ಪಾಕಿಸ್ತಾನ ಈ ಲೋಗೋ ಅರ್ಥ ತಿಳಿಯೋಕೆ ಗೂಗಲ್ನಲ್ಲೆಲ್ಲಾ ಹುಡುಕಾಡಿತ್ತು. ಆದರೆ ಅದರ ಅರ್ಥ ತಿಳಿಯುವಷ್ಟರಲ್ಲಿ ಪೆಹಲ್ಗಾಮ್ನ ನರಮೇಧಕ್ಕೆ ಪ್ರತ್ಯುತ್ತರ ಕೊಟ್ಟಾಗಿತ್ತು. ಅಷ್ಟಕ್ಕೂ ಇಷ್ಟೊಂದು ಕುತೂಹಲ ಮೂಡಿಸಿದ ಈ ಆಪರೇಷನ್ ಸಿಂಧೂರ್ ಲೋಗೋವನ್ನ ಕ್ರಿಯೇಟ್ ಮಾಡಿದ್ದು ಯಾವುದೋ ಜಾಹೀರಾತು ಕಂಪನಿಯಂತೂ ಅಲ್ಲ. ಲೋಗೋ ಕ್ರಿಯೇಟರ್ಸ್ ಕೂಡ ಅಲ್ಲ. ಈ ಲೋಗೋವನ್ನ ವಿನ್ಯಾಸ ಮಾಡಿದ್ದು, ಲೋಗೋ ತಕ್ಕಂತೆ ಪಾಕ್ನಲ್ಲಿ ವಿಧ್ವಂಸ ನಡೆಸಿದ್ದು ನಮ್ಮ ಸೈನಿಕರೇ.
ಲೋಗೋ ರಿಲೀಸ್ ಮಾಡಿ, ಆ ಲೋಗೋ ಅರ್ಥವಾಗುವಷ್ಟರಲ್ಲಿ, ಪಾಕಿಸ್ತಾನದಲ್ಲಿ ವಿಧ್ವಂಸ ಸೃಷ್ಟಿಸಿದ್ದು ಆಪರೇಷನ್ ‘ಸಿಂಧೂರ’. ಇಡೀ ಪ್ರಪಂಚಕ್ಕೆ ಈ ಲೋಗೋ ತಲೆಗೆ ಹುಳ ಬಿಟ್ಟಿದ್ದಂತೂ ಸುಳ್ಳಲ್ಲ.
ಭಾರತೀಯ ಸೇನೆಯ ಯೋಧರಾದ, ಲೆಫ್ಟಿನೆಂಟ್ ಕರ್ನಲ್ ಹರ್ಷಾ ಗುಪ್ತಾ, ಹವಾಲ್ದಾರ್ ಸುರೀಂದರ್ ಸಿಂಗ್ ರಿಂದ ‘ಸಿಂಧೂರ್’ ಲೋಗೋ ವಿನ್ಯಾಸಗೊಂಡಿತ್ತು. ಸಿಂಧೂರ್ ಪದದ ‘ಓ’ ನಲ್ಲಿ ಕುಂಕುಮ ಹಾಕಿ ಡಿಸೈನ್ ಮಾಡಿ, ಪೆಹಲ್ಗಾಮ್ನಲ್ಲಿ ಕುಂಕುಮ ಕಳೆದುಕೊಂಡವರ ಪ್ರತೀಕವಾಗಿ ಹರ್ಷಾ ಗುಪ್ತಾ, ಸುರೀಂದರ್ ಸಿಂಗ್ ಈ ಲೋಗೋ ಡಿಸೈನ್ ಮಾಡಿದ್ದರು.
ಇವರಿಬ್ಬರು ಸೇನೆಯ ಅಡಿಷನಲ್ ಡೈರೆಕ್ಟರೇಟ್ ಜನರಲ್ ಆಫ್ ಸ್ಟ್ರಾಟಜಿಕ್ ಕಮ್ಯೂನಿಕೇಷನ್ ವಿಭಾಗದವರು. ಮೇ,7 ರ ಬೆಳಗ್ಗೆ 1.51ಕ್ಕೆ ಈ ಲೋಗೋ ಸಹಿತ ಟ್ವೀಟ್ ಮಾಡಿದ್ದ ಭಾರತೀಯ ಸೇನೆ. ಪಾಕಿಗರನ್ನ ದಿಕ್ಕೆಡಿಸಿತ್ತು. ಆಪರೇಷನ್ ನಂತರ ಪಹಲ್ಗಾಮ್ ಟೆರರ್ ಅಟ್ಯಾಕ್ನಿಂದ ಜೀವ ಬಿಟ್ಟಿವರಿಗೆ, ನ್ಯಾಯ ನೀಡಲಾಗಿದೆ. ಜೈ ಹಿಂದ್ ಎಂದು ಈ ಲೋಗೋ ಸಹಿತ ಭಾರತೀಯ ಸೇನೆ ಟ್ವೀಟ್ ಮಾಡಿತ್ತು.
Log in to write reviews