ಮೋದಿಗೆ ಹಾಕಿದ್ದಂಥ ಹಾರ ನನಗೂ ಸಿಗುತ್ತೆ ಅಂದುಕೊಂಡಿರಲಿಲ್ಲ!’ ಬೆಂಗಳೂರಿಗರ ಪ್ರೀತಿಗೆ ಹರ್ಭಜನ್ ಸಿಂಗ್ ಫಿದಾ!
ಬೆಂಗಳೂರಿಗೆ ಆಗಮಿಸಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ತಮ್ಮ ಕೊರಳಿಗೆ ಹಾಕಿದ ಬೃಹತ್ ಹಾರವನ್ನು ಕಂಡು ಅಚ್ಚರಿಗೊಂಡ ಭಜ್ಜಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಫೋಟೋಗ್ರಾಫರ್ ಬಳಿ ವಿಶೇಷ ಮನವಿಯನ್ನೂ ಮಾಡಿದ್ದಾರೆ. ಅಷ್ಟಕ್ಕೂ ಬೆಂಗಳೂರಿನಲ್ಲಿ ನಡೆದಿದ್ದೇನು?
ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಂಗಾಲಾಗಿಸುತ್ತಿದ್ದ ಹರ್ಭಜನ್ ಸಿಂಗ್, ಇದೀಗ ಬೆಂಗಳೂರಿಗರ ಪ್ರೀತಿಗೆ ಮನಸೋತಿದ್ದಾರೆ. ಇಂಡಿಯನ್ ಸಾಫ್ಟ್ಬಾಲ್ ಕ್ರಿಕೆಟ್ ಲೀಗ್ (ISCL) ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಭಜ್ಜಿಗೆ ದೊರೆತ ಭವ್ಯ ಸ್ವಾಗತ ಅವರನ್ನೇ ಅಚ್ಚರಿಗೊಳಿಸಿದೆ.
ಕಾರ್ಯಕ್ರಮದಲ್ಲಿ ಕ್ರಿಕೆಟ್ ಕುರಿತು ಮಾತನಾಡುವುದರ ಜೊತೆಗೆ ಬೆಂಗಳೂರಿಗರ ಆತಿಥ್ಯವನ್ನು ಮನಸಾರೆ ಕೊಂಡಾಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆನಪಿಸಿಕೊಂಡಿದ್ದು ವಿಶೇಷವಾಗಿತ್ತು.
ಬೃಹತ್ ಹಾರ ನೋಡಿ ಬೆರಗಾದ ಭಜ್ಜಿ!ಕಾರ್ಯಕ್ರಮದಲ್ಲಿ ಹರ್ಭಜನ್ ಸಿಂಗ್ ಅವರನ್ನು ಸ್ವಾಗತಿಸಲು ಬೃಹತ್ ಹಾರವೊಂದನ್ನು ತರಲಾಗಿತ್ತು. ಹಾರದ ಗಾತ್ರವನ್ನು ಕಂಡು ಅಚ್ಚರಿಗೊಂಡ ಹರ್ಭಜನ್ ಸಿಂಗ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಇಷ್ಟು ದೊಡ್ಡ ಹಾರವನ್ನು ನಾನು ಎಂದಿಗೂ ನೋಡಿರಲಿಲ್ಲ. ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೃಹತ್ ಹಾರದೊಂದಿಗೆ ಸ್ವಾಗತಿಸಿದ್ದ ದೃಶ್ಯಗಳನ್ನು ನೋಡಿದ್ದೆ. ಆದರೆ ಅಂತಹದ್ದೇ ಹಾರ ನನಗೂ ಸಿಗುತ್ತದೆ ಎಂದು ಕಲ್ಪನೆಯನ್ನೂ ಮಾಡಿರಲಿಲ್ಲ ಎಂದು ಹರ್ಭಜನ್ ಹೇಳಿದ್ದಾರೆ.
ಫೋಟೋಗ್ರಾಫರ್ ಬಳಿ ಭಜ್ಜಿ ಮಾಡಿದ್ದೇನು ಗೊತ್ತಾ?ಬೆಂಗಳೂರಿಗರ ಪ್ರೀತಿಗೆ ಮನಸೋತ ಹರ್ಭಜನ್ ಸಿಂಗ್ ಈ ವಿಶೇಷ ಕ್ಷಣವನ್ನು ನೆನಪಿನಲ್ಲಿಟ್ಟುಕೊಳ್ಳಲು ಬಯಸಿದ್ದಾರೆ.
ತಕ್ಷಣವೇ ಫೋಟೋಗ್ರಾಫರ್ ಕಡೆ ತಿರುಗಿ, ಈ ಹಾರದೊಂದಿಗೆ ನನ್ನ ಫೋಟೋ ತೆಗೆದು ಕೊಡಿ ಎಂದು ಮನವಿ ಮಾಡಿದ್ದಾರೆ. ಹರ್ಭಜನ್ ಅವರ ಈ ನಡೆ ಹಾಗೂ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.
ಗಲ್ಲಿಯಿಂದ ದೇಶವನ್ನು ಪ್ರತಿನಿಧಿಸುವವರೆಗೆ!ಇಂಡಿಯನ್ ಸಾಫ್ಟ್ಬಾಲ್ ಕ್ರಿಕೆಟ್ ಲೀಗ್ನ ‘ಗಲ್ಲಿ ಟು ಗ್ಲೋರಿ’ ಪರಿಕಲ್ಪನೆಗೂ ಹರ್ಭಜನ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಯಾವುದೇ ಸ್ವರೂಪದಲ್ಲಿದ್ದರೂ ನಾನು ಬೆಂಬಲಿಸುತ್ತೇನೆ. ವೇಗದ ಗತಿಯ ಕ್ರಿಕೆಟ್ ನನ್ನನ್ನು ರೋಮಾಂಚನಗೊಳಿಸುತ್ತದೆ. ಈ ಪರಿಕಲ್ಪನೆಯ ಮೂಲಕ ಅನೇಕ ಯುವ ಆಟಗಾರರು ದೇಶವನ್ನು ಪ್ರತಿನಿಧಿಸುವಂತಾಗಲಿ ಎಂದು ಆಶಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇವಲ ಅತಿಥಿಯಾಗಿ ಭಾಗವಹಿಸಿದ್ದಷ್ಟೇ ಅಲ್ಲದೆ, ಸ್ವತಃ ಮೈದಾನಕ್ಕಿಳಿದು ಕ್ರಿಕೆಟ್ ಆಡುವ ಮೂಲಕವೂ ಗಮನ ಸೆಳೆದಿದ್ದಾರೆ.
ಬೆಂಗಳೂರಿಗೂ ಹರ್ಭಜನ್ಗೂ ಇದೆ ವಿಶೇಷ ನಂಟು!ಹರ್ಭಜನ್ ಸಿಂಗ್ ಅವರಿಗೆ ಬೆಂಗಳೂರು ಹೊಸದೇನಲ್ಲ. 1998ರಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಅವರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಇತ್ತೀಚೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಯುವ ಆಫ್ಸ್ಪಿನ್ನರ್ಗಳಿಗೆ ವಿಶೇಷ ತರಬೇತಿಯನ್ನೂ ನೀಡಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿನ ತಮ್ಮ ಹಳೆಯ ಅನುಭವಗಳನ್ನೂ ನೆನಪಿಸಿಕೊಂಡಿದ್ದರು.
ತಮ್ಮ ಟೆಸ್ಟ್ ಕ್ರಿಕೆಟ್ ಪಯಣ ಆರಂಭಿಸಿದ ನಗರದಲ್ಲಿಯೇ ಇದೀಗ ಮತ್ತೊಮ್ಮೆ ವಿಶೇಷ ಪ್ರೀತಿ ಪಡೆದಿರುವ ಹರ್ಭಜನ್ ಸಿಂಗ್, ಬೆಂಗಳೂರಿಗರ ಆತಿಥ್ಯಕ್ಕೆ ಫಿದಾ ಆಗಿದ್ದಾರೆ. ಬೃಹತ್ ಹಾರದೊಂದಿಗೆ ಸಿಕ್ಕ ಈ ಸ್ವಾಗತ ಭಜ್ಜಿಗೆ ಮತ್ತೊಂದು ಸುಂದರ ನೆನಪಾಗಿ ಉಳಿದಿದೆ.