‘ನಾನು ಬಾಯಿ ಬಿಟ್ಟರೆ ಬಹಳಷ್ಟು ವಿಚಾರ ಆಚೆ ಬರುತ್ತೆ’ ಸಚಿವ ಬಾಲಕೃಷ್ಣ ವಿರುದ್ಧ ಕೆ.ಎನ್​ ರಾಜಣ್ಣ ಗುಡುಗು!

‘ನಾನು ಬಾಯಿ ಬಿಟ್ಟರೆ ಬಹಳಷ್ಟು ವಿಚಾರ ಆಚೆ ಬರುತ್ತೆ’ ಸಚಿವ ಬಾಲಕೃಷ್ಣ ವಿರುದ್ಧ ಕೆ.ಎನ್​ ರಾಜಣ್ಣ ಗುಡುಗು!

ಬಾಲಕೃಷ್ಣ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಮಾತಾಡಿದ ಮಾಜಿ ಸಚಿವೆ ಕೆ ಎನ್ ರಾಜಣ್ಣ ಅವರು, ನಾನು ಏನನ್ನೂ ಮಾತಾಡೋದಿಲ್ಲ, ನಾನು ಬಾಯಿ ಬಿಟ್ಟರೆ ಬಹಳಷ್ಟು ವಿಚಾರ ಆಚೆ ಬರುತ್ತೆ ಎಂದಿದ್ದಾರೆ.

ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತು ಸಚಿವ ಎಚ್.ಸಿ. ಬಾಲಕೃಷ್ಣ ನಡುವಿನ ವಾಕ್ಸಮರ ಜೋರಾಗಿದೆ. ಮನೆ ದೇವರ ಮೇಲೆ ಆಣೆ ಮಾಡಿ ಹೇಳಲಿ ಎಂಬ ಬಾಲಕೃಷ್ಣ ಅವರ ಸವಾಲಿಗೆ ಕೆ.ಎನ್. ರಾಜಣ್ಣ ಇದೀಗ ಪ್ರತಿಕ್ರಿಯಿಸಿದ್ದು, ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ನಾನು ಬಾಯ್ಬಿಟ್ಟರೆ ಬಹಳಷ್ಟು ವಿಚಾರಗಳು ಆಚೆ ಬರುತ್ತೆ ಎಂದು ಎಚ್ಚರಿಸಿದ್ದಾರೆ.

‘ನಾನು ಬಾಯಿ ಬಿಟ್ಟರೆ ಬಹಳಷ್ಟು ಆಚೆ ಬರುತ್ತೆ’
ಬಾಲಕೃಷ್ಣ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಮಾತಾಡಿದ ಮಾಜಿ ಸಚಿವೆ ಕೆ ಎನ್ ರಾಜಣ್ಣ ಅವರು, ನಾನು ಏನನ್ನೂ ಮಾತಾಡೋದಿಲ್ಲ, ನಾನು ಬಾಯಿ ಬಿಟ್ಟರೆ ಬಹಳಷ್ಟು ವಿಚಾರ ಆಚೆ ಬರುತ್ತೆ ಎಂದಿದ್ದಾರೆ. ನೀವು ಮಿನಿಸ್ಟರ್ ಆಗಿದ್ದಾಗ ಚೆನ್ನಾಗಿ ಮಾಡಿಕೊಂಡಿದ್ದೀರಿ ಎಂಬ ಆರೋಪಕ್ಕೂ ತಿರುಗೇಟು ನೀಡಿದ್ದು, ನಾನು ಮಾಡಿಕೊಂಡಿದ್ದೀನೋ ಅಥವಾ ಅವನು ಮಾಡಿಕೊಂಡಿದ್ದಾನೋ? ಆಯ್ತಪ್ಪಾ, ಅವನ ಇಲಾಖೆನಲ್ಲಿ ಏನು ಸಾಧನೆ ಮಾಡಿದ್ದಾನೆ ಹೇಳಲಿ ಎಂದು ರಾಜಣ್ಣ ಸವಾಲ್ ಹಾಕಿದ್ದಾರೆ..

ನಿನ್ನೆ ಕೂಡ ಬಾಲಕೃಷ್ಣ ವಿರುದ್ಧ ಏಕವಚನದಲ್ಲೇ ಕೆ.ಎನ್. ರಾಜಣ್ಣ ವಾಗ್ದಾಳಿ ನಡೆಸಿದ್ರು. ಅವನು ತಮಗೆ ಉತ್ತರ ಕೊಡಲು ಯೋಗ್ಯರಲ್ಲ ಎಂದು ಹೇಳಿದ್ದಾರೆ. ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಾವು ಈ ವಿಷಯವನ್ನು ಮೊದಲೇ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದು, ಇನ್ನೂ 25-30 ಸ್ಟಿಂಗ್ ವಿಡಿಯೋಗಳಿರಬೇಕು ಮತ್ತು ಸಂದರ್ಭಕ್ಕೆ ತಕ್ಕಂತೆ ಹೊರಬರಲಿವೆ ಎಂದು ತಿಳಿಸಿದ್ದಾರೆ.

‘ಅಹಿಂದಾ ಸಮಾವೇಶ ಮಾಡ್ತೀವಿ’
ಅಹಿಂದಾ ಸಮಾವೇಶ ವಿಚಾರದ ಬಗ್ಗೆ ಮಾತಾಡಿದ ರಾಜಣ್ಣ, ಮಾಡೋಣ, ಕಾಂಗ್ರೆಸ್‌ಗೆ ಶಕ್ತಿನೇ ಅವರು ಇರೋದು ಆ ಸಮಾವೇಶನೇ ಶಕ್ತಿ ಬರ್ತಕ್ಕಂತದ್ದು. ಮುಂದೆ ಮಾಡೋಣ ಎಂದ್ರು. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ಆಗಿರೋದು ಅಹಿಂದಾಗೆ ಸಿಕ್ಕ ಬಲ ಎಂಬ ವಿಚಾರವಾಗಿಯೂ ಮಾತಾಡಿದ ರಾಜಣ್ಣ, ಹರಿಪ್ರಸಾದ್ ಅವರು ಅಹಿಂದಾದಿಂದ ಜಾಯಿನ್ ಆಗಿರೋದು. ಹೌದು, ಹೌದು. ಈ KPCC ಅಧ್ಯಕ್ಷರಾಗಿರೋದ್ರಿಂದ ಮತ್ತಷ್ಟು ಬಲ ಬಂದಿದೆ. ಅವರು ಕೂಡ ಅಹಿಂದಾ ವಿಚಾರವಾಗಿ ಸಮಾವೇಶಗಳನ್ನ ಮಾಡಿದ್ರು ಎಂದ್ರು.

ಹರಿಪ್ರಸಾದ್ ಅವರು, ಅವರು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕಾರಣ ಪ್ರಾರಂಭ ಮಾಡಿ, ರಾಷ್ಟ್ರ ಮಟ್ಟದಲ್ಲೂ ಕೂಡ ಅವರು ಜನರಲ್ ಸೆಕ್ರೆಟರಿ ACCನಲ್ಲಿ ಆಗಿ, ಬಹಳಷ್ಟು ರಾಜ್ಯಗಳ ಉಸ್ತುವಾರಿಗಳನ್ನೆಲ್ಲ ನಿರ್ವಹಿಸಿರೋ ಅನುಭವ ಅವರಿಗಿದ್ದು, ಅವರು ಒಬ್ಬ ಒಳ್ಳೆ ಸಂಘಟನೆಕಾರನೂ ಕೂಡ ಎಂದಿದ್ದಾರೆ.

ಅಹಿಂದ ನಾಯಕರು ಹುಬ್ಬಳ್ಳಿಯಲ್ಲಿ ಭೇಟಿ ಆಗಿದ್ದಾರೆ , ಅದರಲ್ಲಿ ಏನು ವಿಶೇಷತೆ ಇಲ್ಲ ಅಂದ್ರು. ಈಗ ನಾನು ನಿಮ್ಮನ್ನೆಲ್ಲ ಭೇಟಿ ಮಾಡ್ತೀನಿ, ಏನು ವಿಶೇಷತೆ ಇರುತ್ತದೆ? ನೋ, ನೋ, ನೋ, ಸತೀಶ್ ಅವರು ಆಗಲಿ, ಸಿದ್ದರಾಮಯ್ಯನವರು ಆಗಲಿ, ವೈಯಕ್ತಿಕವಾಗಿ ಯಾವುದೇ ವ್ಯತ್ಯಾಸಗಳಿಲ್ಲ ಅವರಲ್ಲಿ ಅವರ ಉದ್ದೇಶ, ಇವರ ಉದ್ದೇಶ ಎಲ್ಲವೂ ಕೂಡ ಇರುತ್ತವೆ. ಕೆಲವೊಮ್ಮೆ ಈ ಕಮ್ಯುನಿಕೇಶನ್ ಗ್ಯಾಪ್ ಅಲ್ಲಿ ಕೆಲವು ಸರಿ ಭೇಟಿ ಮಾಡಲಿಲ್ಲ. ಅಂದಾಗ ಕ್ಷಣಕ್ಕೆ ನೀವೇ ಎಷ್ಟು ಹತ್ತಾರು ಕಥೆಗಳನ್ನು ಕಟ್ಟಿಬಿಡ್ತೀರಿ. ಎಲ್ಲವೂ ಸುಳ್ಳಾಗಲ್ಲ, ಎಲ್ಲವೂ ಸತ್ಯ ಆಗಲ್ಲ ಎಂದಿದ್ದಾರೆ.

ವಿವಾದಕ್ಕೆ ಕಾರಣವೇನು?
ಕೆ.ಎನ್. ರಾಜಣ್ಣ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಈ ಭೇಟಿಯ ಹಿನ್ನೆಲೆಯಲ್ಲಿ ರಾಜಣ್ಣ ಹಾಗೂ ಅವರ ಪುತ್ರ ಜೆಡಿಎಸ್‌ನತ್ತ ಮುಖ ಮಾಡುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಕುರಿತು ಸಚಿವ ಬಾಲಕೃಷ್ಣ ಪ್ರಶ್ನೆ ಎತ್ತಿದ್ದರು. ಇದರಿಂದ ಸಿಟ್ಟಿಗೆದ್ದ ರಾಜಣ್ಣ, ಪಕ್ಷಾಂತರದ ವದಂತಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾ

ಬಾಲಕೃಷ್ಣ ಅಲ್ಲ, ಅವನು ಬರೀ ಬಾಲ!
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್. ರಾಜಣ್ಣ, ಬಾಲಕೃಷ್ಣ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕೃಷ್ಣನನ್ನು ಕೇವಲ ಬಾಲ ಎಂದು ವ್ಯಂಗ್ಯವಾಡಿರುವ ರಾಜಣ್ಣ, ಅವರ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ ಎಂದಿದ್ದಾರೆ.

ನಾವೇಕೆ ಜೆಡಿಎಸ್‌ಗೆ ಹೋಗಬೇಕು?
ತಮ್ಮ ಪುತ್ರ ರಾಜೇಂದ್ರ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ರಾಷ್ಟ್ರಮಟ್ಟದ ಸಹಕಾರಿ ರಸಗೊಬ್ಬರ ಸಂಸ್ಥೆ ಕ್ರಿಬ್ಕೋದ ನಿರ್ದೇಶಕರೂ ಆಗಿದ್ದಾರೆ. ಸಂಸ್ಥೆಯ ಆಡಳಿತಾತ್ಮಕ ಕಾರ್ಯಗಳಿಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸಚಿವರನ್ನು ಭೇಟಿಯಾದ ಮಾತ್ರಕ್ಕೆ ಪಕ್ಷಾಂತರ ಮಾಡುತ್ತಾರೆ ಎಂದು ಅರ್ಥೈಸುವುದು ಸರಿಯಲ್ಲ ಎಂಬುದು ರಾಜಣ್ಣ ಅವರ ವಾದವಾಗಿದೆ

Leave a Reply

Your email address will not be published. Required fields are marked *