ಜನರ ಮನೆ ಬಾಗಿಲಿಗೆ ಸರ್ಕಾರ! ಕಲಘಟಗಿಯಲ್ಲಿ ಅಹವಾಲು ಆಲಿಸಿ, ಸ್ಥಳದಲ್ಲೇ ಪರಿಹಾರಕ್ಕೆ ಮುಂದಾದ ಸಚಿವ ಸಂತೋಷ್ ಲಾಡ್!

ಜನರ ಮನೆ ಬಾಗಿಲಿಗೆ ಸರ್ಕಾರ! ಕಲಘಟಗಿಯಲ್ಲಿ ಅಹವಾಲು ಆಲಿಸಿ, ಸ್ಥಳದಲ್ಲೇ ಪರಿಹಾರಕ್ಕೆ ಮುಂದಾದ ಸಚಿವ ಸಂತೋಷ್ ಲಾಡ್!
ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಬದಲು ಜನರ ಬಳಿಗೇ ಅಧಿಕಾರಿಗಳು ಬಂದರೆ ಹೇಗಿರುತ್ತೆ? ಜನರ ಸಮಸ್ಯೆಗಳನ್ನು ಸಚಿವರೇ ಖುದ್ದು ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಲು ಮುಂದಾದರೆ ಹೇಗಿರುತ್ತೆ?

ಇಂತಹ ಪ್ರಯತ್ನಕ್ಕೆ ಕಲಘಟಗಿ ವಿಧಾನಸಭಾ ಕ್ಷೇತ್ರದ ದೇವಿಕೊಪ್ಪ ಮತ್ತು ಮಿಶ್ರಿಕೋಟಿ ಗ್ರಾಮಗಳು ಸಾಕ್ಷಿಯಾಗಿವೆ.

ಪ್ರಜಾಸೇವೆ ಆಂದೋಲನಕ್ಕೆ ಜನರಿಂದ ಭಾರಿ ಸ್ಪಂದನೆ!

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ದೇವಿಕೊಪ್ಪ ಮತ್ತು ಮಿಶ್ರಿಕೋಟಿ ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳು ನಡೆದವು.

ಎರಡೂ ಕಾರ್ಯಕ್ರಮಗಳಲ್ಲಿ ನೂರಾರು ನಾಗರಿಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ತೆರೆದಿಟ್ಟರು.

ಜನರ ಅಹವಾಲು ಆಲಿಸಿದ ಸಚಿವ ಸಂತೋಷ್ ಲಾಡ್!

ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಸಚಿವ ಸಂತೋಷ್ ಲಾಡ್, ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡಿದರು.

ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಕರೆದು, ಜನರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ತ್ವರಿತವಾಗಿ ಬಗೆಹರಿಸುವಂತೆ ಸೂಚನೆ ನೀಡಿದರು.

ಜನರ ಬಳಿಗೇ ಆಡಳಿತ ತರುವ ವಿನೂತನ ಪ್ರಯತ್ನ!

ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಬದಲು, ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಅಹವಾಲುಗಳನ್ನು ಆಲಿಸುವುದು ಪ್ರಜಾಸೇವೆ ಆಂದೋಲನದ ಉದ್ದೇಶವಾಗಿದೆ.

ರಾಜ್ಯ ಸರ್ಕಾರದ ಈ ಪ್ರಯತ್ನ ಇಡೀ ದೇಶಕ್ಕೆ ಮಾದರಿಯಾಗಿದ್ದು, ಜನರ ಮನಗೆದ್ದಿದೆ. ಇಂತಹ ಕಾರ್ಯಕ್ರಮಗಳು ಸರ್ಕಾರದ ಜನಸೇವೆಯ ಬದ್ಧತೆಗೆ ಉದಾಹರಣೆಯಾಗಿವೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಅಹವಾಲುಗಳಿಗೆ ಎಷ್ಟು ಬೇಗ ಪರಿಹಾರ ಸಿಗಲಿದೆ?

ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದೀಗ ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳು ಎಷ್ಟು ಬೇಗ ವಿಲೇವಾರಿಯಾಗಲಿವೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *