ಶಾರುಖ್-ರಣ್ವೀರ್ ಸಿಂಗ್ ಧರಿಸಿದ್ದ ವಾಚಿನ ಬೆಲೆ ಎಷ್ಟು ಕೋಟಿ ಗೊತ್ತೆ?

ಶಾರುಖ್-ರಣ್ವೀರ್ ಸಿಂಗ್ ಧರಿಸಿದ್ದ ವಾಚಿನ ಬೆಲೆ ಎಷ್ಟು ಕೋಟಿ ಗೊತ್ತೆ?

ಭಾರತದ ಅತ್ಯಂತ ಶ್ರೀಮಂತ ನಟರೂ ಸಹ ಹೌದು ಶಾರುಖಾ ಖಾನ್. ತಮ್ಮ ಶ್ರೀಮಂತಿಕೆಗೆ ತಕ್ಕಂತೆ ಜೀವನ ಶೈಲಿಯೂ ಬಲು ಐಶಾರಾಮಿಯಾಗಿಟ್ಟುಕೊಂಡಿದ್ದಾರೆ ಕಿಂಗ್ ಖಾನ್. ಇತ್ತೀಚೆಗೆ ಶಾರುಖ್ ಖಾನ್, ಗ್ಲೋಬಲ್ ಪೀಸ್ ಹಾನರ್ಸ್ 2026 ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಅವರು ಧರಿಸಿದ್ದ ದುಬಾರಿ ವಾಚು ಗಮನ ಸೆಳೆಯಿತು. ಅದೇ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ರಣ್ವೀರ್ ಸಿಂಗ್ ವಾಚು ಸಹ ಸಖತ್ ಗಮನ ಸೆಳೆಯಿತು.

ಶಾರುಖ್ ಖಾನ್, ಬಾಲಿವುಡ್​​ನ ಟಾಪ್ ನಟ. ಅವರಷ್ಟು ದೊಡ್ಡ ಸಂಭಾವನೆ ಪಡೆವ ನಟ ಭಾರತದಲ್ಲಿ ಇಲ್ಲ ಎನ್ನಲಾಗುತ್ತದೆ. ಭಾರತದ ಅತಿ ಶ್ರೀಮಂತ ನಟರೂ ಸಹ ಹೌದು ಶಾರುಖಾ ಖಾನ್. ತಮ್ಮ ಶ್ರೀಮಂತಿಕೆಗೆ ತಕ್ಕಂತೆ ಜೀವನ ಶೈಲಿಯೂ ಬಲು ಐಶಾರಾಮಿಯಾಗಿಟ್ಟುಕೊಂಡಿದ್ದಾರೆ ಕಿಂಗ್ ಖಾನ್. ಇತ್ತೀಚೆಗೆ ಶಾರುಖ್ ಖಾನ್, ಗ್ಲೋಬಲ್ ಪೀಸ್ ಹಾನರ್ಸ್ 2026 ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಅವರು ಧರಿಸಿದ್ದ ದುಬಾರಿ ವಾಚು ಗಮನ ಸೆಳೆಯಿತು. ಅದೇ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ರಣ್ವೀರ್ ಸಿಂಗ್ ವಾಚು ಸಹ ಸಖತ್ ಗಮನ ಸೆಳೆಯಿತು.

ಮುಂಬೈನ ಐತಿಹಾಸಿಕ ಗೇಟ್‌ವೇ ಆಫ್ ಇಂಡಿಯಾನಲ್ಲಿ ನವೆಂಬರ್ 21ರಂದು ಗ್ಲೋಬಲ್ ಪೀಸ್ ಹಾನರ್ಸ್ 2026 ಕಾರ್ಯಕ್ರಮ ನಡೆದಿತ್ತು ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅನಂತ್ ಅಂಬಾನಿ, ರಣ್ವೀರ್ ಸಿಂಗ್, ಸದ್ಗುರು ಸೇರಿದಂತೆ ಇನ್ನೂ ಹಲವಾರು ತಾರೆಯರು, ಉದ್ಯಮಿಗಳು, ಕ್ರೀಡಾಪಟುಗಳು ಭಾಗಿ ಆಗಿದ್ದರು. ಹಲವರು ಅಂದು ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದರು. ಅವರಲ್ಲಿ ಶಾರುಖ್ ಖಾನ್ ಸಹ ಒಬ್ಬರು. ಈ ವೇಳೆ ಅವರು ಧರಿಸಿದ್ದ ವಾಚನ್ನು ಹಲವರು ಗುರುತಿಸಿದ್ದು, ವಾಚಿನ ಬೆಲೆ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶಾರುಖ್ ಖಾನ್, ‘ಆಡೆಮಾರ್ಸ್ ಪಿಗ್ವೆಟ್’ (Audemars Piguet) ಸಂಸ್ಥೆಯ ವಿಶೇಷ ವಿನ್ಯಾಸದ ವಾಚನ್ನು ಧರಿಸಿದ್ದರು. ‘ಆಡೆಮಾರ್ಸ್ ಪಿಗ್ವೆಟ್’ನ ‘ರಾಯಲ್ ಓಕ್ ಜಂಬೋ ಎಕ್ಸ್‌ಟ್ರಾ-ಥಿನ್ ಟೈಟಾನಿಯಂ ಬಿಎಂಜಿ ಓಪನ್‌ವರ್ಕ್ಡ್ ಡಯಲ್’ ವಾಚ್ ಅನ್ನು ಶಾರುಖ್ ಖಾನ್ ಕಾರ್ಯಕ್ರಮದಲ್ಲಿ ಧರಿಸಿದ್ದರು. ಓಪನ್‌ವರ್ಕ್ಡ್ ವಿನ್ಯಾಸ ಮತ್ತು ವಿಶಿಷ್ಟ ಟೈಟಾನಿಯಂ ನಿರ್ಮಾಣವನ್ನು ಹೊಂದಿರುವ ಈ ಈ ವಾಚ್‌ನ ಮಾರುಕಟ್ಟೆ ಬೆಲೆ ಸುಮಾರು 3.49 ಕೋಟಿ ರೂಪಾಯಿಗಳು.

ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ‘ಧುರಂಧರ್’ ಸ್ಟಾರ್ ರಣ್ವೀರ್ ಸಿಂಗ್ ಸಹ ದುಬಾರಿ ವಾಚು ಧರಿಸಿ ಕಾಣಿಸಿಕೊಂಡರು. ಕಂದು ಬಣ್ಣದ ಡಯಲ್ ಹೊಂದಿರುವ ರೋಸ್ ಗೋಲ್ಡ್ ‘ಪ್ಯಾಟೆಕ್ ಫಿಲಿಪ್ ಅಕ್ವಾನಾಟ್ ಕ್ರೋನೋಗ್ರಾಫ್’ (ರೆಫರೆನ್ಸ್ 5968R-001) ವಾಚ್ ಧರಿಸಿ ಕಾಣಿಸಿಕೊಂಡರು. ಅಪರೂಪದ ಬಣ್ಣ ಮತ್ತು ವಿನ್ಯಾಸ ಹೊಂದಿರುವ ಈ ವಾಚಿನ ಮಾರುಕಟ್ಟೆ ಬೆಲೆ ಸುಮಾರು 1.47 ಕೋಟಿ ರೂಪಾಯಿಗಳು. ಈ ಇಬ್ಬರು ಬಾಲಿವುಡ್ ತಾರೆಯರು ಧರಿಸಿದ್ದ ವಾಚ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 4.96 ಕೋಟಿ ರೂಪಾಯಿ.

ಅದೇ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಉದ್ಯಮಿ ಅನಂತ್ ಅಂಬಾನಿ ಅವರ ವಿಶ್ವದಲ್ಲೇ ಅಪರೂಪದ ಮತ್ತು ವಿಶ್ವದಲ್ಲೇ ಅತ್ಯಂತ ದುಬಾರಿ ವಾಚುಗಳ ಸಂಗ್ರಹ ಹೊಂದಿರುವ ವ್ಯಕ್ತಿ ಆಗಿದ್ದಾರೆ. ಅವರ ಬಳಿ ಇರುವಷ್ಟು ದುಬಾರಿ ಮತ್ತು ವಿಶಿಷ್ಟವಾದ ವಾಚುಗಳ ಸಂಗ್ರಹ ಇನ್ಯಾರ ಬಳಿಯೂ ಇಲ್ಲ ಎನ್ನಲಾಗುತ್ತದೆ.

ಬಾಲಿವುಡ್ ಸೂಪರ್‌ಸ್ಟಾರ್‌ಗಳ ಐಷಾರಾಮಿ ಜೀವನಶೈಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ದುಬಾರಿ ಕಾರುಗಳು, ಕೋಟಿ ಕೋಟಿ ಬೆಲೆಬಾಳುವ ಬಂಗಲೆಗಳು, ಡಿಸೈನರ್ ಉಡುಪುಗಳು ಹಾಗೂ ಅಪರೂಪದ ಆಭರಣಗಳ ಮೂಲಕ ನಟರು ಗಮನ ಸೆಳೆಯುತ್ತಾರೆ. ಆದರೆ ಇದೀಗ ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಹಾಗೂ ನಟ ರಣ್ವೀರ್ ಸಿಂಗ್ ಧರಿಸಿದ್ದ ಕೈಗಡಿಯಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

ಅಷ್ಟಕ್ಕೂ ಈ ಇಬ್ಬರು ನಟರು ಧರಿಸಿದ್ದ ವಾಚ್‌ಗಳ ಬೆಲೆ ಎಷ್ಟು ಗೊತ್ತಾ? ಎರಡೂ ವಾಚ್‌ಗಳ ಒಟ್ಟು ಮೌಲ್ಯ ಬರೋಬ್ಬರಿ ₹4.96 ಕೋಟಿ! ಅಂದರೆ ಸುಮಾರು ಐದು ಕೋಟಿ ರೂಪಾಯಿ!

ಮುಂಬೈನ ಕಾರ್ಯಕ್ರಮದಲ್ಲಿ ಗಮನ ಸೆಳೆದ ದುಬಾರಿ ವಾಚ್‌ಗಳು!
ನವೆಂಬರ್ 21ರಂದು ಮುಂಬೈನ ಐತಿಹಾಸಿಕ ಗೇಟ್‌ವೇ ಆಫ್ ಇಂಡಿಯಾ ಬಳಿ ‘ಗ್ಲೋಬಲ್ ಪೀಸ್ ಹಾನರ್ಸ್ 2026’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಯೋತ್ಪಾದನೆಯ ವಿರುದ್ಧ ಹೋರಾಡಿದವರ ಧೈರ್ಯ ಮತ್ತು ತ್ಯಾಗವನ್ನು ಗೌರವಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರು, ಉದ್ಯಮಿಗಳು ಹಾಗೂ ಕ್ರೀಡಾ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.

ಶಾರುಖ್ ಖಾನ್, ರಣ್ವೀರ್ ಸಿಂಗ್, ಅನಂತ್ ಅಂಬಾನಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಮಾರಂಭದಲ್ಲಿ ಇಬ್ಬರು ನಟರ ಕೈಯಲ್ಲಿದ್ದ ದುಬಾರಿ ವಾಚ್‌ಗಳು ವಿಶೇಷವಾಗಿ ಗಮನ ಸೆಳೆದವುಶಾರುಖ್ ಬಳಿ ಇನ್ನೂ ದುಬಾರಿ ವಾಚ್‌ಗಳಿವೆ!
ಶಾರುಖ್ ಖಾನ್‌ಗೆ ದುಬಾರಿ ಕೈಗಡಿಯಾರಗಳೆಂದರೆ ವಿಶೇಷ ಆಸಕ್ತಿ ಎನ್ನಲಾಗುತ್ತದೆ. ಅವರ ವಾಚ್ ಸಂಗ್ರಹದಲ್ಲಿ Rolex, Richard Mille, Patek Philippe ಹಾಗೂ Audemars Piguet ಮುಂತಾದ ಪ್ರಸಿದ್ಧ ಬ್ರ್ಯಾಂಡ್‌ಗಳ ಮಾದರಿಗಳಿವೆ ಎಂದು ಹಲವು ಮಾಧ್ಯಮ ವರದಿಗಳು ಹೇಳಿವೆ.

2025ರ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಶಾರುಖ್ ಧರಿಸಿದ್ದ Patek Philippe Grand Complications ವಾಚ್‌ನ ಬೆಲೆ ಸುಮಾರು ₹21 ಕೋಟಿ ಎಂದು ವರದಿಯಾಗಿತ್ತು

Leave a Reply

Your email address will not be published. Required fields are marked *