ಟೋಲ್ ತಪ್ಪಿಸಲು ನಂಬರ್ ಪ್ಲೇಟ್ ಮರೆಮಾಚಿದ್ರೆ ಬೀಳುತ್ತೆ 5 ಪಟ್ಟು ದಂಡ! ವಾಹನ ಸವಾರರಿಗೆ ಕೇಂದ್ರದಿಂದ ಬಿಗ್ ಶಾಕ್!
ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರೇ ಇಲ್ಲಿ ಗಮನಿಸಿ. ಟೋಲ್ ಶುಲ್ಕ ಉಳಿಸಲು ಅಡ್ಡದಾರಿ ಹಿಡಿದರೆ ಇನ್ಮುಂದೆ ಜೇಬಿಗೆ ದೊಡ್ಡ ಕತ್ತರಿ ಬೀಳಲಿದೆ. ಟೋಲ್ ತಪ್ಪಿಸುವ ಉದ್ದೇಶದಿಂದ ವಾಹನದ ನಂಬರ್ ಪ್ಲೇಟ್ ಮರೆಮಾಚುವವರಿಗೆ ಮೂಲ ಟೋಲ್ ಶುಲ್ಕಕ್ಕಿಂತ ಐದು ಪಟ್ಟು ಹೆಚ್ಚು ದಂಡ ವಿಧಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ಅಷ್ಟಕ್ಕೂ ಈ ನಿಯಮ ಎಲ್ಲಿ ಅನ್ವಯವಾಗಲಿದೆ? ವಾಹನ ಸವಾರರು ಏನೆಲ್ಲಾ ಎಚ್ಚರಿಕೆ ವಹಿಸಬೇಕು?ಟೋಲ್ ತಪ್ಪಿಸುವವರ ವಿರುದ್ಧ ಕೇಂದ್ರದ ಕಠಿಣ ಕ್ರಮ!
ತಡೆಗೋಡೆಗಳಿಲ್ಲದ ಟೋಲ್ ಪ್ಲಾಜಾಗಳಲ್ಲಿ ಸಾವಿರಾರು ವಾಹನಗಳು ಟೋಲ್ ಶುಲ್ಕ ಪಾವತಿಸದೆ ಸಂಚರಿಸುತ್ತಿವೆ. ಇದರಿಂದ ಸರ್ಕಾರಕ್ಕೆ ಗಣನೀಯ ಪ್ರಮಾಣದ ಆದಾಯ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಟೋಲ್ ಶುಲ್ಕ ತಪ್ಪಿಸುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.ಟೋಲ್ ಶುಲ್ಕದ ಜೊತೆಗೆ ಐದು ಪಟ್ಟು ದಂಡ!
ಟೋಲ್ ತಪ್ಪಿಸುವ ಉದ್ದೇಶದಿಂದ ನಂಬರ್ ಪ್ಲೇಟ್ ಮರೆಮಾಚಿರುವುದು ದೃಢಪಟ್ಟರೆ ಮೂಲ ಟೋಲ್ ಶುಲ್ಕದ ಐದು ಪಟ್ಟು ದಂಡ ವಿಧಿಸಲಾಗುತ್ತದೆ. ವಿಶೇಷ ಅಂದ್ರೆ, ಈ ದಂಡದ ಜೊತೆಗೆ ಮೂಲ ಟೋಲ್ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.
ಉದಾಹರಣೆಗೆ, ಒಂದು ವಾಹನಕ್ಕೆ ₹100 ಟೋಲ್ ಶುಲ್ಕವಿದ್ದರೆ,

– ಮೂಲ ಟೋಲ್ ಶುಲ್ಕ – ₹100
– ಐದು ಪಟ್ಟು ದಂಡ – ₹500
– ಒಟ್ಟು ಪಾವತಿಸಬೇಕಾದ ಮೊತ್ತ – ₹600
– ಐದು ಪಟ್ಟು ದಂಡ – ₹500
– ಒಟ್ಟು ಪಾವತಿಸಬೇಕಾದ ಮೊತ್ತ – ₹600
ಅಂದರೆ, ನೂರು ರೂಪಾಯಿ ಉಳಿಸಲು ಹೋಗಿ ಆರು ನೂರು ರೂಪಾಯಿ ಕಳೆದುಕೊಳ್ಳಬೇಕಾಗುತ್ತದೆ!ಹೈಟೆಕ್ ತಂತ್ರಜ್ಞಾನದ ಮೂಲಕ ವಾಹನಗಳ ಪತ್ತೆ!
ವಾಹನದ ಮುಂಭಾಗ ಅಥವಾ ಹಿಂಭಾಗದ ನಂಬರ್ ಪ್ಲೇಟ್ಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚುವುದು ಹಾಗೂ ಫಾಸ್ಟ್ಟ್ಯಾಗ್ ಮೂಲಕ ವಾಹನವನ್ನು ಗುರುತಿಸಲು ಸಾಧ್ಯವಾಗದಂತೆ ಮಾಡಿ ಶುಲ್ಕ ತಪ್ಪಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸುಧಾರಿತ ತಂತ್ರಜ್ಞಾನದ ಮೂಲಕ ಇಂತಹ ವಾಹನಗಳನ್ನು ಗುರುತಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಎಲ್ಲಾ ಟೋಲ್ ಪ್ಲಾಜಾಗಳಿಗೂ ಈ ನಿಯಮ ಅನ್ವಯವಾಗುತ್ತಾ?ಸದ್ಯ ತಡೆರಹಿತ ಟೋಲಿಂಗ್ ವ್ಯವಸ್ಥೆ ಜಾರಿಯಲ್ಲಿರುವ ಸ್ಥಳಗಳಲ್ಲಿ ಈ ನಿಯಮ ಅನ್ವಯವಾಗಲಿದೆ. ಭವಿಷ್ಯದಲ್ಲಿ ಹೊಸದಾಗಿ ತಡೆರಹಿತ ಟೋಲಿಂಗ್ ವ್ಯವಸ್ಥೆ ಪರಿಚಯಿಸುವ ಸ್ಥಳಗಳಿಗೂ ಇದು ಅನ್ವಯಿಸಲಿದೆ.
ಆದರೆ ಉದ್ದೇಶಪೂರ್ವಕವಾಗಿ ಟೋಲ್ ಶುಲ್ಕ ತಪ್ಪಿಸಲು ಈ ಕೃತ್ಯ ಎಸಗಿರುವುದು ಕಂಡುಬಂದಲ್ಲಿ ಮಾತ್ರ ದಂಡ ವಿಧಿಸಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.ವಾಹನ ಸವಾರರಿಗೆ ಕೇಂದ್ರದ ಮಹತ್ವದ ಸೂಚನೆ!
ವಾಹನದ ನಂಬರ್ ಪ್ಲೇಟ್ಗಳನ್ನು ಹಾಳು ಮಾಡುವುದು, ಮರೆಮಾಚುವುದು ಹಾಗೂ ಟೋಲ್ ತಪ್ಪಿಸುವ ಉದ್ದೇಶದಿಂದ ಫಾಸ್ಟ್ಟ್ಯಾಗ್ ಅಳವಡಿಸದಿರುವುದು ಉದ್ದೇಶಪೂರ್ವಕ ವಂಚನೆಯ ಕೃತ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. ವಾಹನದ ನೋಂದಣಿ ಸಂಖ್ಯೆಗಳು ಎಲ್ಲ ಸಮಯದಲ್ಲೂ ಸ್ಪಷ್ಟವಾಗಿ ಗೋಚರಿಸುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಒಟ್ಟಿನಲ್ಲಿ, ಟೋಲ್ ಶುಲ್ಕ ಉಳಿಸುವ ನೆಪದಲ್ಲಿ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಹೀಗಾಗಿ ಹೆದ್ದಾರಿ ಪ್ರಯಾಣಕ್ಕೂ ಮುನ್ನ ನಿಮ್ಮ ವಾಹನದ ನಂಬರ್ ಪ್ಲೇಟ್ ಹಾಗೂ ಫಾಸ್ಟ್ಟ್ಯಾಗ್ ಸರಿಯಾಗಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.