ದರ್ಶನ್ ಸಂಕಷ್ಟದ ನಡುವೆ ವಿಜಯಲಕ್ಷ್ಮಿ ದೇವರ ಮೊರೆ! ಆದಿಯೋಗಿ ಸನ್ನಿಧಿಯಲ್ಲಿ ಪತ್ನಿಯ ಪ್ರಾರ್ಥನೆ.. ಇನ್ಸ್ಟಾ ಪೋಸ್ಟ್ನಲ್ಲಿದೆ ನಿಗೂಢ ಸಂದೇಶ!
ಒಂದೆಡೆ ನಟ ದರ್ಶನ್ಗೆ ಕಾನೂನು ಸಂಕಷ್ಟ.. ಮತ್ತೊಂದೆಡೆ ಪತ್ನಿ ವಿಜಯಲಕ್ಷ್ಮಿ ಅವರ ನಿರಂತರ ದೇವರ ದರ್ಶನ! ಇತ್ತೀಚೆಗಷ್ಟೇ ದರ್ಗಾಕ್ಕೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ಇದೀಗ ಆದಿಯೋಗಿ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಬಾರಿ ಅವರು ಹಂಚಿಕೊಂಡಿರುವ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಅಷ್ಟಕ್ಕೂ ಆ ಪೋಸ್ಟ್ನಲ್ಲಿ ಏನಿದೆ? ವಿಜಯಲಕ್ಷ್ಮಿ ಯಾರಿಗೆ ಆ ಸಂದೇಶ ಕೊಟ್ಟಿದ್ದಾರೆ?
ನಟ ದರ್ಶನ್ ಅವರ ಕಾನೂನು ಹೋರಾಟದ ನಡುವೆಯೇ ಪತ್ನಿ ವಿಜಯಲಕ್ಷ್ಮಿ ಮತ್ತೊಮ್ಮೆ ಆಧ್ಯಾತ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿರುವ ಪ್ರಸಿದ್ಧ ಆದಿಯೋಗಿ ಕೇಂದ್ರಕ್ಕೆ ತೆರಳಿರುವ ಅವರು, ಅಲ್ಲಿನ ದೃಶ್ಯಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
**ಆದಿಯೋಗಿ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ!**
ವಿಜಯಲಕ್ಷ್ಮಿ ಅವರ ಈ ಭೇಟಿಗಿಂತಲೂ ಅವರು ಹಂಚಿಕೊಂಡಿರುವ ಸಂದೇಶವೇ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ.
“ನಿನ್ನ ಚಿಂತೆಗಳನ್ನೆಲ್ಲ ಅವನಿಗೆ ಒಪ್ಪಿಸಿಬಿಡು.. ಅವನ ಸಮಯದಲ್ಲಿ ನಂಬಿಕೆಯಿಡು” ಎಂದು ಇಂಗ್ಲಿಷ್ನಲ್ಲಿ ಬರೆದುಕೊಂಡಿದ್ದಾರೆ.
ಈ ಸಾಲುಗಳು ಇದೀಗ ದರ್ಶನ್ ಅಭಿಮಾನಿಗಳ ನಡುವೆ ಚರ್ಚೆಗೆ ಕಾರಣವಾಗಿವೆ. ಪತಿಯ ಕಾನೂನು ಸಂಕಷ್ಟದ ನಡುವೆಯೇ ವಿಜಯಲಕ್ಷ್ಮಿ ಈ ರೀತಿಯ ಸಂದೇಶ ಹಂಚಿಕೊಂಡಿರುವುದಕ್ಕೆ ಅಭಿಮಾನಿಗಳು ತಮ್ಮದೇ ಆದ ಅರ್ಥ ಕಲ್ಪಿಸುತ್ತಿದ್ದಾರೆ.
**ದರ್ಗಾ ಬಳಿಕ ಆದಿಯೋಗಿ ದರ್ಶನ!**
ವಿಶೇಷ ಅಂದ್ರೆ ವಿಜಯಲಕ್ಷ್ಮಿ ಇತ್ತೀಚೆಗಷ್ಟೇ ದರ್ಗಾಕ್ಕೂ ಭೇಟಿ ನೀಡಿದ್ದರು. ಇದೀಗ ಆದಿಯೋಗಿ ಕೇಂದ್ರಕ್ಕೂ ತೆರಳಿರುವುದು ಗಮನ ಸೆಳೆದಿದೆ.
ಪತಿಯ ಕಷ್ಟದ ಸಮಯದಲ್ಲಿ ವಿಜಯಲಕ್ಷ್ಮಿ ಆಧ್ಯಾತ್ಮಿಕ ನಂಬಿಕೆಯಲ್ಲಿ ನೆಮ್ಮದಿ ಹುಡುಕುತ್ತಿದ್ದಾರಾ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
**ಆ ಒಂದು ಪೋಸ್ಟ್ ಹಿಂದಿನ ಅರ್ಥವೇನು?**
ದರ್ಶನ್ ಅವರ ಕಾನೂನು ಹೋರಾಟ ಮುಂದುವರಿದಿರುವ ಸಂದರ್ಭದಲ್ಲಿ ವಿಜಯಲಕ್ಷ್ಮಿ ಹಂಚಿಕೊಂಡಿರುವ ಈ ಸಂದೇಶ ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ.
ಎಲ್ಲ ಚಿಂತೆಗಳನ್ನು ದೇವರಿಗೆ ಒಪ್ಪಿಸಿ, ಸರಿಯಾದ ಸಮಯಕ್ಕಾಗಿ ಕಾಯಬೇಕು ಎಂಬ ಅರ್ಥ ನೀಡುವ ಈ ಸಾಲುಗಳು ಅವರ ಮನಸ್ಥಿತಿಯ ಪ್ರತಿಬಿಂಬವೇ ಎಂಬ ಪ್ರಶ್ನೆ ಮೂಡಿದೆ.
ಆದ್ರೆ ಈ ಪೋಸ್ಟ್ ದರ್ಶನ್ ಅವರ ಪ್ರಕರಣವನ್ನೇ ಉದ್ದೇಶಿಸಿ ಹಾಕಿದ್ದಾರಾ ಎಂಬುದರ ಬಗ್ಗೆ ವಿಜಯಲಕ್ಷ್ಮಿ ಸ್ಪಷ್ಟವಾಗಿ ಹೇಳಿಲ್ಲ.
ಒಟ್ಟಿನಲ್ಲಿ ದರ್ಗಾ ಭೇಟಿ ಬಳಿಕ ಆದಿಯೋಗಿ ದರ್ಶನ ಮಾಡಿರುವ ವಿಜಯಲಕ್ಷ್ಮಿ ಅವರ ನಡೆ ಮತ್ತು ಇನ್ಸ್ಟಾಗ್ರಾಮ್ ಸಂದೇಶ ಇದೀಗ ದರ್ಶನ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.