ಒಂದೇ ಒಂದು ಬಿಳಿ ಕೂದಲು ಕಂಡರೂ ಕಿತ್ತು ಹಾಕ್ತೀರಾ? ಈ ಅಭ್ಯಾಸದಿಂದ ಮುಂದೆ ಏನಾಗುತ್ತೆ ಗೊತ್ತಾ?
ಬಿಳಿ ಕೂದಲು ಕಿತ್ತರೆ ಅದೇ ಜಾಗದಲ್ಲಿ ಕಪ್ಪು ಕೂದಲು ಬೆಳೆಯುತ್ತಾ? ಒಂದು ಬಿಳಿ ಕೂದಲು ಕಿತ್ತರೆ ಹತ್ತು ಬಿಳಿ ಕೂದಲು ಹುಟ್ಟುತ್ತಾ? ಸೌಂದರ್ಯ ಕಾಪಾಡಿಕೊಳ್ಳಲು ನೀವು ಮಾಡುತ್ತಿರುವ ಈ ಕೆಲಸವೇ ಕೂದಲಿಗೆ ಕಂಟಕವಾಗಬಹುದು!
ಕನ್ನಡಿ ಮುಂದೆ ನಿಂತಾಗ ತಲೆಯಲ್ಲಿ ಒಂದೇ ಒಂದು ಬಿಳಿ ಕೂದಲು ಕಾಣಿಸಿಕೊಂಡರೂ ಕೆಲವರಿಗೆ ಕಿರಿಕಿರಿಯಾಗುತ್ತದೆ. ತಕ್ಷಣ ಅದನ್ನು ಹುಡುಕಿ ಬುಡಸಮೇತ ಕಿತ್ತು ಬಿಸಾಕುತ್ತಾರೆ. ಅದರಲ್ಲೂ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುತ್ತಿದ್ದರೆ ಆತಂಕ ಮತ್ತಷ್ಟು ಹೆಚ್ಚಾಗುತ್ತದೆ.
ಆದರೆ ಬಿಳಿ ಕೂದಲನ್ನು ಕಿತ್ತು ಹಾಕುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಾಗಿ ಕೂದಲಿನ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ.ಬಿಳಿ ಕೂದಲು ಕೀಳುವ ಅಭ್ಯಾಸವಿದ್ರೆ ಎಚ್ಚರ!
ಪದೇಪದೇ ಬಿಳಿ ಕೂದಲನ್ನು ಬುಡಸಮೇತ ಕಿತ್ತು ಹಾಕುವುದರಿಂದ ಕೂದಲಿನ ಕಿರುಚೀಲಗಳಿಗೆ ಹಾನಿಯಾಗಬಹುದು. ಈ ಅಭ್ಯಾಸವನ್ನು ದೀರ್ಘಕಾಲ ಮುಂದುವರಿಸಿದರೆ ಹಲವು ಸಮಸ್ಯೆಗಳು ಎದುರಾಗಬಹುದು.
– ಕೂದಲು ತೆಳುವಾಗಬಹುದು.
– ಕೂದಲಿನ ಕಿರುಚೀಲಗಳಿಗೆ ಹಾನಿಯಾಗಬಹುದು.
– ನೆತ್ತಿಯಲ್ಲಿ ಉರಿಯೂತ ಹಾಗೂ ಕಪ್ಪು ಕಲೆಗಳು ಉಂಟಾಗಬಹುದು.
– ಹೊಸ ಕೂದಲು ಬೆಳೆಯುವುದಕ್ಕೆ ತೊಂದರೆಯಾಗಬಹುದು.
– ಕೆಲವು ಸಂದರ್ಭಗಳಲ್ಲಿ ಶಾಶ್ವತವಾಗಿ ಕೂದಲು ಉದುರುವ ಸಾಧ್ಯತೆಯೂ ಇದೆ.
ಒಂದು ಬಿಳಿ ಕೂದಲು ಕಿತ್ತರೆ ಹತ್ತು ಬಿಳಿ ಕೂದಲು ಹುಟ್ಟುತ್ತಾ?
ಬಿಳಿ ಕೂದಲನ್ನು ಕಿತ್ತು ಹಾಕಿದರೆ ಅದರ ಸುತ್ತಮುತ್ತಲಿನ ಕೂದಲು ಕೂಡ ಬಿಳಿಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಇದು ತಪ್ಪು ಕಲ್ಪನೆ.
ಪ್ರತಿಯೊಂದು ಕೂದಲಿಗೂ ಪ್ರತ್ಯೇಕ ಕಿರುಚೀಲವಿರುತ್ತದೆ. ಹೀಗಾಗಿ ಒಂದು ಬಿಳಿ ಕೂದಲನ್ನು ಕೀಳುವುದರಿಂದ ಇತರ ಕೂದಲುಗಳು ಬಿಳಿಯಾಗುವುದಿಲ್ಲ. ಆದರೆ ಪದೇಪದೇ ಕೂದಲು ಕೀಳುವುದರಿಂದ ಅದರ ಬುಡಕ್ಕೆ ಹಾನಿಯಾಗಬಹುದು.
ಬಿಳಿ ಕೂದಲು ಕಿತ್ತರೆ ಮತ್ತೆ ಕಪ್ಪು ಕೂದಲು ಬೆಳೆಯುತ್ತಾ?

ಕೂದಲಿಗೆ ಬಣ್ಣ ನೀಡುವುದು ಮೆಲನಿನ್ ಎಂಬ ವರ್ಣದ್ರವ್ಯ. ವಯಸ್ಸು ಹೆಚ್ಚಾದಂತೆ ಇದರ ಉತ್ಪಾದನೆ ಕಡಿಮೆಯಾಗುವುದರಿಂದ ಕೂದಲು ಬಿಳಿಯಾಗಲು ಆರಂಭಿಸುತ್ತದೆ.ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿಯ ಮಾಹಿತಿಯ ಪ್ರಕಾರ, ಬಿಳಿ ಕೂದಲನ್ನು ಕಿತ್ತು ಹಾಕಿದರೂ ಸಾಮಾನ್ಯವಾಗಿ ಅದೇ ಜಾಗದಲ್ಲಿ ಮತ್ತೆ ಬಿಳಿ ಕೂದಲೇ ಬೆಳೆಯುತ್ತದೆ. ಕಪ್ಪು ಕೂದಲು ಬೆಳೆಯುತ್ತದೆ ಎಂಬ ನಿರೀಕ್ಷೆ ಬೇಡ.
ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದೇಕೆ?ವಯಸ್ಸಾಗುವುದೊಂದೇ ಕೂದಲು ಬಿಳಿಯಾಗಲು ಕಾರಣವಲ್ಲ. ಆನುವಂಶಿಕತೆ, ದೀರ್ಘಕಾಲದ ಮಾನಸಿಕ ಒತ್ತಡ, ಪೌಷ್ಟಿಕಾಂಶಗಳ ಕೊರತೆ ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣವಾಗಬಹುದು. ಅಸಮರ್ಪಕ ನಿದ್ರೆ ಮತ್ತು ಅನಾರೋಗ್ಯಕರ ಜೀವನಶೈಲಿಯೂ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಬಿಳಿ ಕೂದಲು ಕೀಳುವ ಬದಲು ಹೀಗೆ ಆರೈಕೆ ಮಾಡಿ!ತೇವಾಂಶ ಕಾಪಾಡಿಕೊಳ್ಳಿ: ಕೂದಲು ಒಣಗದಂತೆ ಸೂಕ್ತವಾದ ಶಾಂಪೂ ಮತ್ತು ಕಂಡೀಷನರ್ ಬಳಸಿ.
ಬಿಸಿಲಿನಿಂದ ರಕ್ಷಿಸಿಕೊಳ್ಳಿ: ಹೆಚ್ಚು ಸಮಯ ಬಿಸಿಲಿನಲ್ಲಿ ಓಡಾಡುವಾಗ ಟೋಪಿ ಅಥವಾ ಛತ್ರಿ ಬಳಸಿ.ಹೀಟ್ ಸ್ಟೈಲಿಂಗ್ ಕಡಿಮೆ ಮಾಡಿ: ಹೇರ್ ಡ್ರೈಯರ್, ಸ್ಟ್ರೈಟ್ನರ್ಗಳ ಅತಿಯಾದ ಬಳಕೆಯನ್ನು ತಪ್ಪಿಸಿ. ಅಗಲವಾದ ಹಲ್ಲುಗಳ ಬಾಚಣಿಗೆ ಬಳಸಿ.
ಕೀಳುವ ಬದಲು ಕತ್ತರಿಸಿ: ಬಿಳಿ ಕೂದಲು ಕಾಣಿಸಿಕೊಳ್ಳುವುದು ಇಷ್ಟವಿಲ್ಲದಿದ್ದರೆ ಬುಡಕ್ಕೆ ಹಾನಿಯಾಗದಂತೆ ಕತ್ತರಿಸಿಕೊಳ್ಳಿ.ಪೌಷ್ಟಿಕ ಆಹಾರ ಸೇವಿಸಿ: ವಿಟಮಿನ್ ಬಿ12, ವಿಟಮಿನ್ ಇ, ಕಬ್ಬಿಣಾಂಶ ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒಳಗೊಂಡ ಸಮತೋಲಿತ ಆಹಾರ ಸೇವಿಸಿ.
ಚಿಕ್ಕ ವಯಸ್ಸಿನಲ್ಲೇ ಅತಿಯಾಗಿ ಕೂದಲು ಬಿಳಿಯಾಗುತ್ತಿದ್ದರೆ ಅಥವಾ ಕೂದಲು ಉದುರುತ್ತಿದ್ದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ.ಬಿಳಿ ಕೂದಲನ್ನು ಮರೆಮಾಚುವ ಪ್ರಯತ್ನದಲ್ಲಿ ಇರುವ ಕೂದಲನ್ನೇ ಕಳೆದುಕೊಳ್ಳಬೇಡಿ. ಸೌಂದರ್ಯದಷ್ಟೇ ಕೂದಲಿನ ಆರೋಗ್ಯಕ್ಕೂ ಮಹತ್ವ ನೀಡಿ!