ಪುನೀತ್ ರಾಜ್‌ಕುಮಾರ್ ಅಭಿನಯದ ಹುಡುಗರು ಸಿನಿಮಾದಲ್ಲಿ ಅಪ್ಪು ತಂಗಿ ಪಾತ್ರದಲ್ಲಿ ನಟಿಸಿದ್ದ ಅಭಿನಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟಿ ಅಭಿನಯಗೆ ಮಾತು ಬರಲ್ಲ, ಕಿವಿನೂ ಕೇಳಲ್ಲ. ಆದರೆ ನಟನೆಯಲ್ಲಿ ಮಾತ್ರ ಅದ್ಭುತ ಪ್ರತಿಭೆ. ಕನ್ನಡ, ತಮಿಳು, ತೆಲುಗು, ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿ ಖ್ಯಾತಿ ಪಡೆದಿದ್ದಾರೆ.
ಕೇವಲ ಕನ್ನಡ ಸಿನಿಮಾಗಳು ಮಾತ್ರವಲ್ಲ ತನ್ನ ಅದ್ಭುತ ನಟನೆಯಿಂದ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಚಿರಪರಿಚಿತರಾಗಿದ್ದಾರೆ.
ಇತ್ತೀಚೆಗೆ ವಿಶೇಷ ಚೇತನ ನಟಿ ಅಭಿನಯ ಅವರು ಬಹುಕಾಲದ ಗೆಳೆಯ ವೇಗೇಶನಾ ಕಾರ್ತಿಕ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ವೇಗೇಶನಾ ಕಾರ್ತಿಕ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದ ಸ್ನೇಹಿತನ ನಿಶ್ಚಿತಾರ್ಥದ ಫೋಟೋಗಳನ್ನ ಅಭಿನಯ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ನನ್ನ ಬಾಳ ಸಂಗಾತಿ ನನಗೆ 15 ವರ್ಷದಿಂದ ಪರಿಚಯ ಇದೆ. ಅವರೇ ನನಗೆ ವೇಗೇಶನಾ ಕಾರ್ತಿಕ್ ಎಂದು ಅಭಿನಯ ಎಲ್ಲರಿಗೂ ಪರಿಚಯ ಮಾಡಿದ್ದರು.
ಅಭಿನಯ ಅವರು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಹುಡುಗರು ಸಿನಿಮಾದಲ್ಲಿ ತಂಗಿಯಾಗಿ ಬಣ್ಣ ಹಚ್ಚಿದ್ದರು. ಬಳಿಕ ಕಿಚ್ಚು, ಆಟೋ ರಾಮಣ್ಣ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು.
ಚೆನ್ನೈನಲ್ಲಿ ಹುಟ್ಟಿ ಬೆಳೆದ ಅಭಿನಯ, ಕೆಲ ತೆಲುಗು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದರು. ಬಳಿಕ ನಾಡೋಡಿಗಳ್ ಸಿನಿಮಾದಲ್ಲಿ ಹೀರೋನ ತಂಗಿಯಾಗಿ ನಟಿಸಿದ್ದರು. ತೆಲುಗಿನಲ್ಲಿ ಡಮರುಕಂ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಧಮ್ಮು, ಥನಿ ಒರುವನ್, ಸೀತಾ ರಾಮಂ, ವೀರಂ, ಪೂಜೈ, ಧ್ರುವ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯ ನಟಿಸಿದ್ದಾರೆ.
Log in to write reviews