ಬೈ ಎಲೆಕ್ಷನ್‌ನಲ್ಲಿ ಗೆಲುವು ಸಿಕ್ಕ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಸನದಲ್ಲಿ ಸಮಾವೇಶ ನಡೆಸಲು ಸಜ್ಜಾಗಿದೆ. ಆದ್ರೆ ಇದೇ ಸಮಾವೇಶ ವಿಚಾರಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಾವೇಶದ ನೆಪದಲ್ಲಿ ಸಾಂತ್ವಾನ ಹೇಳೋಕೆ ಹೋಗ್ತಿದ್ದಾರೆ ಅಂತಾ ಪ್ರಶ್ನಿಸಿದ್ದಾರೆ. ಹಾಸನದ ಹೆಣ್ಣು ಮಕ್ಕಳ ಫೋಟೋ ಹಾಕಿ ಬೀದಿಬೀದಿ ಪ್ರಚಾರ ಮಾಡಿದ್ದರು, ಆ ಕ್ಯಾಸೆಟ್ ರಿಲೀಸ್ ಮಾಡಿದ್ದ ಯಾರಾದ್ರೂ ಒಬ್ಬರನ್ನಾದ್ರು ಅರೆಸ್ಟ್ ಮಾಡಿದ್ದೀರಾ? ಇದು ನಿಮ್ಮ ಎಸ್‌ಐಟಿ ತನಿಖೆನಾ.. ಅಂತಾ ಪ್ರಶ್ನಿಸಿರೋ ಕುಮಾರಸ್ವಾಮಿ ಇದಕ್ಕೆಲ್ಲ ಕಾಲ ಉತ್ತರ ಕೊಡುತ್ತೆ, ಕಾದು ನೋಡೋಣ ಎಲ್ಲಿಗೆ ಹೋಗಿ ನಿಲ್ಲುತ್ತೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ.. ಎಂದಿದ್ದೇಕೆ ‘ದಳಪತಿ’..?
No Ads
Log in to write reviews