ಮಹಿಳೆಯರಿಗೆ ಈಗ ಸ್ವಂತ ಹೆಸರನ್ನೂ ಬಳಸುವ ಹಕ್ಕಿಲ್ಲವೇ? ವೈದ್ಯಕೀಯ ದಾಖಲೆಗಳಲ್ಲಿ ಮಹಿಳೆಯರ ಹೆಸರು ನಿಷೇಧ; ತಾಲಿಬಾನ್ನ ಮತ್ತೊಂದು ವಿವಾದಾತ್ಮಕ ಆದೇಶ!
ಮೊದಲು ಶಿಕ್ಷಣಕ್ಕೆ ನಿರ್ಬಂಧ, ನಂತರ ಉದ್ಯೋಗಕ್ಕೆ ಕಡಿವಾಣ, ಸಾರ್ವಜನಿಕ ಜೀವನದಲ್ಲೂ ನಿರ್ಬಂಧಗಳು. ಇದೀಗ ಮಹಿಳೆಯರ ಸ್ವಂತ ಹೆಸರನ್ನೇ ವೈದ್ಯಕೀಯ ದಾಖಲೆಗಳಲ್ಲಿ ಬಳಸದಂತೆ ತಾಲಿಬಾನ್ ಆಡಳಿತ ನಿರ್ಬಂಧ ಹೇರಿದೆ ಎಂದು ವರದಿಯಾಗಿದೆ.
ಅಷ್ಟೇ ಅಲ್ಲದೆ, ಕೆಲವು ಮಹಿಳೆಯರನ್ನು ಹಸು, ಮೇಕೆ ಎಂಬ ಅವಮಾನಕರ ಪದಗಳಿಂದ ಸಂಬೋಧಿಸಲಾಗುತ್ತಿದೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ. ಅಷ್ಟಕ್ಕೂ ತಾಲಿಬಾನ್ನ ಹೊಸ ಆದೇಶವೇನು? ಈ ನಿರ್ಬಂಧ ಅಫ್ಘಾನಿಸ್ತಾನದಾದ್ಯಂತ ವಿಸ್ತರಣೆಯಾಗುತ್ತಾ?
ವೈದ್ಯಕೀಯ ದಾಖಲೆಗಳಲ್ಲೂ ಮಹಿಳೆಯರ ಹೆಸರು ನಿಷೇಧ!ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿರುವ ಬಾಲ್ಕ್ ಪ್ರಾಂತ್ಯದಲ್ಲಿ ತಾಲಿಬಾನ್ ಅಧಿಕಾರಿಗಳು ಮತ್ತೊಂದು ವಿವಾದಾತ್ಮಕ ನಿರ್ಬಂಧ ಹೇರಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಗಳ ವೈದ್ಯಕೀಯ ದಾಖಲೆಗಳು, ವೈದ್ಯರ ಪ್ರಿಸ್ಕ್ರಿಪ್ಷನ್ಗಳು ಸೇರಿದಂತೆ ಅಧಿಕೃತ ದಾಖಲೆಗಳಲ್ಲಿ ಮಹಿಳೆಯರ ಹೆಸರುಗಳನ್ನು ಬಳಸದಂತೆ ಸೂಚಿಸಲಾಗಿದೆ ಎನ್ನಲಾಗಿದೆ.
ಮಹಿಳಾ ರೋಗಿಗಳನ್ನು ಅವರ ಹೆಸರಿನಿಂದ ಕರೆಯುವ ಬದಲು ಅಜ್ಜಿ ಅಥವಾ ವೃದ್ಧ ಮಹಿಳೆ ಎಂಬ ಅರ್ಥ ನೀಡುವ ‘ಬೀಬಿ’ ಪದವನ್ನು ಬಳಸುವಂತೆ ಆರೋಗ್ಯ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಮಹಿಳೆಯರನ್ನು ಹಸು, ಮೇಕೆ ಎಂದು ಸಂಬೋಧಿಸುವ ಆರೋಪ!ಸ್ಪ್ಯಾನಿಷ್ ಪತ್ರಿಕೆ ಎಲ್ ಪೈಸ್, ಅಫ್ಘಾನ್ ಮಾಧ್ಯಮ ಝಾನ್ ಟೈಮ್ಸ್ ಹಾಗೂ ದಿ ಗಾರ್ಡಿಯನ್ ವರದಿಗಳಲ್ಲಿ ಈ ನಿರ್ಬಂಧದ ಕುರಿತು ಪ್ರಸ್ತಾಪಿಸಲಾಗಿದೆ.
ಜರ್ಮನಿಯಲ್ಲಿ ನೆಲೆಸಿರುವ ಅಫ್ಘಾನ್ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಲಾಲಾ ಒಸ್ಮಾನಿ, ಕೆಲವು ಮಹಿಳೆಯರನ್ನು ‘ಹಸು’, ‘ಮೇಕೆ’ಯಂತಹ ಅವಮಾನಕರ ಪದಗಳಿಂದಲೂ ಸಂಬೋಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮಹಿಳೆಯರ ವೈಯಕ್ತಿಕ ಗುರುತು ಮತ್ತು ಘನತೆಗೆ ಧಕ್ಕೆ ತರುವ ಇಂತಹ ವರ್ತನೆಯ ಬಗ್ಗೆ ಮಹಿಳಾ ಹಕ್ಕುಗಳ ಕಾರ್ಯಕರ್ತರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇಡೀ ಅಫ್ಘಾನಿಸ್ತಾನಕ್ಕೆ ವಿಸ್ತರಣೆಯಾಗುತ್ತಾ ಈ ನಿರ್ಬಂಧ?ಸದ್ಯ ಬಾಲ್ಕ್ ಪ್ರಾಂತ್ಯದಲ್ಲಿ ವರದಿಯಾಗಿರುವ ಈ ನಿರ್ಬಂಧ ಮುಂದಿನ ದಿನಗಳಲ್ಲಿ ದೇಶದ ಇತರ ಭಾಗಗಳಿಗೂ ವಿಸ್ತರಣೆಯಾಗುವ ಆತಂಕ ಎದುರಾಗಿದೆ.
ಮಹಿಳಾ ಹಕ್ಕುಗಳ ಸಂಘಟನೆಯಾದ ಫೆಮೆನಾದ ಅಫ್ಘಾನಿಸ್ತಾನ ಕಾರ್ಯಕ್ರಮದ ಮುಖ್ಯಸ್ಥೆ ಜುಬೈದಾ ಅಕ್ಬರ್ ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಸ್ಥಳೀಯ ಮಟ್ಟದಲ್ಲಿ ಜಾರಿಗೊಳಿಸಲಾಗಿದ್ದ ಕೆಲವು ನಿರ್ಬಂಧಗಳನ್ನು ನಂತರ ದೇಶಾದ್ಯಂತ ವಿಸ್ತರಿಸಲಾಗಿತ್ತು ಎಂಬುದನ್ನು ಅವರು ನೆನಪಿಸಿದ್ದಾರೆ.
ಶಿಕ್ಷಣವಿಲ್ಲ, ಉದ್ಯೋಗಕ್ಕೆ ನಿರ್ಬಂಧ; ಮಹಿಳೆಯರ ಬದುಕು ಮತ್ತಷ್ಟು ಸಂಕಷ್ಟದಲ್ಲಿ!2021ರಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಅಫ್ಘಾನಿಸ್ತಾನದ ಮಹಿಳೆಯರು ಹಲವು ಕಠಿಣ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ.

– ಹೆಣ್ಣುಮಕ್ಕಳಿಗೆ ಆರನೇ ತರಗತಿಯ ನಂತರದ ಶಾಲಾ ಶಿಕ್ಷಣಕ್ಕೆ ನಿರ್ಬಂಧ.
– ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶ ನಿರಾಕರಣೆ.
– ಬಹುತೇಕ ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ನಿರ್ಬಂಧ.
– ಸಾರ್ವಜನಿಕ ಜೀವನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಡಿವಾಣ.
– ಮಹಿಳೆಯರ ವೈದ್ಯಕೀಯ ಶಿಕ್ಷಣ ಹಾಗೂ ತರಬೇತಿಗೂ ನಿರ್ಬಂಧ.
– ಕೆಲವು ಪ್ರಾಂತ್ಯಗಳಲ್ಲಿ ಪುರುಷ ವೈದ್ಯರಿಂದ ಮಹಿಳೆಯರು ಚಿಕಿತ್ಸೆ ಪಡೆಯುವುದಕ್ಕೂ ನಿರ್ಬಂಧ.

ಇದೀಗ ವೈದ್ಯಕೀಯ ದಾಖಲೆಗಳಲ್ಲಿ ಮಹಿಳೆಯರ ಹೆಸರನ್ನೂ ಬಳಸದಂತೆ ಸೂಚಿಸಲಾಗಿದೆ ಎಂಬ ವರದಿ ಮತ್ತಷ್ಟು ಆತಂಕ ಮೂಡಿಸಿದೆ.ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಚಿಕಿತ್ಸೆ ನೀಡುವವರು ಯಾರು?
2024ರ ಡಿಸೆಂಬರ್ನಲ್ಲಿ ಮಹಿಳೆಯರು ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ಪಡೆಯುವುದಕ್ಕೂ ತಾಲಿಬಾನ್ ನಿರ್ಬಂಧ ಹೇರಿತ್ತು ಎಂದು ವರದಿಯಾಗಿದೆ.
ಈಗಾಗಲೇ ಸೇವೆ ಸಲ್ಲಿಸುತ್ತಿರುವ ಮಹಿಳಾ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ನಿವೃತ್ತರಾದರೆ, ಅವರ ಸ್ಥಾನವನ್ನು ತುಂಬಲು ಹೊಸ ಪೀಳಿಗೆಯ ಮಹಿಳಾ ವೈದ್ಯರು ಲಭ್ಯವಾಗದ ಪರಿಸ್ಥಿತಿ ಎದುರಾಗಬಹುದು.
ಇದರಿಂದ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಆರೋಗ್ಯ ಸೇವೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದ್ದು, ಯುನಿಸೆಫ್ ಕೂಡ ಈ ಕುರಿತು ಕಳವಳ ವ್ಯಕ್ತಪಡಿಸಿದೆ.ಅಧಿಕೃತ ದಾಖಲೆ ಪಡೆಯುವುದಕ್ಕೂ ಪುರುಷರ ಸಹಾಯ ಬೇಕು!
2024ರ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಮಹಿಳೆಯರು ನಾಗರಿಕ ದಾಖಲೆಗಳನ್ನು ಪಡೆಯಲು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪುರುಷ ಸಂಬಂಧಿಕರ ಸಹಾಯ ಅಗತ್ಯವಾಗುತ್ತಿದೆ.
ಆರೋಗ್ಯ ಸೇವೆ, ಶಿಕ್ಷಣ, ಬ್ಯಾಂಕಿಂಗ್ ಹಾಗೂ ಮಾನವೀಯ ನೆರವು ಪಡೆಯಲು ಅಧಿಕೃತ ದಾಖಲೆಗಳು ಅತ್ಯಗತ್ಯವಾಗಿವೆ. ಹೀಗಾಗಿ ಇಂತಹ ನಿರ್ಬಂಧಗಳು ಮಹಿಳೆಯರ ದೈನಂದಿನ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರುತ್ತಿವೆ.ಇಷ್ಟೆಲ್ಲ ನಿರ್ಬಂಧಗಳ ನಡುವೆಯೂ ನಿಲ್ಲದ ಮಹಿಳೆಯರ ಹೋರಾಟ!
ತಾಲಿಬಾನ್ ಆಡಳಿತದ ಕಠಿಣ ನಿರ್ಬಂಧಗಳ ನಡುವೆಯೂ ಕೆಲವು ಅಫ್ಘಾನ್ ಮಹಿಳೆಯರು ಗುಪ್ತವಾಗಿ ಶಿಕ್ಷಣ ನೀಡುವುದು ಹಾಗೂ ಸಣ್ಣ ಉದ್ಯಮಗಳನ್ನು ನಡೆಸುವುದನ್ನು ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.
ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಮಹಿಳೆಯರು ಇದೀಗ ತಮ್ಮ ವೈಯಕ್ತಿಕ ಗುರುತನ್ನು ಉಳಿಸಿಕೊಳ್ಳುವುದಕ್ಕೂ ಸವಾಲು ಎದುರಿಸುತ್ತಿದ್ದಾರೆ. ವೈದ್ಯಕೀಯ ದಾಖಲೆಗಳಲ್ಲಿ ಮಹಿಳೆಯರ ಹೆಸರು ಬಳಸದಂತೆ ಹೇರಲಾಗಿದೆ ಎನ್ನಲಾದ ಈ ನಿರ್ಬಂಧ ಅವರ ಮೂಲಭೂತ ಹಕ್ಕುಗಳ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.