ಅನೈತಿಕ ಸಂಬಂಧಕ್ಕೆ ಎರಡು ತಲೆಗಳು ಉರುಳಿವೆ. ಕಂದಮ್ಮನ ಮುಂದೆಯೇ ಪತಿ-ಪತ್ನಿಯ ಬರ್ಬರ ಹತ್ಯೆ ನಡೆದಿದೆ. ಕಂದಮ್ಮನ ಮುಂದೆಯೇ ಪತಿ-ಪತ್ನಿಯ ಬರ್ಬರ ಹತ್ಯೆ ನಡೆದಿದೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ.. ಹಾಗೆ ಬೀದರ್‌ನ ಜಾಫರವಾಡಿ ಗ್ರಾಮದಲ್ಲಿ ಪತಿಯ ಅನೈತಿಕ ಸಂಬಂಧಕ್ಕೆ ಪತ್ನಿಯೂ ಪ್ರಾಣತೆತ್ತಿದ್ದಾಳೆ. ಮಾಡದ ತಪ್ಪಿಗೆ ಏನೂ ಅರಿಯದ 2 ವರ್ಷದ ಕಂದಮ್ಮ ಅನಾಥವಾಗಿದೆ.
ಮೃತ ವ್ಯಕ್ತಿಯ ಹೆಸರು ರಾಜು ಕೊಳಸುರೆ. ರಾಜು ಪತ್ನಿಯ ಹೆಸರು ಸಾರಿಕಾ. ಆದ್ರೀಗ ಇವರಿಬ್ಬರೂ ಬದುಕಿಲ್ಲ. ಪತಿಯ ಚಪಲದ ಆಟಕ್ಕೆ ಆತನ ಜೊತೆ ಗರ್ಭಿಣಿ ಪತ್ನಿಯೂ ಬರ್ಬರವಾಗಿ ಹತ್ಯೆಗೀಡಾಗಿದ್ದಾಳೆ. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಜಾಫರವಾಡಿ ಗ್ರಾಮದಲ್ಲಿ ಘನಘೋರ ಕಗ್ಗೊಲೆ ನಡೆದುಹೋಗಿದೆ.
ಭೀಕರವಾಗಿ ಕೊಲೆಯಾಗಿರೋ ಜಾಫರವಾಡಿ ಗ್ರಾಮದ ರಾಜು ಕೊಳಸುರೆ ಅದೇ ಗ್ರಾಮದ ಯುವತಿಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನಂತೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಜೊತೆಗಿದ್ದ ಫೋಟೋಗಳನ್ನ ಶೇರ್ ಮಾಡಿದ್ದನಂತೆ. ಬಳಿಕ ಜಾಫರವಾಡಿ ಗ್ರಾಮವನ್ನ ತೊರೆದು ಪತ್ನಿ ಸಾರಿಕಾ ಹಾಗೂ 2 ವರ್ಷದ ಮಗನ ಜೊತೆ ರಾಜು ಮುಂಬೈ ಸೇರಿದ್ದ.
ಇತ್ತೀಚಿಗಷ್ಟೇ ಮುಂಬೈನಿಂದ ಜಾಫರವಾಡಿ ಗ್ರಾಮಕ್ಕೆ ರಾಜು ದಂಪತಿ ಬಂದಿದ್ರು. ಇದೇ ವೇಳೆ ಯುವತಿ ಕಡೆಯವರು ಸಂಧಾನಕ್ಕಾಗಿ ಊರಿನ ಹೊರವಲಯಕ್ಕೆ ಕರೆದಿದ್ದಾರೆ. 2 ವರ್ಷದ ಮಗುವನ್ನ ಕರೆದುಕೊಂಡು ದಂಪತಿ ಸಂಧಾನಕ್ಕೆ ತೆರಳಿದ್ದಾರೆ. ಈ ವೇಳೆ ಮಗುವಿನ ಎದುರೇ ರಸ್ತೆಯಲ್ಲಿ ದಂಪತಿಯ ಕತ್ತು ಸೀಳಿ ಭೀಕರವಾಗಿ ಮರ್ಡರ್ ಮಾಡಲಾಗಿದೆ. ಪತಿಯ ಅನೈತಿಕ ಸಂಬಂಧಕ್ಕೆ ಗರ್ಭಿಣಿಯಾಗಿದ್ದ ಪತ್ನಿ ಸಾರಿಕಾ ಕೂಡಾ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.
ಕಣ್ಣ ಮುಂದೆಯೇ ತಂದೆ-ತಾಯಿ ರಕ್ತದ ಮಡುವಲ್ಲಿ ಬಿದ್ದಿರೋದನ್ನ ಕಂಡು 2 ವರ್ಷದ ಮಗು ದಿಗ್ಭ್ರಾಂತನಾಗಿ ನೋಡುತ್ತಾ ಕೂತಿರುವ ದೃಶ್ಯ ಕಲ್ಲು ಹೃದಯದವರ ಕಣ್ಣಲ್ಲಿ ನೀರು ತರಿಸುವಂತಿದೆ. ಅಪ್ಪ ಮಾಡಿದ ಯಡವಟ್ಟಿಗೆ ಮಗ ಈಗ ತಬ್ಬಲಿಯಾಗಿದ್ದಾನೆ. ದಂಪತಿಯನ್ನ ಕೊಂದು ಹಾಕಿರೋ ದತ್ತಾತ್ರೇಯ ಮತ್ತು ತುಕಾರಾಮ್ ಮಂಠಾಳ ಠಾಣೆಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದಾರೆ. ಅಂದ್ಹಾಗೆ ದತ್ತಾತ್ರೇಯ ತಂಗಿ ಜೊತೆಗೆ ರಾಜು ಕೊಳಸುರೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಅಂತ ತಿಳಿದುಬಂದಿದೆ. ಸದ್ಯ ಇಬ್ಬರನ್ನೂ ಬಂಧಿಸಿರೋ ಪೊಲೀಸರು ಅಸಲಿ ಕಾರಣವನ್ನ ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.
Log in to write reviews