No Ads

ಬೆಂಗಳೂರಿನಲ್ಲೇ ಎರಡು ಎಚ್ಎಂಪಿವಿ ವೈರಸ್ ಕೇಸ್: ತುರ್ತು ಸಭೆ ಕರೆದ ಆರೋಗ್ಯ ಇಲಾಖೆ

ಕರ್ನಾಟಕ 2025-01-06 13:32:33 90
post

ಚೀನಾದಲ್ಲಿ ಅಬ್ಬರಿಸುತ್ತಿರುವ ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್‌ಎಂಪಿವಿ) ವೈರಸ್‌ ಇದೀಗ ಸಿಲಿಕಾನ್‌ ಸಿಟಿ ಬೆಂಗಳೂರಿಗೂ ಕಾಲಿಟ್ಟು ಬೆಚ್ಚಿಬೀಳಿಸಿದೆ. ಮೊದಲಿಗೆ 8 ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ವೈರಸ್‌ ಪತ್ತೆಯಾಗಿದೆ ಎಂದು ವರದಿಯಾಗಿದೆ. ಇದೀಗ ಮತ್ತೊಂದು ಕೇಸ್‌ ಬೆಂಗಳೂರಿನಲ್ಲೇ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ.

ಇಡೀ ಭಾರತದಲ್ಲಿ ಮೊದಲ ಎಚ್‌ಎಂಪಿವಿ ಕೇಸ್‌ ಪತ್ತೆಯಾಗಿರುವುದು ಬೆಂಗಳೂರಿನಲ್ಲೇ ಎಂದು ಹೇಳಲಾಗುತ್ತಿದೆ. ಒಂದು ಕೇಸ್‌ ಪತ್ತೆಯಾದ ಬಳಿಕ ಇಡೀ ಕರ್ನಾಟಕದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ಮತ್ತೊಂದು ಕೇಸ್‌ ಕೂಡ ಬೆಂಗಳೂರಿನಲ್ಲೇ ಪತ್ತೆಯಾಗಿರುವುದು ಎಲ್ಲರಿಗೂ ಗಾಬರಿ ಹುಟ್ಟಿಸಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ 3 ತಿಂಗಳ ಮಗು ಎಚ್‌ಎಂಪಿವಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಇನ್ನೂ 8 ತಿಂಗಳ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಶೀತ, ಜ್ವರ ಬಂದಿದ್ದ ಕಾರಣ 8 ತಿಂಗಳ ಮಗುವನ್ನು ಪೋಷಕರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವೈದ್ಯರು ಪರೀಕ್ಷೆ ಮಾಡಿದಾಗ ಎಚ್ಎಂಪಿವಿ ವೈರಸ್‌ ಪತ್ತೆಯಾಗಿದೆ ಎಂದು ಹೇಳಲಾಗಿದೆ. ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಹೆಣ್ಣು ಮಗು ಮತ್ತು ಎಂಟು ತಿಂಗಳ ಗಂಡು ಮಗುವಿಗೆ ಪರೀಕ್ಷೆ ನಡೆಸಿದ ನಂತರ ಬೆಂಗಳೂರಿನಲ್ಲಿ ಮೊದಲ ಎಚ್‌ಎಂಪಿವಿ ಪ್ರಕರಣಗಳು ದೃಢಪಟ್ಟಿವೆ.

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಯ ರಿಪೋರ್ಟ್‌ವೊಂದು ಹರಿದಾಡುತ್ತಿದೆ. ಇದರಲ್ಲಿ ಮಗುವಿಗೆ ಎಚ್‌ಎಂಪಿವಿ ವೈರಸ್‌ ಪತ್ತೆಯಾಗಿರುವುದು ದೃಢವಾಗಿದೆ ಎಂದು ಹೇಳಲಾಗುತ್ತಿದೆ. ವೈರಸ್‌ ಪತ್ತೆಯಾಗಿರುವ ಬಗ್ಗೆ ಖಾಸಗಿ ಆಸ್ಪತ್ರೆಯಿಂದಷ್ಟೇ ಮಾಹಿತಿ ಹೊರಬಿದ್ದಿದ್ದು, ಆರೋಗ್ಯ ಇಲಾಖೆ ಇನ್ನೂ ಖಚಿತಪಡಿಸಿಲ್ಲ. ಇನ್ನು ಬೆಂಗಳೂರಿನಲ್ಲೇ ಎರಡು ಕೇಸ್‌ಗಳು ಪತ್ತೆಯಾದ ಕಾರಣ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ.

ವೈರಸ್‌ ಪ್ರಕರಣಗಳ ಸುದ್ದಿ ಎಲ್ಲೆಡೆ ವ್ಯಾಪಿಸಿರುವ ಕಾರಣ ಆರೋಗ್ಯ ಇಲಾಖೆಯು ತುರ್ತು ಸಭೆಯನ್ನು ಕರೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಹಿಂದೆ ಕೋವಿಡ್‌ನಂತೆಯೇ ಈ ಸೋಂಕು ಕೂಡ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿರುವ ಕಾರಣ ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಇನ್ನು ಬೆಂಗಳೂರಿನಲ್ಲಿ ಎಚ್‌ಎಂಪಿವಿ ವೈರಸ್‌ ವಿಚಾರದ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿವರ್ಷ ಚಳಿಗಾಲ ಬಂದಾಗ ಸಾಮಾನ್ಯವಾಗಿ ಶೀತ, ಜ್ವರ ಬರುತ್ತೆ. ಅದಕ್ಕೆ ವೈರಸ್‌ ಕೂಡ ಕಾರಣವಾಗಿರುತ್ತೆ. ವೈರಸ್‌ ಆಗಾಗ ತನ್ನ ಗುಣ ಲಕ್ಷಣಗಳನ್ನು ಬದಲಾಯಿಸುತ್ತದೆ. ಇನ್ನು ಈ ಬಾರಿ ಆ ವೈರಸ್‌ಗೆ ಎಚ್ಎಂಪಿವಿ ಎಂದು ಕರೆಯಲಾಗುತ್ತಿದೆ. ಇದು ಅಪಾಯಕಾರಿ ವೈರಸ್ ಅಲ್ಲ ಎಂದು
ವರದಿಗಳನ್ನು ಅಲ್ಲಗಳೆದಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಎಚ್‌ಎಂಪಿವಿ ವೈರಸ್‌ ವಿಚಾರದ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿವರ್ಷ ಚಳಿಗಾಲ ಬಂದಾಗ ಸಾಮಾನ್ಯವಾಗಿ ಶೀತ, ಜ್ವರ ಬರುತ್ತೆ. ಅದಕ್ಕೆ ವೈರಸ್‌ ಕೂಡ ಕಾರಣವಾಗಿರುತ್ತೆ. ವೈರಸ್‌ ಆಗಾಗ ತನ್ನ ಗುಣ ಲಕ್ಷಣಗಳನ್ನು ಬದಲಾಯಿಸುತ್ತದೆ. ಇನ್ನು ಈ ಬಾರಿ ಆ ವೈರಸ್‌ಗೆ ಎಚ್ಎಂಪಿವಿ ಎಂದು ಕರೆಯಲಾಗುತ್ತಿದೆ. ಇದು ಅಪಾಯಕಾರಿ ವೈರಸ್ ಅಲ್ಲ ಎಂದು ವರದಿಗಳನ್ನು ಅಲ್ಲಗಳೆದಿದ್ದಾರೆ.
 

No Ads
No Reviews
No Ads

Popular News

No Post Categories
Sidebar Banner
Sidebar Banner