ಬೆಂಗಳೂರು: ಪೆಟ್ರೋಲ್ನಲ್ಲಿನ ಎಥನಾಲ್ ಮಿಶ್ರಣದ ಪ್ರಮಾಣದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಖಚಿತಪಡಿಸುವಂತೆ ಕರ್ನಾಟಕ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ.
ರಾಜ್ಯಾದ್ಯಂತ ನಡೆಸಿದ ತಪಾಸಣೆ ಹಾಗೂ ಸ್ವತಂತ್ರ ಪ್ರಯೋಗಾಲಯಗಳ ಪರೀಕ್ಷಾ ವರದಿಗಳ ಆಧಾರದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಎಥನಾಲ್ ಮಿಶ್ರಣಕ್ಕೆ ವಿರೋಧವಿಲ್ಲ, ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಿಶ್ರಣ ಹಾಗೂ ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗುವುದನ್ನು ಒಪ್ಪುವುದಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ನೇತೃತ್ವದಲ್ಲಿ ಕರ್ನಾಟಕ ಐದು ಕ್ರಮಗಳಿಗೆ ಆಗ್ರಹಿಸಿದೆ. ಪೆಟ್ರೋಲ್ ಬಂಕ್ಗಳಲ್ಲಿ ನೈಜ ಎಥನಾಲ್ ಪ್ರಮಾಣ ಪ್ರದರ್ಶನ, ಇಂಧನ ಬಿಲ್ನಲ್ಲಿ ಅದರ ಉಲ್ಲೇಖ, E20 ಜೊತೆಗೆ E10 ಮತ್ತು ಎಥನಾಲ್ ರಹಿತ ಪೆಟ್ರೋಲ್ ಲಭ್ಯತೆ, NABL ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದ ಸ್ವತಂತ್ರ ಪರೀಕ್ಷೆ ಹಾಗೂ ವಾಹನಗಳಿಗೆ ಹಾನಿಯಾದ ಗ್ರಾಹಕರಿಗಾಗಿ E20 ಪರಿಹಾರ ನಿಧಿ ಸ್ಥಾಪನೆಗೆ ಒತ್ತಾಯಿಸಿದೆ.
ಗ್ರಾಹಕರಿಗೆ ತಾವು ಖರೀದಿಸುವ ಇಂಧನದ ಮಾಹಿತಿ ತಿಳಿಯುವ ಹಕ್ಕಿದೆ ಎಂದು ಸಚಿವರು ಹೇಳಿದ್ದಾರೆ.
