**ಬಿಗ್‌ಬಾಸ್ ಮನೆಯಲ್ಲಿ ಗುಳ್ಳೆನರಿಯ ಆಟ ಶುರು!ತನ್ನದೇ ತಂಡಕ್ಕೆ ದ್ರೋಹ ಬಗೆಯಲಿರುವ ಆ ಸ್ಪರ್ಧಿ ಯಾರು?**
**ಬಿಗ್ ಬಾಸ್ ಕನ್ನಡ ಸೀಸನ್ 13:** ಇಷ್ಟು ದಿನ ಗೆಲುವಿಗಾಗಿ ಹೋರಾಡುತ್ತಿದ್ದ ಸ್ಪರ್ಧಿಗಳಿಗೆ ಇದೀಗ ಬಿಗ್ ಬಾಸ್ ವಿಚಿತ್ರ ಸವಾಲೊಂದನ್ನು ನೀಡಿದ್ದಾರೆ. ಮನೆಯೊಳಗೆ ನಂಬಿಕೆಯ ಮುಖವಾಡ ಧರಿಸಿದ ಗುಳ್ಳೆನರಿಯ ಆಟ ಶುರುವಾಗಿದೆ.

ಅಚ್ಚರಿಯ ಸಂಗತಿ ಏನಂದ್ರೆ, ಈ ಗುಳ್ಳೆನರಿಯ ಮೊದಲ ಟಾಸ್ಕ್ ಎದುರಾಳಿ ತಂಡವನ್ನು ಸೋಲಿಸುವುದಲ್ಲ, ಬದಲಾಗಿ ತನ್ನದೇ ತಂಡವನ್ನು ಸೋಲಿಸುವುದು!
**ಅಧಿಕಾರಕ್ಕಾಗಿ ಗುಳ್ಳೆನರಿಯ ಚಾಣಾಕ್ಷ ಆಟ!**
‘ಕಾಡಿನಲ್ಲಿ ಅಧಿಕಾರ ಪಡೆಯೋದಕ್ಕೆ ಒಂದು ಪ್ರಾಣಿ ತನ್ನ ಚಾಣಾಕ್ಷ ಯುಕ್ತಿಯನ್ನು ಬಳಸಿಕೊಂಡು, ನಂಬಿಕೆಯ ಮುಖವಾಡ ಧರಿಸಿ, ದ್ರೋಹ ಬಗೆದು ಅಧಿಕಾರ ಪಡೆಯುವುದರಲ್ಲಿ ಯಶಸ್ವಿಯಾಗುತ್ತೆ. ಆ ಪ್ರಾಣಿಯೇ ಗುಳ್ಳೆನರಿ’ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ.
ಈ ಘೋಷಣೆಯೊಂದಿಗೆ ಬಿಗ್ ಬಾಸ್ ಮನೆಯ ಆಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
**ಗೆಲ್ಲೋದಲ್ಲ, ಸೋಲಿಸೋದೇ ಮೊದಲ ಟಾಸ್ಕ್!**
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ತಂಡವನ್ನು ಗೆಲ್ಲಿಸಲು ಹರಸಾಹಸ ಪಡುತ್ತಾರೆ. ಆದರೆ ಗುಳ್ಳೆನರಿಯ ಪಾತ್ರಧಾರಿಗೆ ಮಾತ್ರ ಬಿಗ್ ಬಾಸ್ ತದ್ವಿರುದ್ಧವಾದ ಟಾಸ್ಕ್ ನೀಡಿದ್ದಾರೆ. ತನ್ನದೇ ತಂಡವನ್ನು ಸೋಲಿಸುವ ಸವಾಲು ನೀಡಿದ್ದಾರೆ.
ತಂಡದ ಸದಸ್ಯರಿಗೆ ಅನುಮಾನ ಬಾರದಂತೆ ಗುಳ್ಳೆನರಿ ತನ್ನ ಆಟವನ್ನು ಹೇಗೆ ಆಡಲಿದೆ ಎಂಬುದೇ ಸದ್ಯದ ಕುತೂಹಲ.
**ಮನೆಯೊಳಗಿನ ಆ ಗುಳ್ಳೆನರಿ ಯಾರು?**
ಎಲ್ಲರ ಜೊತೆ ಬೆರೆಯುತ್ತಾ, ನಂಬಿಕೆ ಗಳಿಸುತ್ತಾ, ತನ್ನದೇ ತಂಡದ ಸೋಲಿಗೆ ಕಾರಣವಾಗಲಿರುವ ಆ ಸ್ಪರ್ಧಿ ಯಾರು? ಗುಳ್ಳೆನರಿಯ ತಂತ್ರಕ್ಕೆ ಮನೆಯ ಸದಸ್ಯರು ಬಲಿಯಾಗುತ್ತಾರಾ? ಅಥವಾ ಅದರ ಅಸಲಿ ಮುಖವನ್ನು ಬಯಲು ಮಾಡುತ್ತಾರಾ?
**ನಂಬಿಕೆ, ದ್ರೋಹ, ಅಧಿಕಾರದ ಆಟ!**
ಬಿಗ್ ಬಾಸ್ ಮನೆಯಲ್ಲಿ ಇದೀಗ ದೈಹಿಕ ಸಾಮರ್ಥ್ಯದ ಜೊತೆಗೆ ಬುದ್ಧಿವಂತಿಕೆಗೂ ಸವಾಲು ಎದುರಾಗಿದೆ. ಸ್ನೇಹ, ನಂಬಿಕೆ ಹಾಗೂ ಸಂಬಂಧಗಳ ನಡುವೆ ಗುಳ್ಳೆನರಿಯ ಆಟ ಯಾವ ರೀತಿಯ ಬದಲಾವಣೆ ತರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಗುಳ್ಳೆನರಿಯ ತಂತ್ರಕ್ಕೆ ಬಿಗ್ ಬಾಸ್ ಮನೆಯ ಸದಸ್ಯರು ಸೋಲುತ್ತಾರಾ? ಅಥವಾ ಗುಳ್ಳೆನರಿಗೇ ಉಲ್ಟಾ ಹೊಡೆಯುತ್ತಾ ಅದರ ಆಟ? ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.