ಬಾಗಲಕೋಟೆ: ದೇಶದ ಸಮಸ್ತ ಸಮುದಾಯಗಳ ಅಭಿವೃದ್ಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯಕ ಎಂದು ಸಂಯುಕ್ತ ಪಾಟೀಲ್ ಅವರು ಹೇಳಿದರು. ಬಾಗಲಕೋಟೆಯ ಜಿಲ್ಲೆಯ ಗುಡೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮುಳಿಯಪ್ಪಜ್ಜನ ಕಟ್ಟೆಯ ಹತ್ತಿರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ದಲಿತರ ಜೀವನ ದುಸ್ಥಿತಿಯಲ್ಲಿ ಇದೆ. ಕೇಂದ್ರ ಬಿಜೆಪಿ ಸರ್ಕಾರ ದಲಿತರ ಮೇಲಿನ ದೌರ್ಜನ್ಯಕ್ಕೆ ಯಾವುದೇ ರೀತಿ ಸ್ಪಂದನೆ ತೋರುತ್ತಿಲ್ಲ, ಸಬ್ ಕಾ ಸಾಥ್ ಸಬಾ ಕಾ ವಿಕಾಸ್ ಎನ್ನುವ ಪ್ರಧಾನಿಗಳು ಬರೀ ಮಾತಿನ ಶೂರರಾಗಿದ್ದರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಜನ ಈ ಬಾರಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ವಿಜಯಾನಂದ ಕಾಶಪ್ಪನವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಶಿರೂರು ತಾಂಡಾದ ಬಂಜಾರ ಮಠಕ್ಕೆ ಭೇಟಿ ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಚುನಾವಣಾ ಪ್ರಚಾರದ ನಡೆವೆಯೇ ಇಲ್ಲಿನ ಶಿರೂರು ತಾಂಡಾದ ಬಂಜಾರ ಸಮುದಾಯದ ಶ್ರೀ ಕುಮಾರ ಮಹಾರಾಜ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿ ಸಭೆ ನಡೆಸಿದರು.
ಬಿಜೆಪಿ ದಲಿತರ ಅಭಿವೃದ್ಧಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
No Ads
Log in to write reviews