ವಿಜಯ್ ಡಿವೋರ್ಸ್ ಬೇಡಾ ಅಂದ್ರಾ? ಯಾಕೆ? ದಳಪತಿಗೆ ಆ ಉದ್ದೇಶವೇ ಇಲ್ವಂತೆ!!
ಸಂಗೀತಾ ಅವರೇ ಡಿವೋರ್ಸ್ಗೆ ಮುಂದಾದಾಗ ಸರಿ, ಬಿಡು ಬೇರೆಯಾಗೋಣ ಅಂತ ವಿಜಯ್ ತಕ್ಷಣ ನಿರ್ಧಾರ ಮಾಡಿ ಎಲ್ಲವನ್ನೂ ಅಲ್ಲೇ ಮುಗಿಸಬಹುದಾಗಿತ್ತು. ಆದರೆ ದಳಪತಿಗೆ ಡಿವೋರ್ಸ್ ಇಷ್ಟವಿರಲಿಲ್ವಾ?
ಸಂಗೀತಾ ಹಾಗೂ ವಿಜಯ್ ಅವರ ಡಿವೋರ್ಸ್ ಚಾಪ್ಟರ್ ಸದ್ಯಕ್ಕೆ ಸೈಲೆಂಟ್ ಆಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ವಿಜಯ್ ಹಾಗೂ ಸಂಗೀತಾ ಅವರ ಡಿವೋರ್ಸ್ ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಂಗೀತಾ ಅವರು ವಿಜಯ್ ಅವರಿಂದ ಬೇರೆಯಾಗಲು ನಿರ್ಧರಿಸಿ ವಿಚ್ಛೇದನೆ ಅರ್ಜಿ ಸಲ್ಲಿಸಿದ್ದರು.
ದಾಂಪತ್ಯ ದ್ರೋಹದ ಆರೋಪವನ್ನು ಕೂಡಾ ಮಾಡಿದ್ದರು. ಅವರಿಬ್ಬರ ಡಿವೋರ್ಸ್ ಕೇಸ್ ಭಾರೀ ಸುದ್ದಿಯಾಯಿತು. ಆದರೆ ನಂತರದಲ್ಲಿ ವಿಜಯ್ ಸಿಎಂ ಆದ ಮೇಲೆ ಮತ್ತೆ ಕೇಸ್ ವಿಚಾರಣೆ ಬಂದು ಸಂಗೀತಾ ಅವರು ವಿಚ್ಛೇದನೆ ಅರ್ಜಿ ಹಿಂಪಡೆದುಕೊಂಡಿದ್ದರು.
ಆ ಸಂದರ್ಭದಲ್ಲಿ ಸಂಗೀತಾ ವಿಜಯ್ ಪವರ್ ನೋಡಿ ವಿಚ್ಛೇದನೆ ಅರ್ಜಿ ಹಿಂಪಡೆದರು ಎಂದೇ ಮಾತನಾಡಿಕೊಂಡಿದ್ದರು. ಇದು ಭಾರೀ ಚರ್ಚೆಯಾಯಿತು. ಆದರೆ ಯಾಕೆ ಈ ದಿಢೀರ್ ನಿರ್ಧಾರಕ್ಕೆ ಕಾರಣ ಎನ್ನುವುದು ಇಂದಿಗೂ ಯಾರಿಗೂ ಗೊತ್ತಾಗಿಲ್ಲ. ಅಷ್ಟೇ ಅಲ್ಲದೆ ಈ ಬೆಳವಣಿಗೆ ನಂತರ ವಿಜಯ್ ತ್ರಿಶಾರನ್ನು ಅವಾಯ್ಡ್ ಮಾಡಿಲ್ಲ. ಬದಲಾಗಿ ಇದಾದ ನಂತರವೂ ಅವರು 2 ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಹಾಗಿದ್ದರೆ ಸಂಗೀತಾ ವಿಚ್ಛೇದನೆ ವಾಪಸ್ ಪಡೆದಿದ್ದಲ್ವಾ? ಇದು ವಿಜಯ್ ನಿರ್ಧಾರವಾಗಿತ್ತಾ? ವಿಜಯ್ ಆ ರೀತಿ ಮಾಡಿದ್ದೇಕೆ? ಹೆಂಡತಿ ಡಿವೋರ್ಸ್ ಕೇಳಿದಾಗ ಕೊಟ್ಟು, ಬೇರೆ ಮದುವೆ ಆಗುವ ಅವಕಾಶ ಇದ್ದರೂ ದಳಪತಿ ಹಾಗೇಕೆ ಮಾಡಲಿಲ್ಲ? ಇದರ ಹಿಂದಿನ ರಹಸ್ಯ ಏನು?
ಇತ್ತೀಚೆಗೆ ರಾಜಕೀಯ ವಿಶ್ಲೇಷಕ ಚೆಗುವೇರ ಜಯಶಂಕರ್ ಅವರು ಈ ಸಂಬಂಧ ಮಾತನಾಡಿದ್ದಾರೆ. ರಿಫ್ಲೆಕ್ಟ್ ಲೈಫ್ ಸ್ಟೈಲ್ ಜೊತೆ ಮಾತನಾಡಿದ ಅವರು ಕೆಲವೊಂದು ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ.
ತುಂಬಾ ಜನರು ವಿಜಯ್ ಸಿಎಂ ಆದರು, ಅದಕ್ಕಾಗಿಯೇ ಸಂಗೀತಾ ಅವರು ಡಿವೋರ್ಸ್ ಹಿಂಪಡೆದರು ಎಂದು ಹೇಳುತ್ತಿದ್ದಾರೆ. ಆದರೆ ಬಹಳಷ್ಟು ಜನರಿಗೆ ಗೊತ್ತಿಲ್ಲ, ಸಂಗೀತಾ ಅವರ ಬ್ಯಾಗ್ರೌಂಡ್ ಏನು ಎನ್ನುವುದು ಗೊತ್ತಿಲ್ಲದೆ ಈ ರೀತಿ ಮಾತನಾಡುತ್ತಿದ್ದಾರೆ. ಅವರಿರುವ ಪ್ರಾಪರ್ಟಿ, ಬ್ಯುಸಿನೆಸ್ ಸಾಮ್ರಾಜ್ಯದ ಬಗ್ಗೆ ಮಾತನಾಡುತ್ತಾ ಹೋದರೆ ನಿಮಗೆ ಇದೆಲ್ಲ ಆ ಹೇಗೆ ಗೊತ್ತು ಎಂದು ಕೇಳಬಹುದು. ನಮಗೆ ಅದು ಅವಶ್ಯಕತೆ ಇಲ್ಲ. ಆದರೆ ಅವರು ಸಾಧಾರಣವಾದ ಫ್ಯಾಮಿಲಿ ಅಲ್ವೇ ಅಲ್ಲ ಎಂದಿದ್ದಾರೆ.
ಇವರಿಗೆ ಆಸ್ತಿ, ಹಣ, ಫೇಮ್, ಸಿಎಂ ಪದವಿ ಎಲ್ಲವೂ ಈಗ ಸಿಕ್ಕಿದ್ದು. ಆದರೆ ಅವರು ಅದನ್ನೆಲ್ಲ ದಾಟಿ ಬಂದವರು ಎಂದು ಸಂಗೀತಾ ಸ್ವರ್ಣಲಿಂಗಂ ಬಗ್ಗೆ ಮಾತನಾಡಿದ್ದಾರೆ.
ಅವರಿಗೆ ಗೊತ್ತಿಲ್ವಾ? ವಿಜಯ್ ಅಧಿಕಾರಕ್ಕೆ ಬರಬಹುದು, ಬರದೆಯೂ ಇರಬಹುದು. ಏನು ಬೇಕಾದರೂ ಆಗಬಹುದು ಎನ್ನುವುದು ಅವರಿಗೆ ಗೊತ್ತಿಲ್ವಾ? ಆದರೆ ಆ ನಂತರದ ನಿರ್ಧಾರ ಎಮೋಷನಲ್ ಆಗಿರುವದ್ದು ಎಂದು ಹೇಳಿದ್ದಾರೆ.
ಕಲ್ಪತಿ ಮದುವೆಗೆ ಹೋಗುವ ಮೊದಲು ಅವರು ಜಗಳ ಮಾಡಿದ್ದರು. ಡಿವೋಸ್ ಕೇಸ್ ಬೆಳವಣಿಗೆಯಾಗಿತ್ತು. ಜಗಳವಾಗಿತ್ತು. ಅದಾದ ನಂತರ ವಿಜಯ್ ಮದುವೆಗೆ ಧೈರ್ಯವಾಗಿ ಜೋಡಿಯಾಗಿ ಹೋದರು. ಆ ನಂತರ ಒಂದು ಘಟ್ಟದಲ್ಲಿ ವಿಜಯ್ ಸಿಎಂ ಆದ ನಂತರ ಅದರ ಹಿಂದೆ ಏನೇನು ನಡೆಯಿತು ಎನ್ನುವುದು ಯಾರಿಗಾದರೂ ಗೊತ್ತಾ? ಕುಟುಂಬದೊಳಗೆ ಏನೇನೋ ಆಗಿರಬಹುದು ಎಂದಿದ್ದಾರೆ.
ಇನ್ನೊಂದು ಸಂಸಾರದ ಉದ್ದೇಶವಿಲ್ಲ
ಇನ್ನು ವಿಜಯ್ ಅವರಿಗೆ ಡಿವೋರ್ಸ್ ಬೇಕು ಎಂದಿದ್ದರೆ ಸಂಗೀತಾ ಅರ್ಜಿ ಸಲ್ಲಿಸಿದ ಕೂಡಲೇ ಅದಕ್ಕೆ ಒಪ್ಪಿ ಬೇಕಾದ್ದನ್ನು ಸೆಟ್ಲ್ ಮಾಡಿ ಎಲ್ಲವನ್ನೂ ಮುಗಿಸಬಹುದಾಗಿತ್ತು. ವಿಜಯ್ ಅವರಿಗೆ ಆ ಉದ್ದೇಶ ಇಲ್ಲ. ಡಿವೋರ್ಸ್ ಕೊಟ್ಟು ಇನ್ನೊಂದು ಮದುವೆಯಾಗಿ ಸಂಸಾರ ಮಾಡುವ ಉದ್ದೇಶ ವಿಜಯ್ಗೆ ಇಲ್ಲ ಎಂದು ಹೇಳಿದ್ದಾರೆ.
ಸಂಗೀತಾ ಅವರಿಂದ ದೂರವಾಗುವ ಉದ್ದೇಶ ಇದ್ದಿದ್ದರೆ ಅವರು ಅರ್ಜಿ ಸಲ್ಲಿಸಿದಾಗಲೇ, ಸರಿ ನೀವೇ ಡಿವೋರ್ಸ್ ಅರ್ಜಿ ಸಲ್ಲಿಸಿದ್ರಾ? ಒಳ್ಳೆಯದಾಯಿತು ಬಿಡಿ. ಬೇರೆಯಾಗೋಣ ಅಂತ ಎಲ್ಲವನ್ನೂ ಮುಗಿಸುತ್ತಿದ್ದರು ಎಂದಿದ್ದಾರೆ.
ವಿಜಯ್ ಡಿವೋರ್ಸ್ ಬೇಡಾ ಅಂದ್ರಾ? ಯಾಕೆ? ದಳಪತಿಗೆ ಆ ಉದ್ದೇಶವೇ ಇಲ್ವಂತೆ!!
