ಟೆಹ್ರಾನ್: ಹಾರ್ಮುಜ್ ಜಲಸಂಧಿಯ ಪೂರ್ವ ಭಾಗದಲ್ಲಿ ತೈಲ ಟ್ಯಾಂಕರ್ ನೌಕಾ ಗಣಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್ ಸೇನೆ ತಿಳಿಸಿದೆ. ಹಡಗು ಸಂಚರಣೆ ನಿಯಮ ಉಲ್ಲಂಘಿಸಿ, ಅನಧಿಕೃತ ಮಾರ್ಗದಲ್ಲಿ ಸಂಚರಿಸಿತ್ತು ಎಂದು ಆರೋಪಿಸಿದೆ.
ಟ್ಯಾಂಕರ್ ತನ್ನ ಸಂಚರಣೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತ್ತು ಎಂದು ಇರಾನ್ ನೌಕಾಪಡೆ ಹೇಳಿದ್ದು, ಇರಾನ್ ಅನುಮೋದಿತ ಮಾರ್ಗಗಳಲ್ಲೇ ಸಂಚರಿಸುವಂತೆ ಇತರ ಹಡಗುಗಳಿಗೆ ಎಚ್ಚರಿಕೆ ನೀಡಿದೆ.
ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ಬಳಿಕ ಇರಾನ್ ಜಲಸಂಧಿಯ ಮೇಲಿನ ನಿಯಂತ್ರಣ ಬಿಗಿಗೊಳಿಸಿತ್ತು.

ಇದೇ ವೇಳೆ, ಇಸ್ಫಹಾನ್ ಉಪ ಗವರ್ನರ್ ಅಕ್ಬರ್ ಸಲೇಹಿ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯಗೊಂಡಿದೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ. ಪ್ರಾಂತ್ಯದ ವಾಯುಪ್ರದೇಶದಲ್ಲಿ ಶತ್ರು ವಿಮಾನಗಳು ಪತ್ತೆಯಾಗಿಲ್ಲ ಎಂದಿದ್ದಾರೆ.
ಹಾರ್ಮುಜ್ ಮೇಲೆ ಹಾರುತ್ತಿದ್ದ MQ-1 ಪ್ರಿಡೇಟರ್ ಡ್ರೋನ್ ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಅಲ್ಲದೆ, ಅಮೆರಿಕದ MQM-170 ಔಟ್ಲಾ ಡ್ರೋನ್ ಸೇರಿದಂತೆ ಈ ಪ್ರದೇಶದಲ್ಲಿ ಎಂಟು ಡ್ರೋನ್ಗಳನ್ನು ಸೆರೆಹಿಡಿದಿರುವುದಾಗಿ ಐಆರ್ಜಿಸಿ ನೌಕಾಪಡೆ ತಿಳಿಸಿದೆ.
