ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ: ಸಹೋದರನಿಗಾಗಿ ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ
ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ವಿರುದ್ಧ ಮೋಜು-ಮಸ್ತಿ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿಯವರ ಕಿರಿಯ ಸಹೋದರ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಗಳ ಪ್ರಕಾರ, ಗದಗ ಡಿಸಿ ಶ್ರೀಧರ್ ಅವರ ತಮ್ಮ ಸರ್ಕಾರಿ ಕಾರಿನಲ್ಲಿ ದರ್ಬಾರ್ ನಡೆಸಿದ್ದಾರೆ. ಇದಲ್ಲದೆ, ಅವರಿಗೆ ಗನ್‌ಮ್ಯಾನ್ ಜೊತೆ ರಾಜಾತಿಥ್ಯವನ್ನೂ ಒದಗಿಸಲಾಗಿದೆ.

ರೋಣಾದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಈ ಸರ್ಕಾರಿ ಸತ್ಕಾರ ನಡೆದಿದೆ ಎಂದು ತಿಳಿದುಬಂದಿದೆ.
ಡಿಸಿ ಕಚೇರಿಯ ಆಪ್ತ ಸಹಾಯಕರ ಫೋನ್ ಕರೆಯ ಮೇರೆಗೆ ಈ ಆತಿಥ್ಯವನ್ನು ನೀಡಲಾಗಿದ್ದು, ಡಿಸಿ ಕುಟುಂಬದ ಐವರು ಸದಸ್ಯರಿಗೆ ಆತಿಥ್ಯ ನೀಡುವಂತೆ ಸೂಚಿಸಲಾಗಿತ್ತು.

ಈ ಕುರಿತು ಮಾಹಿತಿ ನೀಡಿರುವ ತಹಶೀಲ್ದಾರ್ ಅವರು, ಡಿಸಿ ಕಚೇರಿಯ ಕರೆ ಮೇರೆಗೆ ಆತಿಥ್ಯ ನೀಡಿದ್ದಾಗಿ ಖಚಿತಪಡಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಡಿಸಿಯವರ ಬೀಳ್ಕೊಡುಗೆ ಸಮಾರಂಭದಲ್ಲಿ ಡಿಜೆ ಹಾಕಿ ಮೋಜು-ಮಸ್ತಿ ನಡೆದಿತ್ತು ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಸರ್ಕಾರಿ ಕಾರು, ಗನ್‌ಮ್ಯಾನ್ ಮತ್ತು ಪ್ರವಾಸಿ ಮಂದಿರದ ದುರ್ಬಳಕೆಯ ಆರೋಪಗಳು ಜಿಲ್ಲಾಧಿಕಾರಿಗಳ ಕಚೇರಿಯ ಕಾರ್ಯವೈಖರಿ ಕುರಿತು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಡಿಜೆ ಪಾರ್ಟಿ ಬೆನ್ನಲ್ಲೇ ಮತ್ತೊಂದು ವಿವಾದ
ಗದಗ ಜಿಲ್ಲೆಯ ಏಳೂ ತಾಲೂಕುಗಳು ಬರಗಾಲದ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಧರ್ ತಮ್ಮ ಅಧಿಕೃತ ನಿವಾಸದಲ್ಲಿ ಔತಣಕೂಟ ಆಯೋಜಿಸಿದ್ದರು. ಈ ವೇಳೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಿವೃತ್ತಿ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಹಾಗೂ ಜಿಲ್ಲಾಧಿಕಾರಿಗಳೇ ವೈಯಕ್ತಿಕವಾಗಿ ಅದರ ವೆಚ್ಚ ಭರಿಸಿದ್ದರು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ
ರೈತರ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರದ ವಿರುದ್ಧ ಟೀಕೆ
ಡಿಜೆ ಪಾರ್ಟಿ ಕುರಿತು ರಾಜೀವ್ ಬೊಮ್ಮನಕಟ್ಟಿ ಎಂಬ ರೈತ ಜಿಲ್ಲಾಧಿಕಾರಿಗೆ ಕರೆ ಮಾಡಿ ಪ್ರಶ್ನಿಸಿದ್ದರು. ಜಿಲ್ಲೆಯಲ್ಲಿ ರೈತರು ನೀರಿನ ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವಾಗ ಪಾರ್ಟಿ ಮಾಡುವುದು ಸರಿಯೇ ಎಂದು ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ, ಬರಗಾಲ ಬಂದಿದ್ದಕ್ಕೆ ಊಟ ಮಾಡುವುದನ್ನು ನಿಲ್ಲಿಸಿದ್ದೀರಾ ಎಂದು ಮರುಪ್ರಶ್ನೆ ಮಾಡಿದ್ದರು. ಈ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳ ಮಾತಿನ ವಿರುದ್ಧ ಟೀಕೆ ವ್ಯಕ್ತವಾಗಿತ್ತು.
ನವೆಂಬರ್ 30ಕ್ಕೆ ಸೇವೆಯಿಂದ ನಿವೃತ್ತಿ 2012ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಸಿ.ಎನ್. ಶ್ರೀಧರ್ ಅವರು 2025ರ ಜನವರಿಯಿಂದ ಗದಗ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೇ ನವೆಂಬರ್ 30ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಲಿದ್ದಾರೆ. ನಿವೃತ್ತಿಗೆ ಕೆಲವೇ ದಿನಗಳು ಬಾಕಿ ಇರುವಾಗ ಸಾಲು ಸಾಲು ವಿವಾದಗಳು ಅವರನ್ನು ಸುತ್ತಿಕೊಂಡಿವೆ.
ಸಹೋದರನಿಗಾಗಿ ಸರ್ಕಾರಿ ಸೌಲಭ್ಯ ಬಳಕೆ? ಜಿಲ್ಲಾಧಿಕಾರಿಗಳಿಗೆ ಆಡಳಿತಾತ್ಮಕ ಕಾರ್ಯಗಳು ಹಾಗೂ ಭದ್ರತೆಯ ಉದ್ದೇಶಕ್ಕಾಗಿ ಸರ್ಕಾರ ವಾಹನ ಮತ್ತು ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತದೆ.

ಇದೀಗ ಈ ಸೌಲಭ್ಯಗಳನ್ನು ಜಿಲ್ಲಾಧಿಕಾರಿಗಳು ತಮ್ಮ ಸಹೋದರನಿಗಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸರ್ಕಾರಿ ಸೌಲಭ್ಯಗಳ ಬಳಕೆಯ ಕುರಿತು ಪ್ರಶ್ನೆಗಳು ಮೂಡಿವೆ.
ಸರ್ಕಾರಿ ವಾಹನವನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ? ಗನ್‌ಮ್ಯಾನ್ ಸೇವೆಯನ್ನು ಒದಗಿಸಲು ಅಧಿಕೃತ ಅನುಮತಿ ಪಡೆಯಲಾಗಿತ್ತೇ? ಎಂಬ ಪ್ರಶ್ನೆಗಳಿಗೆ ತನಿಖೆಯ ಮೂಲಕ ಉತ್ತರ ಸಿಗಬೇಕಿದೆ.