ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಇಂದು ಬಾಗಲಕೋಟೆ ನಗರದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿದರು. ಎಲ್ಲೆಡೆ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಕಾರ್ಯಕರ್ತರು ಹಾಗೂ ಪಕ್ಷದ ಹಲವಾರು ಮುಖಂಡರು ಸಾಥ್ ನೀಡಿದರು. ದೇವಸ್ಥಾನಕ್ಕೆ ಭೇಟಿ: ಮುಂಜಾನೆ ಪಟ್ಟಣದ ಪುರಾಣ ಪ್ರಸಿದ್ಧ ಪಂಚಮುಖಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಾಡಿನ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದ ಸಂಯುಕ್ತ ಅವರು ಪ್ರಚಾರವನ್ನು ಆರಂಭಿಸಿದರು. ವಿದ್ಯಾಗಿರಿಯ ಸಾಯಿಬಾಬಾ ಮಂದಿರಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಾರ್ಯಕರ್ತರ ಮನೆಗೆ ಭೇಟಿ ಆನಂತರ ನವನಗರದ ಶ್ರೀ ರಾಜು ಲಮಾಣಿ ವಕೀಲರ ಮನೆಗೆ ಭೇಟಿ ನೀಡಿ ಗೌರವ ಸ್ವೀಕರಿಸಿದರು. ಹಲವಾರು ಕಾರ್ಯಕರ್ತರು ಈ ವೇಳೆ ಅವರ ಜೊತೆಗಿದ್ದರು. ಬಾಗಲಕೋಟೆ ಪಟ್ಟಣದಲ್ಲಿ ಪಕ್ಷದ ವಿವಿಧ ಮುಖಂಡರ ಮನೆಗೆ ತೆರಳಿ ಮತಯಾಚನೆ ಮಾಡಿದರು. ಎಲ್ಲಾ ಮನೆಗಳಲ್ಲಿ ಮನೆಮಗಳಂತೆ ಸ್ವಾಗತಿಸಿ ಅರಿಶಿಣ, ಕುಂಕುಮ ನೀಡಿದ ಮಾತೆ ಬರಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಭಾಗಿ: ಲೋಕಸಭಾ ಚುನಾವಣಾ ಪ್ರಚಾರ ಕಾರ್ಯವು ಅಧಿಕೃತವಾಗಿ ನಾಳೆ (ಏಪ್ರಿಲ್ 7) ರಂದು ಶುರುವಾಗಲಿದೆ. ಈ ಸಂಬಂಧ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಅವರು ಭಾಗವಹಿಸಿದರು. ಎನ್‌ಎಸ್‌ಯುಐ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಭಾಗಿ: ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಎನ್‌ಎಸ್‌ಯುಐ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸಂಯುಕ್ತ ಪಾಟೀಲ್ ಅವರು ಭಾಗಿಯಾದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ನಂಜಯ್ಯನ ಮಠ, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಪಾಟೀಲ್, ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷರಾದ ವಿಜಯಕುಮಾರ್ ತಿಪ್ಪರೆಡ್ಡಿ, ಡಿಎಸ್‌ಎಸ್ ಘಟಕದ ಅಧ್ಯಕ್ಷರಾದ ರಾಜು ಮತ್ತಿತರರು ಉಪಸ್ಥಿತರಿದ್ದರು.
ಬಾಗಲಕೋಟೆಯಲ್ಲಿ ಸಂಯುಕ್ತ ಪಾಟೀಲ್ ಭರ್ಜರಿ ಪ್ರಚಾರ ; ಎಲ್ಲೆಡೆ ಭಾರೀ ಸ್ವಾಗತ
No Ads
Log in to write reviews