ಡಿಸೆಂಬರ್ 11ರಿಂದ ಶನಿಯ ನಡೆ ಬದಲು! ಈ 4 ರಾಶಿಗಳಿಗೆ ಶುರುವಾಗುತ್ತಾ ಅದೃಷ್ಟದ ಆಟ? ಅಧಿಕಾರ ಯೋಗ, ಧನಲಾಭದ ನಿರೀಕ್ಷೆ!
ನ್ಯಾಯದೇವತೆ, ಕರ್ಮಫಲದಾತ ಶನಿ ಭಗವಾನ್ ಡಿಸೆಂಬರ್ 11ರಂದು ವಕ್ರ ನಿವೃತ್ತಿ ಹೊಂದಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ಈ ಚಲನೆಯಿಂದ ನಾಲ್ಕು ರಾಶಿಯವರ ಬದುಕಿನಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಲಾಭ, ವಿದೇಶ ಪ್ರಯಾಣದ ಯೋಗ ಕೂಡಿ ಬರಲಿದೆಯಂತೆ. ಅಷ್ಟಕ್ಕೂ ಆ ಅದೃಷ್ಟದ ರಾಶಿಗಳು ಯಾವುವು?
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹಕ್ಕೆ ವಿಶೇಷ ಮಹತ್ವವಿದೆ. ಮನುಷ್ಯನ ಕರ್ಮಕ್ಕೆ ಅನುಗುಣವಾಗಿ ಫಲ ನೀಡುವ ಗ್ರಹವೆಂದು ಶನಿಯನ್ನು ಪರಿಗಣಿಸಲಾಗುತ್ತದೆ. ಇದೀಗ ಡಿಸೆಂಬರ್ 11ರಂದು ಶನಿ ವಕ್ರ ಚಲನೆ ಮುಗಿಸಿ ನೇರ ಚಲನೆ ಆರಂಭಿಸಲಿದ್ದಾನೆ.
ಶನಿಯ ಈ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಸಂಕಷ್ಟಗಳು ಕಡಿಮೆಯಾಗಿ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಿಥುನ ರಾಶಿ: ಉದ್ಯೋಗದಲ್ಲಿ ಅಧಿಕಾರ ಯೋಗ!
ಮಿಥುನ ರಾಶಿಯವರ ಪಾಲಿಗೆ ಶನಿಯ ವಕ್ರ ನಿವೃತ್ತಿ ವೃತ್ತಿಜೀವನದಲ್ಲಿ ಹೊಸ ತಿರುವು ನೀಡಬಹುದು. ಶನಿಯು ಈ ರಾಶಿಯ 10ನೇ ಮನೆಯಲ್ಲಿ ನೇರ ಚಲನೆ ಆರಂಭಿಸಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಕಾರಾತ್ಮಕ ಬೆಳವಣಿಗೆಗಳಾಗುವ ನಿರೀಕ್ಷೆಯಿದೆ.
ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ದೊರೆಯಬಹುದು. ಬಡ್ತಿ, ಹೊಸ ಜವಾಬ್ದಾರಿ ಹಾಗೂ ಉನ್ನತ ಸ್ಥಾನ ಪಡೆಯುವ ಅವಕಾಶಗಳು ಕೂಡಿ ಬರಬಹುದು.
ಸಿಂಹ ರಾಶಿ: ಕೈ ಸೇರಬಹುದು ಕೊಟ್ಟ ಸಾಲದ ಹಣ!
ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಕಾಣಬಹುದು. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಬಹುದು.
ಈ ಹಿಂದೆ ಯಾರಿಗಾದರೂ ಸಾಲ ನೀಡಿದ್ದರೆ, ಆ ಹಣ ಮರಳಿ ಕೈ ಸೇರುವ ಸಾಧ್ಯತೆಯೂ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಮೇಷ ರಾಶಿ: ವಿದೇಶಕ್ಕೆ ಹೋಗುವ ಕನಸು ನನಸಾಗುತ್ತಾ?
ಏಳೂವರೆ ಶನಿಯ ಮೊದಲ ಹಂತದಲ್ಲಿರುವ ಮೇಷ ರಾಶಿಯವರಿಗೆ ಶನಿಯ ವಕ್ರ ನಿವೃತ್ತಿ ಒಂದಷ್ಟು ನೆಮ್ಮದಿ ನೀಡಬಹುದು.
ಶನಿಯು ಈ ರಾಶಿಯ 12ನೇ ಮನೆಯಲ್ಲಿ ನೇರ ಚಲನೆ ಆರಂಭಿಸಲಿದ್ದಾನೆ. ವಿದೇಶದಲ್ಲಿ ಉದ್ಯೋಗ ಪಡೆಯಬೇಕು ಅಥವಾ ವ್ಯಾಪಾರ ಆರಂಭಿಸಬೇಕು ಎಂದುಕೊಂಡಿರುವವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಬಹುದಿನಗಳ ಯೋಜನೆಗಳು ಕಾರ್ಯರೂಪಕ್ಕೆ ಬರಬಹುದು.
ಕರ್ಕ ರಾಶಿ: ಅದೃಷ್ಟದ ಬಾಗಿಲು ತೆರೆಯುತ್ತಾ?
ಕರ್ಕ ರಾಶಿಯವರ ಒಂಬತ್ತನೇ ಮನೆಯಲ್ಲಿ ಶನಿ ವಕ್ರ ನಿವೃತ್ತಿ ಹೊಂದಲಿದ್ದಾನೆ. ಜ್ಯೋತಿಷ್ಯದಲ್ಲಿ ಈ ಮನೆಯನ್ನು ಅದೃಷ್ಟ, ಧರ್ಮ, ಉನ್ನತ ಶಿಕ್ಷಣ ಹಾಗೂ ದೂರದ ಪ್ರಯಾಣಕ್ಕೆ ಸಂಬಂಧಿಸಿದ ಸ್ಥಾನವೆಂದು ಪರಿಗಣಿಸಲಾಗುತ್ತದೆ.
ಬಹಳ ದಿನಗಳಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ವೇಗ ಪಡೆದುಕೊಳ್ಳಬಹುದು. ಉನ್ನತ ಶಿಕ್ಷಣ ಮತ್ತು ದೂರದ ಪ್ರಯಾಣಕ್ಕೆ ಸಂಬಂಧಿಸಿದಂತೆ ಅನುಕೂಲಕರ ಬೆಳವಣಿಗೆಗಳಾಗುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಡಿಸೆಂಬರ್ 11ರ ನಂತರ ಶನಿಯ ಚಲನೆಯಲ್ಲಾಗುವ ಬದಲಾವಣೆ ಈ ನಾಲ್ಕು ರಾಶಿಯವರಿಗೆ ಹೊಸ ಭರವಸೆ ಮೂಡಿಸಲಿದೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ.