ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಉಗ್ರರ ದಾಳಿ ಬಳಿಕ ಭಾರತ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆಗಳನ್ನ ನಡೆಸಿದ್ದು, ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹಲವು ದಿಟ್ಟ ನಿರ್ಧಾರಗಳಲ್ಲಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ಗೇಟ್ ಪಾಸ್ ಕೊಡುವುದು ಬಹಳ ಮುಖ್ಯವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮಾತುಕತೆ ನಡೆಸಿದ್ದಾರೆ. ಕೂಡಲೇ ಪಾಕ್ ನಾಗರಿಕರನ್ನ ನಾವು ವಾಪಸ್ ಕಳಿಸಬೇಕು. ಪಾಕ್ ನಾಗರಿಕರಿಗೆ ನೀಡಿರುವ ವೀಸಾ ರದ್ದತಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹೀಗಾಗಿ ದೇಶದಲ್ಲಿ ಅಡಗಿರುವ ಪಾಕ್ ನಾಗರಿಕರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲು ತಾಕೀತು ಮಾಡಲಾಗಿದೆ.
ಅಮಿತ್ ಶಾ ಸೂಚನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ಬಗ್ಗೆ ಅಲರ್ಟ್ ನೀಡಲಾಗಿದೆ. ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳಿಗೆ ಪುಕಪುಕ ಶುರುವಾಗಿದೆ.
ಕೇಂದ್ರ ಗೃಹ ಇಲಾಖೆಯ ಈ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಪ್ರಜೆಗಳ ಬಗ್ಗೆ ರಾಜ್ಯದಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಅನಧಿಕೃತವಾಗಿ ಇರುವವರನ್ನ ಹುಡುಕುತ್ತಿದ್ದೇವೆ. ಯಾರೆಲ್ಲಾ ಇಲ್ಲಿ ಪಾಕಿಸ್ತಾನದರಿದ್ದಾರೆ ಆ ಮಾಹಿತಿಯನ್ನು ಎನ್ಐಎಗೆ ಕಳಿಸ್ತೇವೆ ಎಂದಿದ್ದಾರೆ.
ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಉತ್ತರ ಕನ್ನಡ ಭಟ್ಕಳದಲ್ಲೇ 14 ಮಂದಿ ಪಾಕಿಸ್ತಾನಿಗಳು ನೆಲೆಸಿದ್ದಾರೆ. 14 ಜನರ ಪೈಕಿ ನಾಲ್ಕು ಜನ ಮಕ್ಕಳು ಭಾರತದಲ್ಲೇ ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಣವಾಗುತ್ತದೆ. 2 ವರ್ಷಕ್ಕೆ ನವೀಕರಿಸಬೇಕಾದ ವೀಸಾ ಪಡೆದು ಮಹಿಳೆಯರು ಇಲ್ಲಿ ನೆಲೆಸಿದ್ದಾರೆ.
ಭಾರತೀಯ ಪುರುಷರನ್ನು ಮದುವೆಯಾಗಿ ಭಟ್ಕಳದಲ್ಲೇ ನೆಲೆಸಿರುವ 14 ಪಾಕ್ ಮಹಿಳೆಯರಿಗೆ 4 ಜನ ಮಕ್ಕಳು ಭಾರತದಲ್ಲೇ ಜನಿಸಿದ್ದಾರೆ. ಇಲ್ಲಿ ಹುಟ್ಟಿದ ಮಕ್ಕಳಿಗೆ ಭಾರತದ ಪೌರತ್ವ ನೀಡಿಲ್ಲ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ.
ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮಂಗಳೂರಿನಲ್ಲಿರುವ ಇಬ್ಬರು ಪಾಕ್ ಮಹಿಳೆಯರು ಕಂಗಾಲಾಗಿದ್ದಾರೆ. ಇಂಟರೀಮ್ ವೀಸಾ ಪಡೆದು ಭಾರತಕ್ಕೆ ಬಂದಿರುವ ಮಹಿಳೆಯರು ಮಂಗಳೂರಿನ ಯುವಕರನ್ನ ವಿವಾಹವಾಗಿದ್ದಾರೆ. ಈ ವಿವಾಹದ ಮೂಲಕ ಭಾರತಕ್ಕೆ ಬಂದವರ ವಾಪಸ್ ಕಳಿಸಲು ಕ್ರಮ ಮಂಗಳೂರು ಪೊಲೀಸರು FRRO ಕಚೇರಿಯಿಂದ ನಿರ್ದೇಶನಕ್ಕೆ ಕಾಯುತ್ತಿದ್ದಾರೆ.
Log in to write reviews