ಇಸ್ರೋ ಜೊತೆ ಖಾಸಗಿ ಕಂಪನಿಗಳದ್ದೂ ಬಾಹ್ಯಾಕಾಶದಲ್ಲಿ ಹವಾ! ಭಾರತದ ಮೊದಲ ಖಾಸಗಿ PSLV ರಾಕೆಟ್ ಉಡಾವಣೆಗೆ ಸಿದ್ಧ!
ಇಸ್ರೋ ಇತಿಹಾಸದಲ್ಲಿ ಹೊಸ ಅಧ್ಯಾಯ! ಖಾಸಗಿ ಕಂಪನಿಗಳಿಂದಲೇ ರಾಕೆಟ್ ನಿರ್ಮಾಣ, 2027ರಲ್ಲಿ ಮೊದಲ ಉಡಾವಣೆ!
ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ! ಇಲ್ಲಿಯವರೆಗೆ ಇಸ್ರೋ ನಿರ್ಮಿಸುತ್ತಿದ್ದ PSLV ರಾಕೆಟ್ಗಳನ್ನು ಇನ್ಮುಂದೆ ಖಾಸಗಿ ಕಂಪನಿಗಳೂ ಸಂಪೂರ್ಣವಾಗಿ ನಿರ್ಮಿಸಲಿವೆ. ಭಾರತದ ಮೊದಲ ಖಾಸಗಿ ವಲಯದಲ್ಲಿ ನಿರ್ಮಾಣಗೊಂಡ PSLV ರಾಕೆಟ್ ಉಡಾವಣೆಗೆ ಸಜ್ಜಾಗಿದ್ದು, 2027ರ ಆರಂಭದಲ್ಲೇ ಆಕಾಶಕ್ಕೆ ಚಿಮ್ಮುವ ನಿರೀಕ್ಷೆಯಿದೆ. ಹಾಗಾದರೆ ಈ ಯೋಜನೆಯ ಹಿಂದಿರುವ ಕಂಪನಿಗಳು ಯಾವುವು? ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಇದರಿಂದ ಆಗುವ ಲಾಭವೇನು?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಈ ಮಹತ್ವದ ಬೆಳವಣಿಗೆಯನ್ನು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ, ಖಾಸಗಿ ವಲಯದಲ್ಲಿ ನಿರ್ಮಾಣವಾಗಿರುವ ಮೊದಲ PSLV-N1 ರಾಕೆಟ್ನ ಮೊದಲ ಉಡಾವಣೆಯನ್ನು 2027ರ ಮೊದಲ ತ್ರೈಮಾಸಿಕದಲ್ಲಿ ನಡೆಸಲು ಗುರಿ ನಿಗದಿಪಡಿಸಲಾಗಿದೆ.

ಈ ರಾಕೆಟ್ ನಿರ್ಮಾಣದ ಜವಾಬ್ದಾರಿಯನ್ನು ಭಾರತದ ಪ್ರಮುಖ ಎರಡು ಸಂಸ್ಥೆಗಳಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮತ್ತು ಲಾರ್ಸನ್ ಆ್ಯಂಡ್ ಟೂಬ್ರೊ (L&T) ಜಂಟಿ ಒಕ್ಕೂಟಕ್ಕೆ ನೀಡಲಾಗಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) 2022ರ ಸೆಪ್ಟೆಂಬರ್ನಲ್ಲಿ ಸುಮಾರು 860 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದು, ಒಟ್ಟು ಐದು PSLV ರಾಕೆಟ್ಗಳನ್ನು ನಿರ್ಮಿಸುವ ಜವಾಬ್ದಾರಿ ನೀಡಿದೆ.
ಇದುವರೆಗೆ ಇಸ್ರೋ ನೇತೃತ್ವದಲ್ಲಿ ರಾಕೆಟ್ಗಳ ವಿನ್ಯಾಸ ಮತ್ತು ನಿರ್ಮಾಣ ನಡೆಯುತ್ತಿತ್ತು. ಖಾಸಗಿ ಕಂಪನಿಗಳು ಬಿಡಿಭಾಗಗಳು ಹಾಗೂ ತಾಂತ್ರಿಕ ನೆರವು ನೀಡುತ್ತಿದ್ದವು. ಆದರೆ ಈಗ ಖಾಸಗಿ ಕಂಪನಿಗಳೇ ಸಂಪೂರ್ಣ ರಾಕೆಟ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಇದರ ಹಿಂದೆ ಭಾರತ ಸರ್ಕಾರದ ಬಾಹ್ಯಾಕಾಶ ಕ್ಷೇತ್ರದ ಖಾಸಗೀಕರಣ ಮತ್ತು ಸುಧಾರಣಾ ನೀತಿಗಳೂ ಪ್ರಮುಖ ಪಾತ್ರ ವಹಿಸಿವೆ. ಈಗಾಗಲೇ ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ನೂರಾರು ಸ್ಟಾರ್ಟ್ಅಪ್ಗಳು ಕಾರ್ಯನಿರ್ವಹಿಸುತ್ತಿವೆ. ಇಸ್ರೋ ಮತ್ತು IN-SPACe ಸಂಸ್ಥೆಗಳು ಖಾಸಗಿ ಕಂಪನಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಿವೆ.
ಮುಂದಿನ ದಿನಗಳಲ್ಲಿ ಉಪಗ್ರಹಗಳ ಉಡಾವಣೆ, ಸಂವಹನ, ನ್ಯಾವಿಗೇಷನ್, ಹವಾಮಾನ ಮುನ್ಸೂಚನೆ ಮತ್ತು ಭೂಮಿಯ ವೀಕ್ಷಣೆಯಂತಹ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಒಟ್ಟಿನಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋಗೆ ಖಾಸಗಿ ಕಂಪನಿಗಳ ಸಾಥ್ ಸಿಗುತ್ತಿರುವುದು ಭಾರತದ ತಂತ್ರಜ್ಞಾನ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.

ಈಗ ಎಲ್ಲರ ಕುತೂಹಲ ಒಂದೇ… 2027ರಲ್ಲಿ ಭಾರತದ ಮೊದಲ ಖಾಸಗಿ ನಿರ್ಮಿತ PSLV ರಾಕೆಟ್ ತನ್ನ ಮೊದಲ ಉಡಾವಣೆಯಲ್ಲಿ ಯಶಸ್ಸು ಸಾಧಿಸಲಿದೆಯೇ?