ಮಂಗಳೂರು, ಡಿ. 03 : ಮಂಗಳೂರಿನಲ್ಲೂ ಫೆಂಗಲ್ ಚಂಡಮಾರುತದ ಅಬ್ಬರದಿಂದ ಭಾರೀ ಮಳೆ ಸುರಿಯುತ್ತಿದೆ. ಕೇರಳ ಗಡಿಭಾಗದ ತಲಪಾಡಿ, ಉಚ್ಚಿಲ, ಉಳ್ಳಾಲ, ಕೋಟೆಕಾರಿನಲ್ಲಿ ವರುಣನ ಆರ್ಭಟಿಸುತ್ತಿದ್ದಾನೆ. ರಾತ್ರಿಯಿಂದ ಬಿಡದೇ ಅಬ್ಬರಿಸ್ತಿರೋ ರಣಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಲವಡೆ ಜಲಾವೃತವಾಗಿದೆ. ಉಚ್ಚಿಲ ಬಳಿ ಭಾರೀ ಮಳೆಗೆ ಅಂಡರ್ ಪಾಸ್‌ಗೆ ನೀರು ನುಗ್ಗಿ ಅವಾಚಿತರ ಸೃಷ್ಟಿಯಾಗಿದೆ. ಅಂಡರ್ ಪಾಸ್‌ನಲ್ಲಿ ಕಾರು ದ್ವಿಚಕ್ರ ವಾಹನಗಳನ್ನ ಸಾಗಿಸಲಾಗದೇ ಪರದಾಡುತ್ತಿದ್ದಾರೆ. ಹೆದ್ದಾರಿ ಬದಿಗಳಲ್ಲೂ ನೀರು ತುಂಬಿಕೊoಡು ವಾಹನ ಸಂಚಾರಕ್ಕೆ ಭಾರಿ ಸಮಸ್ಯೆಯಾಗಿದೆ.
ಕರಾವಳಿಯಲ್ಲಿ ಸೈಕ್ಲೋನ್ ಅಬ್ಬರ..
No Ads
Log in to write reviews