ಮಹಿಳಾ ಐಎಎಸ್ ಅಧಿಕಾರಿಗೆ ಅನುಚಿತ ಮೆಸೇಜ್ ಕಳುಹಿಸಿದ ಆರೋಪ! ವಿಜಯ್ ಪಕ್ಷದ ಶಾಸಕ ಅರೆಸ್ಟ್; ಹೈಕೋರ್ಟ್ ಎಂಟ್ರಿ ಬೆನ್ನಲ್ಲೇ ಬಿಗ್ ಟ್ವಿಸ್ಟ್!
ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಗಂಭೀರ ವಿವಾದ ಸದ್ದು ಮಾಡುತ್ತಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಶಾಸಕ ಸಿ. ಅರುಳ್ ವಿಘ್ನೇಶ್ ಅವರನ್ನು ಮಹಿಳಾ ಐಎಎಸ್ ಅಧಿಕಾರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಜುಲೈನಲ್ಲಿ ಮುನ್ನೆಲೆಗೆ ಬಂದಿದ್ದ ವಿವಾದ ಇದೀಗ ಶಾಸಕರ ಬಂಧನದವರೆಗೂ ತಲುಪಿದೆ. ಅಷ್ಟಕ್ಕೂ ಮಹಿಳಾ ಅಧಿಕಾರಿ ನೀಡಿದ ದೂರಿನಲ್ಲಿ ಏನಿದೆ? ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದೇಕೆ?
ಮಹಿಳಾ ಜಿಲ್ಲಾಧಿಕಾರಿಗೆ ಕಿರುಕುಳ ಆರೋಪ; ಶಾಸಕ ಅರೆಸ್ಟ್!ಕಲ್ಲಾಕುರಿಚಿ ಕ್ಷೇತ್ರದ 36 ವರ್ಷದ ಶಾಸಕ ಸಿ. ಅರುಳ್ ವಿಘ್ನೇಶ್ ಅವರನ್ನು ಶುಕ್ರವಾರ ಪೊಲೀಸರು ಅವರ ನಿವಾಸದಿಂದ ಬಂಧಿಸಿ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಐಎಎಸ್ ಅಧಿಕಾರಿ ಜೆಇ ಪದ್ಮಜಾ ಅವರು ನವೆಂಬರ್ 23ರಂದು ಲಿಖಿತ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಕಲ್ಲಾಕುರಿಚಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಮಹಿಳಾ ಅಧಿಕಾರಿಯ ಉಡುಗೆ, ನೋಟದ ಬಗ್ಗೆಯೂ ಮೆಸೇಜ್?
ಈ ವಿವಾದ ಮೊದಲ ಬಾರಿಗೆ ಜುಲೈ ತಿಂಗಳಲ್ಲೇ ಮುನ್ನೆಲೆಗೆ ಬಂದಿತ್ತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಅಧಿಕಾರಿಯೊಂದಿಗೆ ಶಾಸಕರು ಅನುಚಿತವಾಗಿ ವರ್ತಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ, ಅಧಿಕಾರಿಯ ಉಡುಗೆ ಹಾಗೂ ನೋಟದ ಬಗ್ಗೆ ಪ್ರಸ್ತಾಪಿಸಿ ಅನುಚಿತ ಸಂದೇಶಗಳನ್ನು ಕಳುಹಿಸಿದ್ದರು ಎನ್ನಲಾಗಿದೆ.ಕನಿಮೋಳಿ ಪೋಸ್ಟ್ ಬೆನ್ನಲ್ಲೇ ರಾಜಕೀಯ ಸಂಚಲನ!
ಶಾಸಕರು ಮದ್ಯದ ಅಮಲಿನಲ್ಲಿ ಮಹಿಳಾ ಜಿಲ್ಲಾಧಿಕಾರಿಯ ಅಧಿಕೃತ ನಿವಾಸಕ್ಕೆ ತೆರಳಿ ಕಿರುಕುಳ ನೀಡಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿ ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಪ್ರಕರಣ ರಾಜಕೀಯವಾಗಿ ಗಮನ ಸೆಳೆದಿತ್ತು.ಸಿಸಿಟಿವಿ ಇದೆ, ಸೆಕ್ಯುರಿಟಿ ಇದೆ; ನಾನು ಒಳಗೆ ಹೋಗಿದ್ದು ಹೇಗೆ?’
ತಮ್ಮ ವಿರುದ್ಧ ಕೇಳಿಬಂದಿದ್ದ ಆರೋಪಗಳನ್ನು ಶಾಸಕ ಅರುಳ್ ವಿಘ್ನೇಶ್ ಈ ಹಿಂದೆ ತಳ್ಳಿಹಾಕಿದ್ದರು. ಜಿಲ್ಲಾಧಿಕಾರಿಯ ನಿವಾಸದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಸಿಸಿಟಿವಿ ಕ್ಯಾಮೆರಾಗಳಿವೆ. ಹೀಗಿರುವಾಗ ನಾನು ಅಲ್ಲಿಗೆ ಹೇಗೆ ಪ್ರವೇಶಿಸಲು ಸಾಧ್ಯ ಎಂದು ಪ್ರಶ್ನಿಸಿದ್ದರು.
ತಮ್ಮ ಹಾಗೂ ತಮ್ಮ ಪಕ್ಷದ ಹೆಸರಿಗೆ ಕಳಂಕ ತರಲು ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ದೂರಿದ್ದ ಶಾಸಕರು, ನಿರಪರಾಧಿತ್ವ ಸಾಬೀತುಪಡಿಸಲು ಪರೀಕ್ಷೆಗೂ ಸಿದ್ಧವಿರುವುದಾಗಿ ಹೇಳಿದ್ದರು.ಹೈಕೋರ್ಟ್ ಎಂಟ್ರಿ ಬೆನ್ನಲ್ಲೇ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು. ಕನಿಷ್ಠ ಐಜಿ ಶ್ರೇಣಿಯ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಸೂಚಿಸಿತ್ತು.
ತಿರುಪ್ಪೂರು ಪೊಲೀಸ್ ಅಧೀಕ್ಷಕಿ ಶೃಷ್ಟಿ ಸಿಂಗ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಐಜಿ ಎನ್. ಕಾಮಿನಿ ಅವರಿಗೆ ತನಿಖೆಯ ಮೇಲ್ವಿಚಾರಣೆ ವಹಿಸಲಾಗಿದೆ.
ಕಾರ್ಯಸ್ಥಳದ ಕಿರುಕುಳ ಆರೋಪಗಳನ್ನು ಪರಿಶೀಲಿಸಲು ಸ್ವತಂತ್ರ ಸದಸ್ಯರನ್ನೊಳಗೊಂಡ ಆಂತರಿಕ ದೂರು ಸಮಿತಿ ರಚಿಸುವಂತೆಯೂ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತ್ತು.ಮ್ಯಾಜಿಸ್ಟ್ರೇಟ್ ಮುಂದೆ ಮಹಿಳಾ ಅಧಿಕಾರಿಯ ಹೇಳಿಕೆ!
ಮಹಿಳಾ ಐಎಎಸ್ ಅಧಿಕಾರಿ ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ತನಿಖೆಯ ಭಾಗವಾಗಿ ಹಲವು ಜಿಲ್ಲಾ ಅಧಿಕಾರಿಗಳು ಹಾಗೂ ಸಾಕ್ಷಿಗಳ ವಿಚಾರಣೆಯನ್ನೂ ನಡೆಸಲಾಗಿದೆ. ಇದೀಗ ಶಾಸಕರ ಬಂಧನದೊಂದಿಗೆ ಪ್ರಕರಣ ಮತ್ತೊಂದು ಮಹತ್ವದ ಹಂತಕ್ಕೆ ತಲುಪಿದೆ.
ಒಂದೆಡೆ ಮಹಿಳಾ ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಂದೆಡೆ ಶಾಸಕರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಯಾವ ಮಾಹಿತಿ ಹೊರಬರಲಿದೆ? ಶಾಸಕರ ಬಂಧನದ ಬಗ್ಗೆ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಯಾವ ನಿಲುವು ತಳೆಯಲಿದೆ ಎಂಬ ಕುತೂಹಲ ಮೂಡಿದೆ.