಿ ಚೆನ್ನಾಗಿ ಓದಬೇಕೆಂಬ ಜವಾಬ್ದಾರಿ ಮೂಡುತ್ತದೆ. ಅದೇ ರೀತಿ ನಿರ್ಮಾಪಕರು ತಮ್ಮ ಮೇಲೆ ನಂಬಿಕೆ ಇಟ್ಟು ಹಣ ಹೂಡಿದಾಗ, ಅವರ ನಂಬಿಕೆ ಉಳಿಸಿಕೊಳ್ಳುವುದು ತಮ್ಮ ಜವಾಬ್ದಾರಿ ಎಂದು ಶ್ರೀರಾಮ್ ವಿವರಿಸಿದ್ದಾರೆ.
ಸ್ಟಾರ್ ಆಗುವುದಕ್ಕಿಂತ ಶ್ರೀರಾಮ್ಗೆ ಬೇರೆಯದೇ ಕನಸು!ಕೇವಲ ದೊಡ್ಡ ಸ್ಟಾರ್ ಆಗಬೇಕು ಎನ್ನುವುದಕ್ಕಿಂತ ನಿರ್ಮಾಪಕರು ಧೈರ್ಯವಾಗಿ ಹಣ ಹೂಡಬಹುದಾದ ‘ಬ್ಯಾಂಕಬಲ್ ಸ್ಟಾರ್’ ಆಗಬೇಕೆಂಬುದು ಶ್ರೀರಾಮ್ ಅವರ ಆಸೆಯಂತೆ.
ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಹಣ ಸುರಕ್ಷಿತ ಎಂಬ ನಂಬಿಕೆ ನಿರ್ಮಾಪಕರಿಗೆ ಬರಬೇಕು. ನಿರ್ಮಾಪಕರು ಉಳಿದರೆ ಮಾತ್ರ ಹೀರೋಗಳು ಬೆಳೆಯಲು ಸಾಧ್ಯ. ನಿರ್ದೇಶಕರಿಗೂ ತಮ್ಮ ಕನಸಿನ ಕಥೆಗಳನ್ನು ಸಿನಿಮಾ ಮಾಡುವ ಧೈರ್ಯ ಬರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ₹150 ಕೋಟಿ ಗಳಿಕೆಯಲ್ಲಿ ಶ್ರೀರಾಮ್ಗೆ ಸಿಕ್ಕಿದ್ದೆಷ್ಟು?ಚಿತ್ರದ ಲಾಭದಲ್ಲಿ ತಮಗೆ ಎಷ್ಟು ಹಣ ಸಿಕ್ಕಿದೆ ಎಂಬ ನಿಖರ ಮೊತ್ತವನ್ನು ಶ್ರೀರಾಮ್ ಬಹಿರಂಗಪಡಿಸಿಲ್ಲ. ಬದಲಾಗಿ ನಿರ್ಮಾಪಕರಿಗೆ ಉತ್ತಮ ಲಾಭವಾಗಿರುವುದೇ ತಮ್ಮ ದೊಡ್ಡ ಸಂತೋಷ ಎಂದಿದ್ದಾರೆ.
ಸಿನಿಮಾದ ಯಶಸ್ಸಿನ ಕ್ರೆಡಿಟ್ಗಿಂತ ನಿರ್ಮಾಪಕರ ಕಷ್ಟಕ್ಕೆ ಬೆಲೆ ಸಿಗಬೇಕು ಎನ್ನುವ ಶ್ರೀರಾಮ್ ಅವರ ಮಾತುಗಳು ಗಮನ ಸೆಳೆಯುತ್ತಿವೆ.
ಸಿನಿಮಾದ ಯಶಸ್ಸಿನ ಕ್ರೆಡಿಟ್ಗಿಂತ ನಿರ್ಮಾಪಕರ ಕಷ್ಟಕ್ಕೆ ಬೆಲೆ ಸಿಗಬೇಕು ಎನ್ನುವ ಶ್ರೀರಾಮ್ ಅವರ ಮಾತುಗಳು ಗಮನ ಸೆಳೆಯುತ್ತಿವೆ.