ಅಜ್ಜ-ಅಜ್ಜಿಯ ಆಶೀರ್ವಾದದಿಂದ ಗೋವರ್ಧನ ಪ್ರದಕ್ಷಿಣೆಗೆ ಬಂದೆ ವೃಂದಾವನದಲ್ಲಿ ಅನಂತ್ ಅಂಬಾನಿ!!
ಅನಂತ್ ಅಂಬಾನಿ ಶುಕ್ರವಾರ ವೃಂದಾವನಕ್ಕೆ ಆಗಮಿಸಿ ಗಿರಿರಾಜ್ ಜೀ ಮುಖಾರವಿಂದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗೋವರ್ಧನ ಪರ್ವತದ ಪೂರ್ಣ ಪ್ರದಕ್ಷಿಣೆ ಕೈಗೊಂಡರು. ಅಜ್ಜ-ಅಜ್ಜಿಯರ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ತಾನು ಈ ಪವಿತ್ರ ಸ್ಥಳಕ್ಕೆ ಬಂದಿರುವುದಾಗಿ ಹೇಳಿದ ಅವರು, ದೇಶದ ಹಾಗೂ ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ರಿಲಯನ್ಸ್ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಶುಕ್ರವಾರ ವೃಂದಾವನಕ್ಕೆ ಆಗಮಿಸಿ, ಪವಿತ್ರ ಗೋವರ್ಧನ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡರು. ಈ ವೇಳೆ ಭಕ್ತರು ಹಾಗೂ ಸ್ಥಳೀಯರು ವಿವಿಧ ಕಡೆಗಳಲ್ಲಿ ಅವರಿಗೆ ಆತ್ಮೀಯ ಮತ್ತು ಭವ್ಯ ಸ್ವಾಗತ

ನೀಡಿದರು. ಗೋವರ್ಧನ ಪರಿಕ್ರಮ ಆರಂಭಿಸುವ ಮೊದಲು ಅನಂತ್ ಅಂಬಾನಿ ಗಿರಿರಾಜ್ ಜೀ ಮುಖಾರವಿಂದ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ‘ಗಿರಿರಾಜ್ ಧರಣ್’ ಎಂದೂ ಕರೆಯಲ್ಪಡುವ ಗೋವರ್ಧನ ಪರ್ವತದ ಪೂರ್ಣ ಪ್ರದಕ್ಷಿಣೆ ಕೈಗೊಂಡರು. ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ಭಕ್ತರು ಅವರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದರು.
ಶ್ರೀಕೃಷ್ಣನ ದಿವ್ಯ ಲೀಲೆಗಳ ಪ್ರದರ್ಶನ ವೀಕ್ಷಿಸಿದ ಅನಂತ್ ಅಂಬಾನಿಪರಿಕ್ರಮ ಮಾರ್ಗದಲ್ಲಿ ಬ್ರಜ್ ಪ್ರದೇಶದ ಶ್ರೀಮಂತ ಸಂಸ್ಕೃತಿ ಮತ್ತು ಭಕ್ತಿಯ ಪರಂಪರೆ ಅನಾವರಣಗೊಂಡಿತು. ಸ್ಥಳೀಯ ಕಲಾವಿದರು ಕೃಷ್ಣಲೀಲೆಯ ವಿವಿಧ ದೃಶ್ಯಗಳನ್ನು ಪ್ರದರ್ಶಿಸಿದರು. ಭಗವಾನ್ ಶ್ರೀಕೃಷ್ಣನ ದಿವ್ಯ ಲೀಲೆಗಳನ್ನು ಬಿಂಬಿಸಿದ ಈ ಪ್ರದರ್ಶನಗಳನ್ನು ಅನಂತ್ ಅಂಬಾನಿ ಆಸಕ್ತಿಯಿಂದ ವೀಕ್ಷಿಸಿದರು.
ಆಧ್ಯಾತ್ಮಿಕ ಅನುಭವದ ಕುರಿತು ಮಾತನಾಡಿದ ಅನಂತ್ ಅಂಬಾನಿ, ‘‘ನಾನು ಗಿರಿರಾಜ್ ಧರಣ್ ಪೂರ್ಣ ಪ್ರದಕ್ಷಿಣೆ ಮಾಡುತ್ತಿದ್ದೇನೆ. ಭಗವಾನ್ ಗಿರಿರಾಜ್ ಧರಣ್ ಅವರ ಪಾದದ ಬಳಿ ಇರುವುದು ಅಪಾರ ಸಂತೋಷ ನೀಡುತ್ತದೆ. ಬ್ರಜ್ನ ಜನರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ನಾವೆಲ್ಲರೂ ಗಿರಿರಾಜ್ ಧರಣ್ ಅವರ ಪಾದದ ಬಳಿ ಇದ್ದೇವೆ’’ ಎಂದರು.
‘‘ಇಂದು ನಾನು ಇಲ್ಲಿಗೆ ಬರಲು ನನ್ನ ಅಜ್ಜ-ಅಜ್ಜಿಯರೇ ಕಾರಣ. ಅವರ ಆಶೀರ್ವಾದ, ಪ್ರೀತಿ ಮತ್ತು ಮಾರ್ಗದರ್ಶನ ನನ್ನನ್ನು ಇಲ್ಲಿಗೆ ಕರೆತಂದಿದೆ. ನಾನು ಪೂರ್ಣ ಪ್ರದಕ್ಷಿಣೆ ಮಾಡಲು ಬರುತ್ತೇನೆ ಎಂದು ತಿಳಿಸಿದಾಗ ಅವರು ತುಂಬಾ ಸಂತೋಷಪಟ್ಟಿದ್ದರು. ಅವರ ಪರವಾಗಿಯೂ ಇಲ್ಲಿ ನನ್ನ ಗೌರವವನ್ನು ಸಲ್ಲಿಸುತ್ತಿದ್ದೇನೆ’’ ಎಂದು ಹೇಳಿದರು.
‘‘ಇಲ್ಲಿ ನನಗಾದ ಆಧ್ಯಾತ್ಮಿಕ ಅನುಭವಿಸಿದುದನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಇಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕತೆಯ ವಿಶಿಷ್ಟ ವಾತಾವರಣವಿದೆ. ಎಲ್ಲರ ಕಲ್ಯಾಣಕ್ಕಾಗಿ, ವಿಶೇಷವಾಗಿ ನಮ್ಮ ದೇಶ ಭಾರತವು ಮಹೋನ್ನತ ಕಲ್ಯಾಣವನ್ನು ಕಾಣಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಗಿರಿರಾಜ್ ಜೀ ಮುಖಾರವಿಂದ ದೇವಸ್ಥಾನದ ಅರ್ಚಕ ಗಣೇಶ್ ಮಾತನಾಡಿ, ಅನಂತ್ ಅಂಬಾನಿ ಅವರ ಭೇಟಿ ಸಂತಸ ತಂದಿದೆ ಎಂದರು. ಅವರ ಪೋಷಕರು ಹಾಗೂ ಅಜ್ಜ-ಅಜ್ಜಿಯರು ಗಿರಿರಾಜ್ ಜೀ ಅವರೊಂದಿಗೆ ಆಳವಾದ ಅನುಸಂಧಾನ ಹೊಂದಿದ್ದರು. ಅವರು ನಿರಂತರವಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಮತ್ತು ದಾನಗಳನ್ನು ಸಲ್ಲಿಸುತ್ತಿದ್ದರು. ಅವರ ಕುಟುಂಬಕ್ಕೆ ಇನ್ನಷ್ಟು ಕೀರ್ತಿ ಮತ್ತು ಸಮೃದ್ಧಿ ದೊರೆಯಲಿ ಎಂದು ಆಶೀರ್ವದಿಸಿದರು.
ಮೂರೂವರೆ ಗಂಟೆಯಲ್ಲಿ 12 ಕಿ.ಮೀ. ಪ್ರದಕ್ಷಿಣೆ!ಜತಿಪುರದಲ್ಲಿರುವ ಶ್ರೀ ಗಿರಿರಾಜ್ ಜಿ ಮುಖಾರವಿಂದ ದೇವಾಲಯಕ್ಕೆ ಭೇಟಿ ನೀಡಿದ ಅನಂತ್ ಅಂಬಾನಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಬಳಿಕ ಮದನ ಮೋಹನ ದೇವಾಲಯಕ್ಕೂ ಭೇಟಿ ನೀಡಿದರು.
ಸುಮಾರು 12 ಕಿಲೋಮೀಟರ್ ದೂರವನ್ನು ಮೂರೂವರೆ ಗಂಟೆಗಳಲ್ಲಿ ಕ್ರಮಿಸಿ ಪ್ರದಕ್ಷಿಣೆ ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ. ರಾಜ್ಯಸಭಾ ಸದಸ್ಯ ಧನರಾಜ್ ಪರಿಮಲ್ ನಾಥ್ವಾನಿ ಕೂಡ ಅವರ ಜೊತೆಗಿದ್ದರು.
ಅನಂತ್ ಅಂಬಾನಿ ಅವರ ಭದ್ರತೆಗಾಗಿ ಸುಮಾರು 200 ಅಂಗರಕ್ಷಕರನ್ನು ನಿಯೋಜಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಜ್ಜ-ಅಜ್ಜಿಯನ್ನು ನೆನೆದು ಭಾವುಕರಾದ ಅನಂತ್!ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ಅಂಬಾನಿ ತಮ್ಮ ಅಜ್ಜ ಧೀರೂಭಾಯಿ ಅಂಬಾನಿ ಹಾಗೂ ಅಜ್ಜಿ ಕೋಕಿಲಾಬೆನ್ ಅಂಬಾನಿ ಅವರ ಮಾರ್ಗದರ್ಶನವನ್ನು ಸ್ಮರಿಸಿದರು.
ತಾವು ಇಂದು ಈ ಸ್ಥಾನದಲ್ಲಿರಲು ಅಜ್ಜ-ಅಜ್ಜಿಯ ಆಶೀರ್ವಾದ, ಪ್ರೀತಿ ಮತ್ತು ಮಾರ್ಗದರ್ಶನವೇ ಕಾರಣ ಎಂದು ಹೇಳಿದರು. ಗೋವರ್ಧನ ಪ್ರದಕ್ಷಿಣೆಗೆ ತೆರಳುತ್ತಿರುವ ವಿಚಾರ ತಿಳಿಸಿದಾಗ ಅಜ್ಜಿ ಕೋಕಿಲಾಬೆನ್ ತುಂಬಾ ಸಂತೋಷಪಟ್ಟಿದ್ದರು. ಅವರ ಪರವಾಗಿಯೂ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಅನಂತ್ ತಿಳಿಸಿದ್ದಾರೆ.ಬಾಲ್ಯದಿಂದಲೂ ಗೋವರ್ಧನ ಗಿರಿಗೆ ಸಂಪೂರ್ಣ ಪ್ರದಕ್ಷಿಣೆ ಹಾಗೂ ದಂಡವತ್ ಪ್ರದಕ್ಷಿಣೆ ಮಾಡುವ ಆಸೆ ಹೊಂದಿದ್ದಾಗಿ ಹೇಳಿದ್ದಾರೆ
ಶ್ರೀಕೃಷ್ಣನ ಲೀಲೆಯನ್ನು ವೀಕ್ಷಿಸಿದ ಅನಂತ್ ಅಂಬಾನಿಪ್ರದಕ್ಷಿಣೆಯ ಮಾರ್ಗದುದ್ದಕ್ಕೂ ಸ್ಥಳೀಯರು ಅನಂತ್ ಅಂಬಾನಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದರು. ಸ್ಥಳೀಯ ಕಲಾವಿದರು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಿಸಿದ ವಿವಿಧ ಲೀಲೆಗಳನ್ನು ಪ್ರದರ್ಶಿಸಿದರು. ಭಜನೆಗಳಿಗೂ ಅನಂತ್ ಅಂಬಾನಿ ಹೆಜ್ಜೆ ಹಾಕಿದರು.ದೇಶದ ಒಳಿತಿಗಾಗಿ ವಿಶೇಷ ಪ್ರಾರ್ಥನೆ

ತಮ್ಮ ಕುಟುಂಬದ ಒಳಿತಿನ ಜೊತೆಗೆ ಸಮಸ್ತ ಜನರ ಕಲ್ಯಾಣಕ್ಕಾಗಿ ಅನಂತ್ ಅಂಬಾನಿ ದೇವರಲ್ಲಿ ಪ್ರಾರ್ಥಿಸಿದ್ದಾರೆ. ವಿಶೇಷವಾಗಿ ಭಾರತ ದೇಶದ ಸುಖ, ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
ಬಾಂಕೆ ಬಿಹಾರಿ ದೇವಾಲಯಕ್ಕೂ ಭೇಟಿ ನೀಡುವ ಕಾರ್ಯಕ್ರಮ

ಎರಡು ದಿನಗಳ ಧಾರ್ಮಿಕ ಪ್ರವಾಸ ಕೈಗೊಂಡಿರುವ ಅನಂತ್ ಅಂಬಾನಿ ನವೆಂಬರ್ 28ರಂದು ಗಿರಿರಾಜ್ ಜಿಗೆ ಮಹಾಭಿಷೇಕ ಸಲ್ಲಿಸುವ ಹಾಗೂ ವೃಂದಾವನದ ಪ್ರಸಿದ್ಧ ಬಾಂಕೆ ಬಿಹಾರಿ ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ಕಾರ್ಯಕ್ರಮಗಳು ಪೂರ್ಣಗೊಂಡಿರುವ ಬಗ್ಗೆ ಇನ್ನೂ ದೃಢೀಕೃತ ಮಾಹಿತಿ ಲಭ್ಯವಾಗಿಲ್ಲ.