ಬಸ್ ಟಿಕೆಟ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಇದೀಗ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದ ಸಾರಿಗೆ ನೌಕರರ ವೇತನ ಹಿಂಬಾಕಿ ಪಾವತಿಗೆ ಸರ್ಕಾರ ಮತ್ತೊಂದು ಕಂತಿನ ಅನುದಾನ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ವಿಶೇಷ ಅನುದಾನದಡಿ ಸಾರಿಗೆ ನಿಗಮಗಳಿಗೆ 280 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ .
ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವರು
ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಾರಿಗೆ ಸಚಿವ ಭೈರತಿ ಸುರೇಶ್ ಅವರು, ನೌಕರರಿಗೆ ಹಿಂಬಾಕಿ ಹಣದ ₹1200 ಕೋಟಿ ಪೈಕಿ, ಬಾಕಿ ಉಳಿಸಿದ್ದ 560 ಕೋಟಿ ಹಣದಲ್ಲಿ ಇದೀಗ ₹280 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ₹1271 ಕೋಟಿ ಬಾಕಿ ಇದ್ದ ಹಿಂಬಾಕಿಯಲ್ಲಿ ₹450 ಕೋಟಿ ಹಣ ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಯ್ತು. ಎರಡನೇ ಹಂತದಲ್ಲಿ ₹170 ಕೋಟಿ. ಇವತ್ತು ಇವತ್ತು ₹280 ಕೋಟಿ ಹಣವನ್ನ ಸರ್ಕಾರದ ವಿಶೇಷ ಅನುದಾನ ಅಡಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ. ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಅವರಿಗೆ ಸಚಿವ ಭೈರತಿ ಸುರೇಶ್ ಧನ್ಯವಾದ ತಿಳಿಸಿದ್ದಾರೆ.
ವಾಹನ ಸವಾರರೇ ಹುಷಾರ್
ಇನ್ನು ಇದೇ ವೇಳೆ ವಾಹನ ಸಂಚಾರದ ನಿಯಮಗಳ ಬಗ್ಗೆಯೂ ಸಚಿವ ಭೈರತಿ ಸುರೇಶ್ ಅವರು ಮಾತಾಡಿದ್ದು, ಹೊಸ ವರ್ಷಕ್ಕೆ ವಾಹನ ಸವಾರರಿಗೆ ಟಫ್ ರೂಲ್ಸ್ ಬರಲಿದೆ ಎಂದಿದ್ದಾರೆ. ಫುಟ್ ಪಾತ್ ನಲ್ಲಿ ಟೂ ವೀಲರ್ ಓಡಿಸಿದ್ರೇ 5000 ದಂಡ ಹಾಕುತ್ತೇವೆ ಅಷ್ಟೇ ಅಲ್ಲದೇ ವಾಹನವನ್ನೇ ಸೀಜ್ ಮಾಡೋದಾಗಿಯೂ ಸಚಿವರಿ ಎಚ್ಚರಿಕೆ ನೀಡಿದ್ದಾರೆ.
ಹಾಫ್ ಹೆಲ್ಮೆಟ್ ಬ್ಯಾನ್ ಫುಟ್ ಪಾತ್ ವಾಹನ ದಂಡ ಹೆಚ್ಚಳ
ಹೊಸ ವರ್ಷಕ್ಕೆ ಹೊಸ ರೂಲ್ಸ್ ಜಾರಿಯಾಗಲಿದೆ. ಈಗಾಗಲೇ ಈ ವಿಚಾರದಲ್ಲಿ ಕಾಯ್ದೆ ಜಾರಿಗೆ ಕಾನೂನು ಅಂಶಗಳ ಪರಿಶೀಲನೆ ಬಹುತೇಕ ಅಂತ್ಯಗೊಂಡಿದ್ದು, ಹಾಫ್ ಹೆಲ್ಮೆಟ್ನನ್ನು ರಾಜ್ಯದ್ಯಾಂತ ಬ್ಯಾನ್ ಮಾಡಲಾಗಿದೆ ಎಂದ್ರು. ಹಾಫ್ ಹೆಲ್ಮೆಟ್ ತಯಾರಿಕಾ ಕೇಂದ್ರ ಕೂಡ ಉತ್ಪಾದನೆ ನಿಲ್ಲಿದೆ. ಹೊಸ ವರ್ಷಕ್ಕೆ ಕಾಯ್ದೆ ರೂಪದಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ನಾಲ್ಕು ವರ್ಷಗಳ ವೇತನ ಬಾಕಿ – ಕೊನೆಗೂ ಸರ್ಕಾರದ ಸ್ಪಂದನೆ!
ರಾಜ್ಯದ ಸಾರಿಗೆ ನಿಗಮಗಳ ನೌಕರರು ಹಲವು ವರ್ಷಗಳಿಂದ ವೇತನ ಪರಿಷ್ಕರಣೆ, ವೇತನ ವ್ಯತ್ಯಾಸದ ಬಾಕಿ ಮೊತ್ತ ಹಾಗೂ ವಿವಿಧ ಆರ್ಥಿಕ ಸೌಲಭ್ಯಗಳಿಗಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ.
ವೇತನ ಪರಿಷ್ಕರಣೆ ಜಾರಿಯಾದ ನಂತರ ಹಿಂದಿನ ಅವಧಿಗೆ ಸಂಬಂಧಿಸಿದ ವೇತನ ವ್ಯತ್ಯಾಸವನ್ನು ಪಾವತಿಸುವುದು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ₹280 ಕೋಟಿ ಅನುದಾನ ಸಾರಿಗೆ ನೌಕರರ ವೇತನ ಹಿಂಬಾಕಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಆದರೆ ಈ ಮೊತ್ತದಿಂದ ಎಲ್ಲ ನೌಕರರ ಸಂಪೂರ್ಣ ಬಾಕಿ ಪಾವತಿಯಾಗಲಿದೆಯೇ ಅಥವಾ ಇನ್ನೂ ಹೆಚ್ಚುವರಿ ಅನುದಾನದ ಅಗತ್ಯವಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.
ಶೇ.12.5ರಷ್ಟು ವೇತನ ಹೆಚ್ಚಳದ ಬಳಿಕ ಮತ್ತೊಂದು ಸಿಹಿಸುದ್ದಿ!
2026ರ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮಗಳ ಸುಮಾರು 1.05 ಲಕ್ಷ ನೌಕರರ ಮೂಲವೇತನವನ್ನು ಶೇ.12.5ರಷ್ಟು ಪರಿಷ್ಕರಿಸಿ ಆದೇಶ ಹೊರಡಿಸಿತ್ತು.
ಈ ಪರಿಷ್ಕರಣೆ 2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಘೋಷಿಸಲಾಗಿತ್ತು. ಇದರಿಂದ ಸಾರಿಗೆ ನಿಗಮಗಳಿಗೆ ವಾರ್ಷಿಕ ಸುಮಾರು ₹873.64 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಲಿದೆ ಎಂದು ವರದಿಯಾಗಿತ್ತು.
ಇದೀಗ ಹಳೆಯ ವೇತನ ಹಿಂಬಾಕಿ ಪಾವತಿಗೆ ಮತ್ತೊಂದು ಕಂತಿನ ಹಣ ಬಿಡುಗಡೆಯಾಗಿರುವುದು ನೌಕರರ ಪಾಲಿಗೆ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ನೌಕರರಿಗೆ ಹಣ ಬಿಡುಗಡೆ!
ಇತ್ತೀಚೆಗೆ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಏರಿಕೆಗೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟ, ಡೀಸೆಲ್ ವೆಚ್ಚ, ನೌಕರರ ವೇತನ ಮತ್ತು ನಿರ್ವಹಣಾ ವೆಚ್ಚ ಹೆಚ್ಚಳವಾಗಿರುವುದನ್ನು ಸರ್ಕಾರ ದರ ಪರಿಷ್ಕರಣೆಗೆ ಕಾರಣಗಳಾಗಿ ಮುಂದಿಟ್ಟಿತ್ತು.
ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಈ ಹಿಂದೆ ನಿಗಮಗಳಿಗೆ ವಾರ್ಷಿಕ ಸುಮಾರು ₹2,000 ಕೋಟಿ ನಷ್ಟವಾಗುತ್ತಿದೆ ಎಂದು ತಿಳಿಸಿದ್ದರು. ನಿಗಮಗಳ ಆರ್ಥಿಕ ಸ್ಥಿತಿ ಸುಧಾರಿಸುವುದು ಮತ್ತು ನೌಕರರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳಾಗಿವೆ
