BMTCಯಲ್ಲಿ ₹3.97 ಕೋಟಿ ಹಗರಣ! ಬಿಡಿಭಾಗಗಳೇ ಇಲ್ಲ..
ಆದ್ರೂ ಕೋಟಿ ಕೋಟಿ ಬಿಲ್! 21 ಮಂದಿ ವಿರುದ್ಧ FIR**
**ಬೆಂಗಳೂರು:** ಬಿಎಂಟಿಸಿ ಬಸ್ಗಳಿಗೆ ಬಿಡಿಭಾಗಗಳನ್ನ ಪೂರೈಕೆ ಮಾಡಲಾಗಿದೆ ಅಂತ ದಾಖಲೆ ಇದೆ. ಬಿಲ್ಗಳೂ ಇವೆ. ಆದ್ರೆ ಗೋದಾಮಿನಲ್ಲಿ ಪರಿಶೀಲನೆ ಮಾಡಿದಾಗ ಮಾತ್ರ ಕೋಟಿ ಕೋಟಿ ರೂಪಾಯಿ ಮೌಲ್ಯದ ಬಿಡಿಭಾಗಗಳ ಲೆಕ್ಕವೇ ಸಿಗುತ್ತಿಲ್ಲ! ಅಷ್ಟಕ್ಕೂ ಆ ಬಿಡಿಭಾಗಗಳು ಎಲ್ಲಿಗೆ ಹೋದವು? ಪೂರೈಕೆಯಾಗದ ವಸ್ತುಗಳಿಗೆ ಹಣ ಪಾವತಿಯಾಗಿದ್ದು ಹೇಗೆ? ಈ ಪ್ರಶ್ನೆಗಳ ಬೆನ್ನಲ್ಲೇ ಬಿಎಂಟಿಸಿಯಲ್ಲಿ ಬರೋಬ್ಬರಿ ₹3.97 ಕೋಟಿ ಮೌಲ್ಯದ ಹಗರಣ ನಡೆದಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಡೆದಿರುವ ಈ ಅಕ್ರಮದ ಆರೋಪ ಇದೀಗ ದೊಡ್ಡ ಸಂಚಲನ ಸೃಷ್ಟಿಸಿದೆ. ಬಿಎಂಟಿಸಿ ಅಧಿಕಾರಿಗಳು, ನೌಕರರು ಹಾಗೂ ಎರಡು ಖಾಸಗಿ ಪೂರೈಕೆದಾರ ಕಂಪನಿಗಳ ಮಾಲೀಕರು ಸೇರಿದಂತೆ ಒಟ್ಟು 21 ಮಂದಿಯ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
**ಗೋದಾಮಿನ ಲೆಕ್ಕ ಪರಿಶೀಲಿಸಿದಾಗ ಬಯಲಾಯ್ತು ಅಕ್ರಮ!**
2021ರಿಂದ 2026ರ ಅವಧಿಯಲ್ಲಿ ಈ ಅಕ್ರಮಗಳು ನಡೆದಿವೆ ಎನ್ನಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಬಿಎಂಟಿಸಿಯ ಭದ್ರತೆ ಮತ್ತು ಜಾಗೃತ ದಳದ ಅಧಿಕಾರಿ ಪರಿಮಳಾ ಎಲ್. ನಾಯಕ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಎಂಟಿಸಿಯ ‘ಸೆಂಟ್ರಲ್ ಸ್ಟೋರ್ಸ್-01’ ಗೋದಾಮಿನಲ್ಲಿ ದಾಸ್ತಾನು ಪರಿಶೀಲನೆ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿಬೀಳುವಂತಹ ವ್ಯತ್ಯಾಸಗಳು ಕಂಡುಬಂದಿವೆ.
**ಒಟ್ಟು 2,820 ಬಿಡಿಭಾಗಗಳಿಗೆ ಸಂಬಂಧಿಸಿದಂತೆ ₹3,97,83,142 ಮೌಲ್ಯದ ವ್ಯತ್ಯಾಸ ಪತ್ತೆಯಾಗಿದೆ.**
ಕೆಲವು ಬಿಡಿಭಾಗಗಳು ವಾಸ್ತವವಾಗಿ ಪೂರೈಕೆಯಾಗದೇ ಇದ್ದರೂ, ಅವುಗಳನ್ನ ಪೂರೈಕೆ ಮಾಡಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಆ ಸಾಮಗ್ರಿಗಳನ್ನ ವಿವಿಧ ಬಿಎಂಟಿಸಿ ಡಿಪೋಗಳು ಹಾಗೂ ಕಾರ್ಯಾಗಾರಗಳಿಗೆ ವಿತರಿಸಲಾಗಿದೆ ಎಂದು ತೋರಿಸಲು ದಾಖಲೆಗಳನ್ನ ತಿರುಚಲಾಗಿದೆ ಎನ್ನಲಾಗಿದೆ.
**ಕಂಪ್ಯೂಟರ್ನಲ್ಲೇ ನಡೆದಿತ್ತಾ ಕೋಟಿ ಕೋಟಿ ಗೋಲ್ಮಾಲ್?**
ಈ ಪ್ರಕರಣದಲ್ಲಿ ಮತ್ತೊಂದು ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಬಿಎಂಟಿಸಿಯ ಕಂಪ್ಯೂಟರ್ ವ್ಯವಸ್ಥೆಯಲ್ಲಿರುವ ‘ಇಂಡೆಂಟ್ ಇಲ್ಲದೆ ಸಾಮಗ್ರಿ ವಿತರಣೆ’ ಎಂಬ ಆಯ್ಕೆಯನ್ನ ದುರ್ಬಳಕೆ ಮಾಡಿಕೊಂಡು ದಾಸ್ತಾನು ದಾಖಲೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬಿಡಿಭಾಗಗಳನ್ನ ಹಿಂದಿನ ದಿನಾಂಕಗಳಲ್ಲೇ ವಿತರಿಸಿದಂತೆ ತೋರಿಸಲು ನಕಲಿ ರಸೀದಿಗಳನ್ನ ಸೃಷ್ಟಿಸಲಾಗಿದೆ. ವಾರ್ಷಿಕ ದಾಸ್ತಾನು ಪರಿಶೀಲನೆಯ ಸಂದರ್ಭದಲ್ಲಿ ಅಕ್ರಮಗಳು ಪತ್ತೆಯಾಗದಂತೆ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ.
ಇಷ್ಟೇ ಅಲ್ಲ, ಪೂರೈಕೆಯಾಗದ ವಸ್ತುಗಳಿಗೂ ಬಿಲ್ ಸೃಷ್ಟಿಸಿ, ಅವುಗಳನ್ನ ಸ್ವೀಕರಿಸಲಾಗಿದೆ ಎಂದು ಇನ್ವೆಂಟರಿ ಮ್ಯಾನೇಜ್ಮೆಂಟ್ ಸಿಸ್ಟಮ್ನಲ್ಲಿ ನಮೂದು ಮಾಡಲಾಗಿದೆ ಎಂಬ ಆರೋಪವೂ ಇದೆ.
**ಬಸ್ ಬಿಡಿಭಾಗಗಳ ಬದಲಿಗೆ ತಪ್ಪು ಸಾಮಗ್ರಿಗಳ ಪೂರೈಕೆ!**
ಹಗರಣದ ಆರೋಪ ಕೇವಲ ನಕಲಿ ಬಿಲ್ಗಳಿಗೆ ಸೀಮಿತವಾಗಿಲ್ಲ. ಪೂರೈಕೆಯಾದ ಕೆಲವು ಸಾಮಗ್ರಿಗಳ ಗುಣಮಟ್ಟ ಮತ್ತು ಪ್ರಮಾಣದಲ್ಲೂ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ.
ನಿಗದಿತ ಉದ್ದಕ್ಕಿಂತ ಕಡಿಮೆ ಉದ್ದದ ಮಾಸ್ಕಿಂಗ್ ಟೇಪ್ ರೋಲ್ಗಳನ್ನ ಪೂರೈಸಲಾಗಿತ್ತು. ಕೈಗಾರಿಕಾ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಲ್ಲಿ ಅಗತ್ಯಕ್ಕಿಂತ ಕಡಿಮೆ ಸಾಮಗ್ರಿಗಳಿದ್ದವು. ಕೆಲವು ಪೆಟ್ಟಿಗೆಗಳಲ್ಲಿ ಅವಧಿ ಮುಗಿಯುವ ಹಂತದಲ್ಲಿದ್ದ ಅಥವಾ ಬಳಕೆಗೆ ಯೋಗ್ಯವಲ್ಲದ ಔಷಧಗಳೂ ಪತ್ತೆಯಾಗಿವೆ.
ಇನ್ನೂ ಅಚ್ಚರಿಯ ವಿಚಾರ ಅಂದ್ರೆ, ಬಸ್ಗಳಿಗೆ ಅಗತ್ಯವಿದ್ದ ‘ಲೋ-ಏರ್-ಪ್ರೆಶರ್ ಸ್ವಿಚ್’ಗಳ ಬದಲಿಗೆ ಪ್ಯಾನೆಲ್ ಸ್ವಿಚ್ಗಳು ಮತ್ತು ಇಗ್ನಿಷನ್ ಸ್ವಿಚ್ಗಳನ್ನ ಪೂರೈಸಲಾಗಿತ್ತು ಎನ್ನಲಾಗಿದೆ.
ಈ ತಪ್ಪು ಸಾಮಗ್ರಿಗಳನ್ನ ತಿರಸ್ಕರಿಸಿದ್ದರೂ, ದಾಖಲೆಗಳಲ್ಲಿ ಅವುಗಳನ್ನ ಸ್ವೀಕರಿಸಲಾಗಿದೆ ಎಂದು ತೋರಿಸಿರುವ ಆರೋಪ ಕೇಳಿಬಂದಿದೆ.
**21 ಮಂದಿ ವಿರುದ್ಧ FIR.. ಮುಂದೇನು?**
ಪ್ರಕರಣದಲ್ಲಿ ನಕಲಿ ಸಹಿಗಳು, ಕೃತಕ ಪೂರೈಕೆ ದಾಖಲೆಗಳು, ದಾಸ್ತಾನು ನಮೂದುಗಳ ತಿರುಚಾಟ ಹಾಗೂ ಮೋಸದ ಪಾವತಿ ಕ್ಲೈಮ್ಗಳ ಆರೋಪಗಳು ಕೇಳಿಬಂದಿವೆ.
ಮೆಸರ್ಸ್ ಗಜಾನನ ಇಂಜಿನಿಯರಿಂಗ್ ವರ್ಕ್ಸ್ ಮತ್ತು ಮೆಸರ್ಸ್ ಜಿ.ಎಸ್. ಅಂಡ್ ಕಂಪನಿ ಎಂಬ ಎರಡು ಪೂರೈಕೆದಾರ ಸಂಸ್ಥೆಗಳ ಮಾಲೀಕರು ಹಾಗೂ ಬಿಎಂಟಿಸಿಯ ಕೆಲವು ಸಿಬ್ಬಂದಿ ನಡುವೆ ಒಳಒಪ್ಪಂದ ನಡೆದಿರಬಹುದು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ನೌಕರರು, ಮೇಲ್ವಿಚಾರಕರು ಹಾಗೂ ಪೂರೈಕೆದಾರರ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಲಾಗಿದೆ.
**ಅಷ್ಟಕ್ಕೂ ₹3.97 ಕೋಟಿ ಮೌಲ್ಯದ ಬಿಡಿಭಾಗಗಳ ಲೆಕ್ಕದಲ್ಲಿ ವ್ಯತ್ಯಾಸ ಉಂಟಾಗಿದ್ದು ಹೇಗೆ? ನಕಲಿ ಬಿಲ್ಗಳ ಹಿಂದೆ ಯಾರಿದ್ದಾರೆ? ಈ ಅಕ್ರಮದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರಾ?**
ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ. ಸದ್ಯಕ್ಕೆ 21 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರೋಪಗಳು ಇನ್ನೂ ಸಾಬೀತಾಗಬೇಕಿದೆ.