No Ads

13 ವರ್ಷದ ಸಂಸಾರ ಗಂಡ-ಮಕ್ಕಳನ್ನ ಬಿಟ್ಟು Instagram ಲವರ್ ಜೊತೆ ಜೂಟ್! ಹೆಂಡತಿಯ 2ನೇ ಮದುವೆ ನೋಡಿ ಗಂಡ ಶಾಕ್

ಜಿಲ್ಲೆ 2025-04-09 15:08:35 362
post

ಮದುವೆಯಾಗಿ ಸುಖ ಸಂಸಾರ ಮಾಡಿಕೊಂಡು 13 ವರ್ಷದಲ್ಲಿ ಮಕ್ಕಳಿಗೂ ಜನ್ಮ ನೀಡಿದ ಮಹಿಳೆ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ಯುವಕ ಪರಿಚಿತವಾಗಿದ್ದಾನೆಂದು ಗಂಡ-ಮಕ್ಕಳನ್ನು ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡಿದ್ದಾಳೆ. ಇದೀಗ, ಪೊಲೀಸ್ ಭದ್ರತೆಯಲ್ಲಿ ಮೊದಲ ಗಂಡನ ಮನೆಗೆ ತನ್ನ ಬಟ್ಟೆ ಹಾಗೂ ಆಭರಣಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದಾಳೆ.

ಈ ಘಟನೆ ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ನಡೆದಿದೆ. ಇಲ್ಲೊಬ್ಬ ಮಹಿಳೆಗೆ ಮದುವೆಯಾಗಿ, ಮಕ್ಕಳಿದ್ದು, ಸುಂದರ ಸಂಸಾರವಿದ್ದರೂ ಎಲ್ಲವನ್ನೂ ತೊರೆದು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಕೇವಲ ಒಂದು ವಾರದಲ್ಲಿ ಪ್ರೀತಿ ಮಾಡಿ, ಮದುವೆಯನ್ನೂ ಮಾಡಿಕೊಂಡಿದ್ದಾಳೆ. ಇದೀಗ ಗಂಡನೂ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಹೆಂಡತಿಯ 2ನೇ ಮದುವೆಯನ್ನು ನೋಡಿ ಶಾಕ್ ಆಗಿದ್ದು, ಪತಿ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಹೊದ ಮಹಿಳೆಯ ವಿರುದ್ಧ ದೂರು ನೀಡಿದ್ದರು.

ನೇತ್ರಾವತಿ ಎನ್ನುವ ಮಹಿಳೆ ರಮೇಶ್ ಎನ್ನುವವರನ್ನು ಕಳೆದ 13 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಇಬ್ರೂ ಅದ್ಧೂರಿ ವಿವಾಹ ಮಾಡಿಕೊಂಡು 13 ವರ್ಷಗಳ ಕಾಲ ಸಂಸಾರವನ್ನೂ ಮಾಡಿದ್ದಾರೆ. ಗಂಡ ಹಾಗೂ ಗಂಡನ ಮನೆಯವರೊಂದಿಗೆ ಉತ್ತಮವಾಗಿ ಹೊಂದಿಕೊಂಡು ಜೀವನ ಮಾಡುತ್ತಿದ್ದ ನೇತ್ರಾವತಿಗೆ ಮಕ್ಕಳು ಕೂಡ ಇವೆ. ಗಂಡ-ಮಕ್ಕಳೊಂದಿಗೆ ಸುಖ ಸಂಸಾರ ಮಾಡಿಕೊಂಡಿದ್ದ ನೇತ್ರಾವತಿ ಒಂದು ಮೊಬೈಲ್ ಖರೀದಿ ಮಾಡಿದ್ದಾಳೆ. ಗಂಡ ಡ್ರೈವರ್ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಹೋದರೆ ರಾತ್ರಿಯೇ ಮನೆಗೆ ಬರುತ್ತಿದ್ದನು. ಕೆಲವು ಸಂದರ್ಭದಲ್ಲಿ ಮೂರ್ನಾಲ್ಕು ದಿನ ಅಥವಾ ಒಮದು ವಾರಗಳ ಕಾಲ ಪ್ರಯಾಣಿಕರನ್ನು ಕರೆದುಕೊಂಡು ಟ್ರಿಪ್ ಹೋಗಬೇಕಾಗುತ್ತಿತ್ತು.

ಹೊಸ ಮೊಬೈಲ್‌ನಲ್ಲಿ ಸಮಯ ಕಳೆಯಲೆಂದು ಇನ್‌ಸ್ಟಾಗ್ರಾಮ್ ಖಾತೆಯನ್ನು ಆರಂಭಿಸಿದ ನೇತ್ರಾವತಿ ಆರಂಭದಲ್ಲಿ ತಾನೂ ಕೂಡ ಸಣ್ಣದಾಗಿ ರೀಲ್ಸ್ ಮಾಡಲು ಆರಂಭಿಸಿದ್ದಾಳೆ. ಈಕೆಯನ್ನು ನೋಡಿದ ಕೆಲವರು ಇನ್‌ಸ್ಟಾಗ್ರಾಮ್‌ನಲ್ಲಿ ನೇರವಾಗಿ ಮೆಸೇಜ್ (ಡಿಎಂ) ಮಾಡುವುದಕ್ಕೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶಕ್ಕೆ ರಿಪ್ಲೈ ಮಾಡುತ್ತಿದ್ದ ನೇತ್ರಾವತಿ, ಸಂತೋಷ್ ಎನ್ನುವವನೊಂದಿಗೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದಾಳೆ. ಈ ಬಗ್ಗೆ ಮನೆಯವರಿಗೆ ಯಾವುದೇ ಸುಳಿವು ಕೂಡ ಸಿಕ್ಕಿಲ್ಲ.

ಕಳೆದೊಂದು ವಾರದ ಹಿಂದೆ ಗಂಡ, ಮಕ್ಕಳು ಹಾಗೂ ಮನೆಯನ್ನು ಬಿಟ್ಟು ಹೋಗಿದ್ದಾಳೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಹೆಂಡತಿ ಮದುವೆಯಾದ ವಿಡಿಯೋ ನೋಡಿ ಗಂಡ ಶಾಕ್ ಆಗಿದ್ದಾನೆ. ನೇತ್ರಾವತಿಯನ್ನು 2ನೇ ಬಾರಿಗೆ ಮದುವೆಯಾದವನ ಹೆಸರು ಸಂತೋಷ್. ಕಳೆದ ವಾರವೇ ಮದುವೆ ಮಾಡಿಕೊಂಡಿದ್ದು, ಇದೀಗ ಮೊದಲ ಗಂಡ ರಮೇಶ್ ಮನೆಗೆ ತನ್ನ ಬಟ್ಟೆಗಳು ಹಾಗೂ ಆಭರಣಗಳನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸ್ ಭದ್ರತೆಯಲ್ಲಿ ಬಂದಿದ್ದಾಳೆ. ಇದನ್ನು ನೋಡಿದ ಮೊದಲ ಗಂಡನ ಮನೆಯವರು ತರಾಟೆಗೆ ತೆಗೆದುಕೊಂಡಿದ್ದು, ನೇತ್ರಾವತಿ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಮೇಶ್ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner