ಕಾಮಿಡಿ ಕಿಲಾಡಿ ಸ್ಟಾರ್ ಹಾಗೂ ನಟ ಮಡೆನೂರು ಮನು (Madenuru Manu) ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮಡೆನೂರು ಮನು, ಕುಲದಲ್ಲಿ ಕೀಳ್ಯಾವುದೊ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ನಾಳೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಹೊತ್ತಲ್ಲೇ ನಟನ ಮೇಲೆ ಎಫ್‌ಐಆರ್ ದಾಖಲಾಗಿದೆ.
ಕಾಮಿಡಿ ಕಿಲಾಡಿಯ ಸಹ ಕಲಾವಿದೆಯಿಂದಲೇ ಅತ್ಯಾಚಾರ ಕೇಸ್ ದಾಖಲಾಗಿದೆ. ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ ನಟ ತಲೆಮರೆಸಿಕೊಂಡಿದ್ದಾನೆ. ಆರೋಪಿ ನಟ ಮಡೆನೂರು ಮನುಗಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಮಡೆನೂರು ಮನು ವಿರುದ್ಧ ಆರೋಪ ಮಾಡಲಾಗಿದೆ. ಹೀಗಾಗಿ ಯುವತಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು ಯುವತಿ ದೂರಿನನ್ವಯ ಎಫ್ ಐ ಆರ್ ದಾಖಲಾಗಿದೆ.
ಪೊಲೀಸರು ದಾಖಲಿಸಿರೋ FIR ನಲ್ಲಿ ಏನಿದೆ ಗೊತ್ತಾ..?
ಯವರಿಗೆ ಬಾಡಿಗೆ ಮನೆಯನ್ನು ಮನುವೇ ಹುಡುಕಿಕೊಟ್ಟಿದ್ದ
ನಾಗರಭಾವಿಯಲ್ಲಿ ಬಾಡಿಗೆ ಮನೆ ಹುಡುಕಿಕೊಟ್ಟಿದ್ದ ಮನು
2018 ರಿಂದಲೂ ಮನುವಿನ ಪರಿಚಯ ಇತ್ತು
ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಜೊತೆಯಾಗಿ ಕೆಲಸ ಮಾಡಿದ್ವಿ
ಮೊದಲಿಗೆ ಪರಿಚಯ ಆಗಿ ಸ್ನೇಹ ಬೆಳೆದಿತ್ತು
ಮನುಗೆ ಮದುವೆ ಆಗಿ ಒಂದು ಮಗು ಕೂಡ ಇದೆ
29/11/2022 ರಂದು ಶಿವಮೊಗ್ಗದ ಶಿಕಾರಿಪುರದ ಕಾರ್ಯಕ್ರಮಕ್ಕೆ ಹೋಗಿದ್ದ ಮನು ಹಾಗೂ ಯುವತಿ
ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ ಮಾಡಿದ್ದರು
ಕಾರ್ಯಕ್ರಮದ ಬಳಿಕ ಸಂಭಾವಣೆ ನೀಡ ನೆಪದಲ್ಲಿ ರೂಂಗೆ ಕರೆಸಿಕೊಂಡಿದ್ದರು
ಶಿಕಾರಿಪುರದ ಹೋಟೆಲ್ ರೂಂಗೆ ಕರೆಸಿಕೊಂಡಿದ್ದರು
ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ
ಇದಾದ ಬಳಿಕ 2022 ರಲ್ಲಿ ಮನೆಗೆ ಬಂದು ಬಲವಂತವಾಗಿ ತಾಳಿ ಕಟ್ಟಿರುತ್ತಾರೆ
2022 ರ ಡಿಸೆಂಬರ್ 3 ರಂದು ತಾಳಿ ಕಟ್ಟಿರುತ್ತಾರೆ
ಬಳಿಕ ಹಲವು ಬಾರಿ ನನ್ನನ್ನು ಅತ್ಯಾಚಾರ ಮಾಡಿರುತ್ತಾರೆ
ಬಳಿಕ ನಾನು ಪ್ರೇಗ್ಮೆಂಟ್ ಕೂಡ ಆಗಿರುತ್ತೇನೆ
ಮನು ಗರ್ಭಪಾತ ಆಗುವ ಮಾತ್ರೆ ನೀಡಿರುತ್ತಾರೆ
ಇದಾದ ಬಳಿಕಯೂ ಮತ್ತೊಮ್ಮೆ ಗರ್ಭಿಣಿ ಆಗಿದ್ದ ದೂರುದಾರೆ
ಬಳಿಕ ಎರಡನೇ ಬಾರಿಯೂ ಗರ್ಭಪಾತ ಮಾಡಿಸಿದ್ದ ಮನು
ಬಾಡಿಗೆ ಮನೆಯಲ್ಲಿ ಹಲವು ಬಾರಿ ಲೈಂಗಿಕವಾಗಿ ಬಲಸಿಕೊಂಡಿದ್ದಾರೆ
ಪೋನಲ್ಲಿ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಮನು
ವಿಚಾರ ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡ್ತೀನಿ ಅಂತ ಬೆದರಿಕೆ
ಜೊತೆಗೆ ಲಕ್ಷಾಂತರ ರೂಪಾಯಿ ಹಣ ಕೂಡ ಕೊಟ್ಟಿರುತ್ತೇನೆ
ಈತನ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತ ದೂರು
Log in to write reviews