ಒಂದು ಬಿಂದಿಗೆ ನೀರಿಗೆ ₹6, ಒಂದು ಡ್ರಂಗೆ ₹60! ಕಲಬುರಗಿಯಲ್ಲಿ 1975ರ ಬರಗಾಲದ ಪರಿಸ್ಥಿತಿ ಮರುಕಳಿಸಿತಾ?
ಬೇಸಿಗೆ ಇನ್ನೂ ಶುರುವಾಗಿಲ್ಲ, ಆಗಲೇ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಕೆರೆ-ಕಟ್ಟೆಗಳು ಬತ್ತಿವೆ, ಬೋರ್ವೆಲ್ಗಳಲ್ಲಿ ನೀರಿಲ್ಲ. ಮನೆಯಲ್ಲಿ ಅಡುಗೆ ಮಾಡಬೇಕಂದ್ರೂ ಹಣ ಕೊಡಬೇಕು, ಬಾಯಾರಿಕೆ ತೀರಿಸಿಕೊಳ್ಳಬೇಕಂದ್ರೂ ನೀರು ಖರೀದಿಸಬೇಕು! ಇಂತಹ ಸಂಕಷ್ಟದ ಪರಿಸ್ಥಿತಿ ಎದುರಾಗಿರುವುದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗೋಳಾ (ಬಿ) ಗ್ರಾಮದಲ್ಲಿ.1975ರ ಬರಗಾಲದ ಪರಿಸ್ಥಿತಿ ಮರುಕಳಿಸಿತಾ?
ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಕಲಬುರಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಕೆರೆ-ಕಟ್ಟೆಗಳು, ಬೋರ್ವೆಲ್ಗಳು ಬತ್ತಿ ಹೋಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಪರದಾಡುವಂತಾಗಿದೆ. 1975ರ ಬರಗಾಲವನ್ನು ನೆನಪಿಸುವಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಬೇಸಿಗೆಗೂ ಮುನ್ನವೇ ನೀರಿಗಾಗಿ ಜನ ಕಿಲೋಮೀಟರ್ಗಟ್ಟಲೆ ಅಲೆದಾಡುವಂತಾಗಿದೆ.ಇಡೀ ಗ್ರಾಮದ ಬೋರ್ವೆಲ್ಗಳು ಬತ್ತಿ ಹೋಗಿವೆ!
ಆಳಂದ ತಾಲೂಕಿನ ಗೋಳಾ (ಬಿ) ಗ್ರಾಮದ ಎಲ್ಲ ಬೋರ್ವೆಲ್ಗಳು ಬತ್ತಿ ಹೋಗಿವೆ. ಗ್ರಾಮ ಪಂಚಾಯತ್ ಹಾಗೂ ಜಿಲ್ಲಾಡಳಿತದಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಹೀಗಾಗಿ ಹಣ ಕೊಟ್ಟು ನೀರು ಖರೀದಿಸುವುದನ್ನು ಬಿಟ್ಟರೆ ಗ್ರಾಮಸ್ಥರಿಗೆ ಬೇರೆ ದಾರಿಯೇ ಇಲ್ಲದಂತಾಗಿದೆ.ಜನರ ಜಲಸಂಕಷ್ಟವೇ ಟ್ಯಾಂಕರ್ ದಂಧೆಗೆ ಬಂಡವಾಳ?
ಗ್ರಾಮಸ್ಥರ ಅಸಹಾಯಕತೆಯನ್ನೇ ಖಾಸಗಿ ಟ್ಯಾಂಕರ್ಗಳ ಮಾಲೀಕರು ಬಂಡವಾಳ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮದ ಹೊರವಲಯದಲ್ಲಿರುವ ಜಮೀನುಗಳ ಬಾವಿಗಳಿಂದ ನೀರು ಖರೀದಿಸಿ, ನಾಲ್ಕು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.ಸದ್ಯ ಗೋಳಾ ಗ್ರಾಮದ ಜನರು ನೀರಿಗಾಗಿ ತೆರಬೇಕಾದ ಬೆಲೆ ಹೀಗಿದೆ.

– ಒಂದು ಬಿಂದಿಗೆ ನೀರಿಗೆ – ₹6
– ಒಂದು ಡ್ರಂ ನೀರಿಗೆ – ₹60
– ಒಂದು ಡ್ರಂ ನೀರಿಗೆ – ₹60
ಬೆಳಗಾದರೆ ಸಾಕು, ಗ್ರಾಮಕ್ಕೆ ಹತ್ತಾರು ಖಾಸಗಿ ನೀರಿನ ಟ್ಯಾಂಕರ್ಗಳು ಬರುತ್ತಿವೆ. ದಿನನಿತ್ಯದ ಅಗತ್ಯಕ್ಕೂ ಹಣ ಕೊಟ್ಟು ನೀರು ಖರೀದಿಸುವ ಪರಿಸ್ಥಿತಿ ಗ್ರಾಮಸ್ಥರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ.ಪಂಚಾಯತ್ನಲ್ಲಿ ಹಣವೇ ಇಲ್ವಂತೆ!
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಡಳಿತಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಗ್ರಾಮ ಪಂಚಾಯತ್ ಪಿಡಿಓ ಅವರನ್ನು ಸಂಪರ್ಕಿಸಿದರೆ, ಪಂಚಾಯತ್ನಲ್ಲಿ ಹಣವೇ ಇಲ್ಲ, ಗ್ರಾಮಕ್ಕೆ ಎಲ್ಲಿಂದ ನೀರು ಸರಬರಾಜು ಮಾಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಈಗಲೇ ಈ ಪರಿಸ್ಥಿತಿ, ಇನ್ನು ಬೇಸಿಗೆಯಲ್ಲಿ ಗತಿಯೇನು?
ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಇಷ್ಟೊಂದು ಪರದಾಟ ಶುರುವಾಗಿದೆ. ಇನ್ನು ಬಿಸಿಲಿನ ತಾಪ ಹೆಚ್ಚಾದರೆ ಗ್ರಾಮಸ್ಥರ ಪರಿಸ್ಥಿತಿ ಏನಾಗಬಹುದು? ಪ್ರತಿದಿನ ದುಡಿದ ಹಣವನ್ನು ನೀರಿಗೇ ಖರ್ಚು ಮಾಡಿದರೆ ಬಡ ಕುಟುಂಬಗಳು ಜೀವನ ನಡೆಸುವುದಾದರೂ ಹೇಗೆ?ಖಾಸಗಿ ಟ್ಯಾಂಕರ್ಗಳ ದುಬಾರಿ ದರಕ್ಕೆ ಕಡಿವಾಣ ಬೀಳುತ್ತಾ? ಗ್ರಾಮಸ್ಥರ ಜಲಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸುತ್ತಾ? ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ನೀರು ಪೂರೈಸಲು ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.