ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆಶಾ ಕಾರ್ಯಕರ್ತೆಯ ಮಗ ಅಪಘಾ*ತದಲ್ಲಿ ಸಾ*ವು!!
ತಮ್ಮ ದುಡಿಮೆಗೆ ತಕ್ಕ ಗೌರವಧನ ಸಿಗಬೇಕೆಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸುತ್ತಿದ್ದ ಆಶಾ ಕಾರ್ಯಕರ್ತೆ ರೂಪ ಅವರಿಗೆ ಬರಸಿಡಿಲಿನಂತಹ ಸುದ್ದಿ ಬಂದೆರಗಿದೆ. ತಾಯಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾಗಲೇ ಊರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ 21 ವರ್ಷದ ಮಗ ಸಾವನ್ನಪ್ಪಿದ್ದು, ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾರ್ಜುವಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ರೂಪ ಅವರ ಕುಟುಂಬದಲ್ಲಿ ಘೋರ ದುರಂತ ಸಂಭವಿಸಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೂಪ ಅವರು ತಮ್ಮ ಮಗನನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಾರೆ.ಒಂದೆಡೆ ಹಕ್ಕಿಗಾಗಿ ಹೋರಾಟ, ಮತ್ತೊಂದೆಡೆ ಮಗನ ಸಾವಿನ ಸುದ್ದಿ!

ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೂಪ ಭಾಗಿಯಾಗಿದ್ದರು.
ಆದರೆ ಬುಧವಾರ (ನ.25) ಸಂಜೆ ಲಕ್ಷ್ಮೀಪುರ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ರೂಪ ಅವರ 21 ವರ್ಷದ ಮಗ ಸುಜಯ್ ಮೃತಪಟ್ಟಿದ್ದಾನೆ.ಪ್ರತಿಭಟನೆ ಬಿಟ್ಟು ಊರಿಗೆ ಮರಳಿದ ತಾಯಿ!

ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರೂಪ ಅವರು ಪ್ರತಿಭಟನೆಯಿಂದ ಹೊರಟು ಬೆಂಗಳೂರಿನಿಂದ ಆಲೂರಿಗೆ ವಾಪಸಾಗಿದ್ದಾರೆ.
ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕೆಂದು ಹೋರಾಟ ನಡೆಸುತ್ತಿದ್ದ ತಾಯಿಗೆ ಇದೀಗ ಮಗನನ್ನು ಕಳೆದುಕೊಂಡ ನೋವು ಎದುರಾಗಿದೆ. ಸುಜಯ್ನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆಲೂರು ಆಸ್ಪತ್ರೆಯಲ್ಲಿ ಸುಜಯ್ ಮೃತದೇಹ!

ಸುಜಯ್ನ ಮೃತದೇಹವನ್ನು ಆಲೂರು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮುಂದಿನ ಪ್ರಕ್ರಿಯೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಒಂದೆಡೆ ತಮ್ಮ ಬದುಕಿನ ಭದ್ರತೆಗಾಗಿ ಸಾವಿರಾರು ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಅದೇ ಹೋರಾಟದಲ್ಲಿ ಭಾಗಿಯಾಗಿದ್ದ ರೂಪ ಅವರ ಬದುಕಿನಲ್ಲಿ ತುಂಬಲಾರದ ನಷ್ಟ ಸಂಭವಿಸಿದೆ. ಮಗನನ್ನು ಕಳೆದುಕೊಂಡ ತಾಯಿಯ ನೋವು ಮನಕಲಕುವಂತಿದೆ.