ಬೇಸಿಗೆಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಳಗಿನ ಹೊತ್ತಲ್ಲೇ ಮಟಮಟ ಮಧ್ಯಾಹ್ನದ ಬಿಸಿಲಿನ ಅನುಭವವಾಗುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ಬರೋಬ್ಬರಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 37.6 ಡಿಗ್ರಿ ದಾಖಲಾಗಿತ್ತು.ಬೆಂಗಳೂರಿನಲ್ಲಿ 24 ಡಿಗ್ರಿ ಸೆಲ್ಪಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ 15 ವರ್ಷಗಳಲ್ಲೇ ಇದು ಅತ್ಯಂತ ಹೆಚ್ಚಿನ ತಾಪಮಾನ. ಬಿಸಿಲು ಹೆಚ್ಚಾಗ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡಲು ಶುರುವಾಗಿದೆ. ಡಿಹೈಡ್ರೇಷನ್, ಉಸಿರಾಟದ ಸಮಸ್ಯೆ, ಅತಿಸಾರ ಸೇರಿದಂತೆ ನಾನಾ ರೀತಿಯ ಕಾಯಿಲೆಗಳು ಬಾಧಿಸುತ್ತಿವೆ. ಇದರ ನಡುವೆ ಡೆಂಘೀ ಹಾಗೂ ಚಿಕನ್ ಗುನ್ಯಾ ಹೆಚ್ಚಾಗುತ್ತಿವೆ. ಕಳೆದ ಮೂರು ತಿಂಗಳಿನಲ್ಲಿ 1663 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 535 ಕೇಸ್ ದಾಖಲಾಗಿವೆ. ಸದ್ಯ ಬಿರುಬಿಸಲ ಹೊಡೆತಕ್ಕೆ ಬೆಂಗಳೂರಿಗರು ಹೈರಾಣಾಗಿದ್ದಾರೆ. ಇದರ ಜೊತೆಗೆ ಕಾಲರ, ಡೆಂಘೀ ಅಂತಾ ರೋಗಗಳು ಹೆಚ್ಚಾಗಿವೆ. ಹೀಗಾಗಿ ಜನ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.ಕಲಬುರಗಿಯಲ್ಲಿ ಬರೋಬ್ಬರಿ 42 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇನ್ನು ಗಡಿಜಿಲ್ಲೆ ಬೀದರ್‌ನಲ್ಲಿ ರಣ ಬಿಸಿಲು ಕೇಕೆ ಹಾಕುತ್ತಿದ್ದು, 42 ಡಿಗ್ರಿ ತಾಪಮಾನ ದಾಖಲಾಗಿದೆ. 10 ವರ್ಷದ ದಾಖಲೆ ಸರಿಗಟ್ಟಿದೆ 2014ರಲ್ಲಿ ಇಷ್ಟೊಂದು ಪ್ರಮಾಣದ ತಾಪಮಾನ ದಾಖಲಾಗಿತ್ತು. ಬೀದರ್, ಬಸವಕಲ್ಯಾಣ, ಔರಾದ್, ಭಾಲ್ಕಿಯ ಕೆಲ ಗ್ರಾಮಗಳಲ್ಲಿ ಹೆಚ್ಚು ಬಿಸಿಲು ಕಾಣಿಸಿಕೊಂಡಿದೆ. ಬಿಸಿಲಿನ ತಾಪಮಾನ ಮೇ ತಿಂಗಳ ಕೊನೆಯವರೆಗೂ ಇರಲಿದೆ ಎಂದು ಹವಾಮಾನ ತಜ್ಞ ಬಸವರಾಜ್ ಬಿರಾದಾರ ನ್ಯೂಸ್ ಫಸ್ಟ್‌ಗೆ ಮಾಹಿತಿ ನೀಡಿದ್ದಾರೆ.ಇನ್ನು ಬಿಸಿಲ ಬೇಗೆಗೆ ಜನ ಬೆಂದು ಹೋಗುತ್ತಿದ್ದಾರೆ. ಮಧ್ಯಾಹ್ನದ ವೇಳೆ ಹೊರಗಡೆ ಓಡಾಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಮಧ್ಯಾಹ್ನ ಬೀದರ್ ನಗರದ ರಸ್ತೆಗಳು ಬಹುತೇಕ ಖಾಲಿ ಖಾಲಿಯಾಗಿವೆ. ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳಲು ಜನ ಕರವಸ್ತ್ರ, ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಜನರು ಎಳನೀರು, ಕಬ್ಬಿನ ಹಾಲು ಸೇರಿ ತಂಪುಪಾನೀಯಗಳಿಗೆ ಮುಗಿಬೀಳುತ್ತಿದ್ದಾರೆ.
ಬೆಂಗಳೂರು, ಕಲಬುರಗಿ, ಬೀದರ್ನಲ್ಲಿ ರಣ ಬಿಸಿಲ ಕೇಕೆ
No Ads
Log in to write reviews