ಮಾದಪ್ಪನ ಹುಂಡಿಗೆ ಹರಿದುಬಂತು ಕೋಟ್ಯಂತರ ರೂಪಾಯಿ! ಕೇವಲ 27 ದಿನಗಳಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ?

ಮಾದಪ್ಪನ ಹುಂಡಿಗೆ ಹರಿದುಬಂತು ಕೋಟ್ಯಂತರ ರೂಪಾಯಿ! ಕೇವಲ 27 ದಿನಗಳಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ?

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಭಕ್ತಿಯ ಕಾಣಿಕೆ ಕೋಟ್ಯಂತರ ರೂಪಾಯಿಗೆ ತಲುಪಿದೆ. ದೀಪಾವಳಿ ಜಾತ್ರೆಯ ಬಳಿಕ ನಡೆದ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಭಾರೀ ಪ್ರಮಾಣದ ನಗದು, ಚಿನ್ನ, ಬೆಳ್ಳಿ ಹಾಗೂ ವಿದೇಶಿ ಕರೆನ್ಸಿ ನೋಟುಗಳು ಪತ್ತೆಯಾಗಿವೆ.

ದೀಪಾವಳಿ ಜಾತ್ರೆಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಮಾದಪ್ಪನ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಹಾಗೂ ಹರಕೆ ತೀರಿಸಲು ಭಕ್ತರು ಭರಪೂರ ಕಾಣಿಕೆ ಅರ್ಪಿಸಿದ್ದಾರೆ.

ಕೇವಲ 27 ದಿನಗಳಲ್ಲಿ ಮಾದಪ್ಪನ ಹುಂಡಿಯಲ್ಲಿ ಬರೋಬ್ಬರಿ 2,50,73,817 ರೂಪಾಯಿ ಸಂಗ್ರಹವಾಗಿದೆ. ಅಂದರೆ ದಿನವೊಂದಕ್ಕೆ ಸರಾಸರಿ 9.28 ಲಕ್ಷ ರೂಪಾಯಿ ಕಾಣಿಕೆ ಹರಿದುಬಂದಂತಾಗಿದೆ.

ವಿಶೇಷವೆಂದರೆ, ಹುಂಡಿಯಲ್ಲಿ ಕೇವಲ ಹಣವಷ್ಟೇ ಅಲ್ಲದೆ 8 ಗ್ರಾಂ ಚಿನ್ನ, 924 ಗ್ರಾಂ ಬೆಳ್ಳಿ ಹಾಗೂ ನಾಲ್ಕು ವಿದೇಶಿ ಕರೆನ್ಸಿ ನೋಟುಗಳು ಕೂಡ ಪತ್ತೆಯಾಗಿವೆ.

ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಗಿದೆ. ದೀಪಾವಳಿ ಜಾತ್ರೆಯ ಸಂಭ್ರಮದ ಬೆನ್ನಲ್ಲೇ ಮಾದಪ್ಪನ ಸನ್ನಿಧಿಗೆ ಹರಿದುಬಂದಿರುವ ಕೋಟ್ಯಂತರ ರೂಪಾಯಿ ಕಾಣಿಕೆ ಇದೀಗ ಗಮನ ಸೆಳೆದಿದೆ.

Leave a Reply

Your email address will not be published. Required fields are marked *