6 ವರ್ಷ, 3 ಸಿನಿಮಾ, ಮೂರು ಸಾವಿರ ಕೋಟಿ! ಯಶ್ ಅದ್ಭುತ ಬಾಕ್ಸ್ ಆಫೀಸ್ ದಾಖಲೆ!!

6 ವರ್ಷ, 3 ಸಿನಿಮಾ, ಮೂರು ಸಾವಿರ ಕೋಟಿ! ಯಶ್ ಅದ್ಭುತ ಬಾಕ್ಸ್ ಆಫೀಸ್ ದಾಖಲೆ!!

ಸ್ಟಾರ್ ನಟ ಯಶ್ ಅವರು 6 ವರ್ಷಗಳ ಅವಧಿಯಲ್ಲಿ 3 ಸಿನಿಮಾ ಮಾಡಿ 3000 ಬಾಕ್ಸ್ ಆಫೀಸ್ ಸಾಮ್ರಾಜ್ಯ ನಿರ್ಮಿಸಿದ್ದಾರೆ.

ಕೆಜಿಎಫ್​ ಸಿನಿಮಾಗಳು ಬಂದು ವರ್ಷಗಳಾಗಿವೆ. ಕಳೆದ ಹಲವಾರು ವರ್ಷಗಳನ್ನು ನೋಡಿದರೆ ನಟ ಯಶ್ ಅವರು ರಾಕಿ ಭಾಯ್ ಆಗಿ ತಮಗೆ ಸಿಕ್ಕಿದ ಕ್ರೇಜ್ ಹೆಚ್ಚಿಸುವ ಮಟ್ಟದಲ್ಲಿ ಮತ್ತು ಸಿನಿಮಾಗೆ ಮತ್ತಷ್ಟು ಕೊಡುಗೆ ನೀಡುವ ನಿಟ್ಟಿನಲ್ಲಿ ದೊಡ್ಡ ರಿಸ್ಕ್​​ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಟಾಕ್ಸಿಕ್ ಸಿನಿಮಾ ಕೂಡಾ ದೊಡ್ಡಮಟ್ಟದಲ್ಲಿಯೆ ಮಾಡಿದ ಸಿನಿಮಾ ಆಗಿತ್ತು. ರಾಕಿಂಗ್ ಸ್ಟಾರ್ ಡಿಫರೆಂಟ್ ಸ್ಕ್ರಿಪ್ಟ್ ಟ್ರೈ ಮಾಡಿ ರಿಸ್ಕ್ ತೆಗೆದುಕೊಳ್ಳುತ್ತಿರುವುದು ವಿಸಿಬಲ್ ಆಗಿದೆ. ರಾಮಾಯಣ ರಾಕಿ ಭಾಯ್​ನ ಕೈ ಹಿಡಿದಿದೆ.

ರಾಕಿಂಗ್ ಸ್ಟಾರ್ ಒಂದು ದಶಕಕ್ಕಿಂತಲೂ ಕಡಿಮೆ ಅವಧಿಯಲ್ಲಿ ಕೇವಲ ಮೂರು ಸಿನಿಮಾದಿಂದ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ 3,000 ಕೋಟಿ ರೂ. ಬಾಚಿದ್ದಾರೆ. ಕೆಜಿಎಫ್: ಅಧ್ಯಾಯ 2 ರಿಂದ ಟಾಕ್ಸಿಕ್ ಮತ್ತು ರಾಮಾಯಣದವರೆಗೆ , ನಟ ಗಮನಾರ್ಹವಾದ ಬೆಳವಣಿಗೆ ಕಂಡಿದ್ದಾರೆ.

ಕೆಜಿಎಫ್ 2 ಬಾಕ್ಸ್ ಆಫೀಸ್ ಬಿಗ್ ಬ್ರೇಕ್
ಕೆಜಿಎಫ್: ಅಧ್ಯಾಯ 2 ರೊಂದಿಗೆ ಯಶ್ ಅವರ ಈ ಪ್ರಯಾಣವು ನಿರ್ಣಾಯಕ ಹಂತವನ್ನು ತಲುಪಿತು. 2022 ರಲ್ಲಿ ಬಿಡುಗಡೆಯಾದ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಟ್ರೆಂಡ್ ಆಯಿತು. ವಿಶ್ವಾದ್ಯಂತ ಸುಮಾರು 1,191 ಕೋಟಿ ರೂ.ಗಳನ್ನು ಸಂಗ್ರಹಿಸಿತು. ಈ ಚಿತ್ರವು ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತು.

ಆ ನಂತರ ಹಲವಾರು ವರ್ಷ ಕಳೆದು ಅವರು ಟಾಕ್ಸಿಕ್ ನಲ್ಲಿ ನಟಿಸಿದರು. ಅವರ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟರು. ರಾಕಿ ಭಾಯ್ ಪ್ರಪಂಚದಿಂದ ದೂರ ಸರಿದು, ಗೀತು ಮೋಹನ್ ದಾಸ್ ನೇತೃತ್ವದಲ್ಲಿ ಯಶ್ ವಿಭಿನ್ನ ಸಿನಿಮೀಯ ಪ್ರಪಂಚಕ್ಕೆ ಕಾಲಿಟ್ಟರು. ಆದರೆ ಈ ಸಿನಿಮಾ ಅಷ್ಟೊಂದು ಹಿಟ್ ಆಗಲಿಲ್ಲ.

ನಂತರ ರಾಮಾಯಣ ಸಿನಿಮಾ ಬಂದಿದೆ. ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಸಿನಿಮಾದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸುವ ಮೂಲಕ, ಯಶ್ ಹೊಸ ಮೈಲಿಗಲ್ಲು ತಲುಪಿದರು. ಈ ಚಿತ್ರವು 13 ದಿನಗಳಲ್ಲಿ ವಿಶ್ವಾದ್ಯಂತ 1,483.50 ಕೋಟಿ ರೂ.ಗಳನ್ನು ಸಂಗ್ರಹಿಸುವುದರೊಂದಿಗೆ , ಕೆಜಿಎಫ್: ಅಧ್ಯಾಯ 2 , ಟಾಕ್ಸಿಕ್ ಮತ್ತು ರಾಮಾಯಣದಿಂದ ಅವರ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಸಂಗ್ರಹವು 3,000 ಕೋಟಿ ರೂ.ಗಳನ್ನು ದಾಟಿದೆ.

ಜಸ್ಟ್ 3 ಸಿನಿಮಾಗಳ ಮೂಲಕ 3000 ಗಡಿ ದಾಟುವುದು ಸುಲಭದ ಮಾತೇ ಅಲ್ಲ. ಆದರೆ ಯಶ್ ಇದನ್ನು ಮಾಡಿ ತೋರಿಸಿದ್ದು, ಸಿನಿಮಾದ ಅವರ ಪ್ರಯಾಣ ಅದ್ಭುತವಾಗಿಸಿದೆ.

ಮೂರು ಚಲನಚಿತ್ರಗಳು ಮತ್ತು ವಿಶ್ವಾದ್ಯಂತ 3,000 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದ ನಂತರ, ಯಶ್ ಭಾರತೀಯ ಚಿತ್ರರಂಗದಲ್ಲಿ ತಮ್ಮನ್ನು ತಾವು ಒಂದು ಅದ್ಭುತ ಶಕ್ತಿಯಾಗಿ ಸ್ಥಾಪಿಸಿಕೊಂಡಿದ್ದಾರೆ. ಕೆಜಿಫ್ ಸಿನಿಮಾಗಳ ಮೂಲಕ ಯಶ್ ಗಳಿಸಿದ್ದ ಕ್ರೇಜ್ ಈಗ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹೆಚ್ಚಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

‘ಟಾಕ್ಸಿಕ್’ ಮೂಲಕ ಮತ್ತೊಂದು ಹೊಸ ಪ್ರಯೋಗ
ಕೆಜಿಎಫ್ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಯಶ್ ಅವರು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರೊಂದಿಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ಕೈಜೋಡಿಸಿದರು. ರಾಕಿ ಭಾಯ್ ಪಾತ್ರಕ್ಕಿಂತ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡ ಯಶ್, ತಮ್ಮ ಅಭಿಮಾನಿಗಳಿಗೆ ಹೊಸ ರೀತಿಯ ಸಿನಿಮಾ ಅನುಭವ ನೀಡಿದರು.

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ಸುಮಾರು 342 ಕೋಟಿ ರೂಪಾಯಿ ಗಳಿಸಿದೆ

ರಾವಣನಾಗಿ ಅಬ್ಬರಿಸಿದ ರಾಕಿಂಗ್ ಸ್ಟಾರ್!
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ನಿರ್ವಹಿಸಿರುವ ಯಶ್ ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದಾರೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಬಿಡುಗಡೆಯಾದ ಕೇವಲ 14 ದಿನಗಳಲ್ಲಿ ರಾಮಾಯಣ ಸಿನಿಮಾ ವಿಶ್ವದಾದ್ಯಂತ 1,519.05 ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿಯೇ 1,009.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ವಿದೇಶಗಳಲ್ಲಿ 510 ಕೋಟಿ ರೂಪಾಯಿ ಗಳಿಸಿದೆ.

ಮೂರು ಸಿನಿಮಾಗಳಿಂದಲೂ ನೂರು ಕೋಟಿ ಓಪನಿಂಗ್!
ಯಶ್ ಅವರ ಕೆಜಿಎಫ್ ಚಾಪ್ಟರ್ 2, ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳು ಸತತವಾಗಿ ಮೊದಲ ದಿನವೇ ವಿಶ್ವದಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವುದು ಮತ್ತೊಂದು ವಿಶೇಷ ಸಾಧನೆಯಾಗಿದೆ.

ಸಾವಿರ ಕೋಟಿ ಕ್ಲಬ್‌ಗೆ ಎರಡು ಬಾರಿ ಎಂಟ್ರಿ!
ಕೆಜಿಎಫ್ ಚಾಪ್ಟರ್ 2 ಹಾಗೂ ರಾಮಾಯಣ ಸಿನಿಮಾಗಳ ಮೂಲಕ ಯಶ್ ಎರಡು ಬಾರಿ ಸಾವಿರ ಕೋಟಿ ಕ್ಲಬ್ ಪ್ರವೇಶಿಸಿದ್ದಾರೆ. ಈ ಮೂಲಕ ಶಾರುಖ್ ಖಾನ್, ಪ್ರಭಾಸ್ ಹಾಗೂ ರಣವೀರ್ ಸಿಂಗ್ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖ ಸ್ಟಾರ್ ನಟರ ಸಾಲಿಗೆ ಸೇರಿದ್ದಾರೆ.

ಕನ್ನಡದಲ್ಲೂ ರಾಮಾಯಣ ಭರ್ಜರಿ ಗಳಿಕೆ!
ರಾಮಾಯಣ ಸಿನಿಮಾದ ಕನ್ನಡ ಡಬ್ಬಿಂಗ್ ಆವೃತ್ತಿ ಕೂಡ 50 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿದೆ. ಬ್ರಿಟನ್, ಥಾಯ್ಲೆಂಡ್ ಹಾಗೂ ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ

Leave a Reply

Your email address will not be published. Required fields are marked *