ನಡುರಸ್ತೆಯಲ್ಲೇ ಕಾರಿಗೆ ಅಡ್ಡಗಟ್ಟಿ ದರೋಡೆ! 20 ಕೋಟಿ ಮೌಲ್ಯದ ಚಿನ್ನ ಹೊತ್ತೊಯ್ದ ನಾಲ್ವರು ಕಳ್ಳರು!
ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಸಿನಿಮೀಯ ಶೈಲಿಯಲ್ಲಿ ಭಾರೀ ಚಿನ್ನದ ದರೋಡೆ ನಡೆದಿದೆ. ಚಿನ್ನ ಸಾಗಿಸುತ್ತಿದ್ದ ಕಾರನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು, ಕಾರಿನ ಗಾಜುಗಳನ್ನು ಪುಡಿಪುಡಿ ಮಾಡಿ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಮಾತ್ರವಲ್ಲ, ಚಿನ್ನದ ವ್ಯಾಪಾರಿಗಳಲ್ಲೂ ಆತಂಕ ಮೂಡಿಸಿದೆ.
ನವೆಂಬರ್ 26ರ ಗುರುವಾರ ರಾತ್ರಿ ಜುಯಿನಗರ ರೈಲು ನಿಲ್ದಾಣದ ಸಮೀಪದ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆಭರಣ ತಯಾರಿಕಾ ಕಂಪನಿಯ ನಾಲ್ವರು ಉದ್ಯೋಗಿಗಳು ಝವೇರಿ ಬಜಾರ್ನಿಂದ ನೆರೂಲ್ನಲ್ಲಿರುವ ಕಂಪನಿಯ ಘಟಕಕ್ಕೆ ಚಿನ್ನವನ್ನು ಕಾರಿನಲ್ಲಿ ಸಾಗಿಸುತ್ತಿದ್ದರು.
ಈ ವೇಳೆ ಎದುರಿನಿಂದ ಬಂದ ಮಾರುತಿ ವ್ಯಾಗನ್ಆರ್ ಕಾರು ಇವರ ವಾಹನಕ್ಕೆ ಅಡ್ಡಗಟ್ಟಿದೆ. ತಕ್ಷಣವೇ ಕಾರಿನಿಂದ ಕೆಳಗಿಳಿದ ಮೂವರು ದುಷ್ಕರ್ಮಿಗಳು ಕಬ್ಬಿಣದ ರಾಡ್ಗಳಿಂದ ಚಿನ್ನ ಸಾಗಿಸುತ್ತಿದ್ದ ಕಾರಿನ ಮುಂಭಾಗದ ಗಾಜು ಹಾಗೂ ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಕಾರಿನಲ್ಲಿದ್ದ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿ, ಚಿನ್ನವಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ದರೋಡೆಯಾದ ಚಿನ್ನದ ಪ್ರಮಾಣ ಬರೋಬ್ಬರಿ 16.4 ಕೆ.ಜಿ. ಎಂದು ತಿಳಿದುಬಂದಿದೆ. ಇದರಲ್ಲಿ ಚಿನ್ನದ ಬಿಸ್ಕತ್ಗಳು, ಸರಗಳು ಹಾಗೂ ಇತರ ಆಭರಣಗಳು ಸೇರಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ತುರ್ಭೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ ವ್ಯಾಗನ್ಆರ್ ಕಾರಿನ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಕಾರಿನ ಮಾಲೀಕನ ವಿಚಾರಣೆ ವೇಳೆ ನಾಲ್ವರು ವ್ಯಕ್ತಿಗಳು ಕಾರನ್ನು ಬಾಡಿಗೆಗೆ ಪಡೆದಿದ್ದ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಆರೋಪಿಗಳ ಗುರುತು ಪತ್ತೆಹಚ್ಚಲು ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ಸದ್ಯ ಆರೋಪಿಗಳು ಥಾಣೆ ಕಡೆಗೆ ಪರಾರಿಯಾಗಿರುವ ಶಂಕೆಯಿದ್ದು, ಅವರನ್ನು ಬಂಧಿಸಲು ತುರ್ಭೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಅಪರಾಧ ವಿಭಾಗದ ಪೊಲೀಸರು ಕೂಡ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.
20 ಕೋಟಿ ರೂಪಾಯಿ ಮೌಲ್ಯದ ಚಿನ್ನ ದೋಚಿದ ಈ ನಾಲ್ವರು ಆರೋಪಿಗಳು ಯಾರು? ದರೋಡೆಗೈದ ಚಿನ್ನವನ್ನು ಎಲ್ಲಿಗೆ ಸಾಗಿಸಿದ್ದಾರೆ? ಆರೋಪಿಗಳ ಬಂಧನಕ್ಕಾಗಿ ಪೊಲೀಸರ ಬಲೆ ಬೀಸಿದ್ದಾರೆ.