ಪೆಟ್ರೋಲ್ಗೆ ನಿಗದಿಗಿಂತ ಹೆಚ್ಚು ಎಥೆನಾಲ್ ಬೆರಕೆ! ಐಒಸಿಎಲ್ ಟರ್ಮಿನಲ್ ತಪಾಸಣೆಯಲ್ಲಿ ಬಯಲಾಯ್ತು ಅಚ್ಚರಿಯ ಸಂಗತಿ; ಸರ್ಕಾರದಿಂದ ನೋಟಿಸ್!
ವಾಹನ ಸವಾರರೇ ಗಮನಿಸಿ! ಪೆಟ್ರೋಲ್ಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಬೆರೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿಬಂದಿದೆ. ಬೆಂಗಳೂರಿನ ದೇವನಗೊಂದಿಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಟರ್ಮಿನಲ್ನಲ್ಲಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಹೆಚ್ಚುವರಿ ಎಥೆನಾಲ್ ಬೆರಕೆ ಪತ್ತೆಯಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಷ್ಟಕ್ಕೂ ಎಷ್ಟು ಪ್ರಮಾಣದ ಎಥೆನಾಲ್ ಹೆಚ್ಚುವರಿಯಾಗಿ ಬೆರೆಸಲಾಗುತ್ತಿತ್ತು? ಅಧಿಕಾರಿಗಳ ತಪಾಸಣೆಯಲ್ಲಿ ಬಯಲಾಗಿದ್ದೇನು?
ಪೆಟ್ರೋಲ್ಗೆ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಬೆರಕೆ ಆರೋಪ!
ಪೆಟ್ರೋಲ್ಗೆ ಎಥೆನಾಲ್ ಬೆರೆಸುವ ತೈಲ ಮಾರುಕಟ್ಟೆ ಕಂಪನಿಗಳ (OMC) ಟರ್ಮಿನಲ್ಗಳ ಮೇಲೆ ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಬೆಂಗಳೂರಿನ ದೇವನಗೊಂದಿಯ ಐಒಸಿಎಲ್ ಟರ್ಮಿನಲ್ನಲ್ಲಿ ನಿಗದಿತ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರಕೆಯಾಗುತ್ತಿರುವುದು ಪತ್ತೆಯಾಗಿದೆ ಎಂದು ತಿಳಿಸಲಾಗಿದೆ.
3,000 ಲೀಟರ್ಗೆ 14 ಲೀಟರ್ ಹೆಚ್ಚುವರಿ ಎಥೆನಾಲ್!ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಕಂಡುಬಂದಿರುವ ಅಂಶಗಳು ಹೀಗಿವೆ:

– ಪ್ರತಿ 3,000 ಲೀಟರ್ಗೆ 14 ಲೀಟರ್ ಹೆಚ್ಚುವರಿ ಎಥೆನಾಲ್ ಸೇರ್ಪಡೆ.
– 4ರಿಂದ 6 ಲೀಟರ್ ಪೆಟ್ರೋಲ್ ಪ್ರಮಾಣದಲ್ಲಿ ಕೊರತೆ.
– ಸರ್ಕಾರದಿಂದ ಪರಿಶೀಲಿಸಲಾದ ಮಾಪಕ ಬಳಸಿ ತಪಾಸಣೆ.

– ನಿಗದಿತ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿರುವ ಆರೋಪ.
ಈ ವ್ಯತ್ಯಾಸಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಬೇರೆ ಕಾರಣಗಳಿವೆಯೇ ಎಂಬುದು ಮುಂದಿನ ಪರಿಶೀಲನೆಯಿಂದ ತಿಳಿದುಬರಬೇಕಿದೆ.ಐಒಸಿಎಲ್ಗೆ ರಾಜ್ಯ ಸರ್ಕಾರದಿಂದ ಶೋಕಾಸ್ ನೋಟಿಸ್!
ತಪಾಸಣೆಯಲ್ಲಿ ಕಂಡುಬಂದಿರುವ ವ್ಯತ್ಯಾಸದ ಹಿನ್ನೆಲೆಯಲ್ಲಿ ಕಾನೂನು ಮಾಪನಶಾಸ್ತ್ರ ಕಾಯ್ದೆ 2009ರ ಅಡಿಯಲ್ಲಿ ಐಒಸಿಎಲ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಸಚಿವ ರಿಜ್ವಾನ್ ಅರ್ಷದ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ದಾಖಲೆ ಸಲ್ಲಿಸಲು 7 ದಿನಗಳ ಗಡುವು!
ಮೈಸೂರು ಹಾಗೂ ಬೆಂಗಳೂರು ವಿಭಾಗದ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ನೋಟಿಸ್ ಜಾರಿಯಾಗಿದ್ದು, ಏಳು ದಿನಗಳ ಒಳಗಾಗಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಎಥೆನಾಲ್ ಬೆರಕೆ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿದ್ದೇಕೆ? ಮಾಪನ ವ್ಯವಸ್ಥೆಯಲ್ಲಿ ಏನಾದರೂ ದೋಷವಿತ್ತಾ? ಎಂಬ ಪ್ರಶ್ನೆಗಳಿಗೆ ಕಂಪನಿಯ ಸ್ಪಷ್ಟನೆಯ ಬಳಿಕ ಉತ್ತರ ಸಿಗುವ ನಿರೀಕ್ಷೆಯಿದೆ.
ವಾಹನ ಸವಾರರಲ್ಲಿ ಮೂಡಿದ ಹೊಸ ಪ್ರಶ್ನೆಗಳು!
ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಬೆರೆಸಿದರೆ ವಾಹನಗಳ ಮೈಲೇಜ್ ಹಾಗೂ ಎಂಜಿನ್ ಮೇಲೆ ಪರಿಣಾಮ ಬೀರಬಹುದೇ? ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರಿಗೆ ವಿತರಿಸುವ ಇಂಧನದಲ್ಲಿ ಎಥೆನಾಲ್ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಯುವುದು ಹೇಗೆ? ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.
ಸದ್ಯ ದೇವನಗೊಂದಿ ಟರ್ಮಿನಲ್ನಲ್ಲಿ ಕಂಡುಬಂದಿರುವ ವ್ಯತ್ಯಾಸದ ಕುರಿತು ಐಒಸಿಎಲ್ ಯಾವ ಸ್ಪಷ್ಟನೆ ನೀಡಲಿದೆ? ರಾಜ್ಯದ ಇತರ ಟರ್ಮಿನಲ್ಗಳಲ್ಲೂ ಹೆಚ್ಚಿನ ತಪಾಸಣೆ ನಡೆಯಲಿದೆಯೇ? ಸರ್ಕಾರ ಮುಂದೇನು ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.