ಪ್ರತ್ಯೇಕ ಅಪಘಾ*ತ 3 ವರ್ಷದ ಮಗು ಸೇರಿ ಮೂವರು ಸಾ*ವು, ನಾಲ್ವರ ಸ್ಥಿತಿ ಗಂಭೀರ
ದಾವಣಗೆರೆ ಜಿಲ್ಲೆಯ ಹರಿಹರ ಬಳಿ ಬೈಕ್ಗೆ ಲಾರಿ ಡಿಕ್ಕಿಯಾಗಿ ತಂದೆ ಮತ್ತು 3 ವರ್ಷದ ಮಗು ಮೃತಪಟ್ಟಿದ್ದು, ಪತ್ನಿ ಸೇರಿ ಮತ್ತಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸನಗರದ ರಿಪ್ಪನ್ಪೇಟೆ ಸಮೀಪ ಪೇಪರ್ ಸಾಗಿಸುತ್ತಿದ್ದ ಕಾರು ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದರೆ, ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಎಲೆಕ್ಟ್ರಿಕ್ ಬಸ್ ಡಿವೈಡರ್ಗೆ ಗುದ್ದಿರುವ ಘಟನೆ ಬೆಂಗಳೂರಿನ ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿ ನಡೆದಿದೆ.
ಬೈಕ್ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೀಟೂರ್ ಕ್ರಾಸ್ ಬಳಿ ನಡೆದಿದೆ. ಮನೋಜ್(35), 3 ವರ್ಷ ಧೃತಿ ಮೃತ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಮನೋಜ್ ಪತ್ನಿ ನಂದಿನಿ, ಮತ್ತಿಬ್ಬರು ಮಕ್ಕಳಿಗೆ ಗಾಯಗಳಾಗವೆ. ಮೂವರನ್ನೂ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಕುಟುಂಬಸ್ಥರು ಹರಿಹರ ನಗರದ ಆಶ್ರಯ ಕಾಲೋನಿ ನಿವಾಸಿಗಳು ಎಂದು ತಿಳಿದುಬಂದಿದೆ. ನಂದಿನಿ ಅವರ ತವರಿನಲ್ಲಿನ ಹಬ್ಬ

ಮುಗಿಸಿ ಕುಟುಂಬ ಕಲ್ಪನಹಳ್ಳಿಯಿಂದ ಹರಿಹರಕ್ಕೆ ಬೈಕ್ನಲ್ಲಿ ವಾಪಸ್ ಆಗುತ್ತಿತ್ತು. ಮೂವರು ಮಕ್ಕಳು ಸಹಿತ ದಂಪತಿ ಬೈಕ್ನಲ್ಲಿದ್ದರು ಎನ್ನಲಾಗಿದೆ. ಘಟನೆ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೇಪರ್ ಸಾಗಿಸುತ್ತಿದ್ದ ಕಾರು ಪಲ್ಟಿ: ಓರ್ವ ಸಾವುಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಜಂಬಳ್ಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪೇಪರ್ ಸಾಗಿಸುತ್ತಿದ್ದ ಕಾರು ಪಲ್ಟಿಯಾದ ಪರಿಣಾಮ ಶಿವಮೊಗ್ಗ ಮೂಲದ ಶಿವಕುಮಾರ್ (45) ಸ್ಥಳದಲ್ಲೇ

ದುರ್ಮರಣ ಹೊಂದಿದ್ದಾರೆ. ಕಾರಲ್ಲಿದ್ದ ಮತ್ತೋರ್ವ ವ್ಯಕ್ತಿ ತೀರ್ಥಹಳ್ಳಿ ಮೂಲದ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು, ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ದಿನಪತ್ರಿಕೆಗಳನ್ನು ತೀರ್ಥಹಳ್ಳಿಗೆ ತಲುಪಿಸಿ ರಿಪ್ಪನ್ಪೇಟೆಗೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ನಡೆದಿದ್ದು, ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಮೃತದೇಹವನ್ನು ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.
ಡಿವೈಡರ್ಗೆ ಗುದ್ದಿದ ಖಾಸಗಿ ಎಲೆಕ್ಟ್ರಿಕ್ ಬಸ್ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಎಲೆಕ್ಟ್ರಿಕ್ ಬಸ್ ಡಿವೈಡರ್ಗೆ ಗುದ್ದಿರುವ ಘಟನೆ ಬೆಂಗಳೂರಿನ ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿ ನಡೆದಿದೆ. ಬೆಳಗಿನಜಾವ 5.10ರ ಸುಮಾರಿಗೆ ಅಪಘಾತ ನಡೆದಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಸಣ್ಣಪುಟ್ಟ

ಗಾಯಗಳಾಗಿವೆ. ಘಟನೆಯಿಂದಾಗಿ ಕಾರ್ಪೊರೇಷನ್ ಸಂಪರ್ಕಿಸುವ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ಜಾಮ್ ಉಂಟಾಗಿದ್ದು, ಕ್ರೇನ್ ಮೂಲಕ ಸಂಚಾರ ಪೊಲೀಸರು ಖಾಸಗಿ ಬಸ್ ತೆರವುಗೊಳಿಸುವ ಕೆಲಸ ಮಾಡಿದ್ದಾರೆ.
ತಂದೆ, ಮಗಳು ಸಾವು; ತಾಯಿ, ಇಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲುಅಪಘಾತದಲ್ಲಿ ಮನೋಜ್ ಅವರ ಪತ್ನಿ ನಂದಿನಿ ಹಾಗೂ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳು ಮೂವರನ್ನೂ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.