ಕ್ಯಾಪ್ಟನ್ ಆದ ಖುಷಿಯಲ್ಲಿದ್ದ ಸೌಂದರ್ಯಗೆ ಬಿಗ್ ಶಾಕ್! ಕಳಪೆ ಪಟ್ಟ ಸ್ವೀಕರಿಸದೆ ಎದ್ದು ಹೋದ ಶೆಟ್ಟಿ; ಬಾತ್ರೂಮ್ನಲ್ಲಿ ಗಳಗಳನೇ ಕಣ್ಣೀರು!
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಕ್ಯಾಪ್ಟನ್ಸಿ ಕಿರಿಕ್ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಎರಡನೇ ಬಾರಿಗೆ ಕ್ಯಾಪ್ಟನ್ ಆದ ಖುಷಿಯಲ್ಲಿದ್ದ ಸೌಂದರ್ಯ ಶೆಟ್ಟಿಗೆ ಮನೆಮಂದಿ ಬಿಗ್ ಶಾಕ್ ಕೊಟ್ಟಿದ್ದಾರೆ. ಕಳಪೆ ಪ್ರಕ್ರಿಯೆಯಲ್ಲಿ ಬಹುತೇಕ ಸ್ಪರ್ಧಿಗಳು ಸೌಂದರ್ಯ ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ.
ಇದನ್ನು ಸ್ವೀಕರಿಸಲಾಗದೆ ಪ್ರಕ್ರಿಯೆಯ ಮಧ್ಯದಲ್ಲೇ ಎದ್ದು ಹೋಗಿರುವ ಸೌಂದರ್ಯ, ಬಾತ್ರೂಮ್ನಲ್ಲಿ ಗಳಗಳನೇ ಕಣ್ಣೀರಿಟ್ಟಿದ್ದಾರೆ. ಅಷ್ಟಕ್ಕೂ ಕ್ಯಾಪ್ಟನ್ ವಿರುದ್ಧ ಮನೆಮಂದಿ ತಿರುಗಿಬಿದ್ದಿದ್ದೇಕೆ?ಸೌಂದರ್ಯಗೆ ಬ್ಯಾಕ್ ಟು ಬ್ಯಾಕ್ ಕಳಪೆ ಪಟ್ಟ!
ಬಿಗ್ ಬಾಸ್ ಮನೆಯಲ್ಲಿ ಕೆಲವು ವಾರಗಳಿಂದ ಕಳಪೆ ಪ್ರಕ್ರಿಯೆ ನಡೆದಿರಲಿಲ್ಲ. ಕಳೆದ ವಾರ ಮಹಾರಾಣಿ ಟಾಸ್ಕ್ನಲ್ಲಿನ ವರ್ತನೆಗೆ ಸಂಬಂಧಿಸಿದಂತೆ ಸೌಂದರ್ಯ ಶೆಟ್ಟಿ, ಗಾನವಿ ಗೌಡ ಹಾಗೂ ಆಸಿಯಾ ಫಿರ್ದೋಸ್ ಅವರಿಗೆ ಕಳಪೆ ನೀಡಬೇಕು ಎಂದು ಕಿರಣ್ ಶಾಸ್ತ್ರಿ ಪಟ್ಟು ಹಿಡಿದಿದ್ದರು. ಬಳಿಕ ಮೂವರು ಯುವರಾಣಿಯರು ಜೈಲು ಸೇರಿದ್ದರು.ಕಳೆದ ವಾರ ಕಳಪೆ ಪಟ್ಟ ಸ್ವೀಕರಿಸಲು ಗಾನವಿ ಗೌಡ ಹಿಂದೇಟು ಹಾಕಿದ್ದರು. ಇದೀಗ ಅದೇ ಪರಿಸ್ಥಿತಿ ಕ್ಯಾಪ್ಟನ್ ಸೌಂದರ್ಯ ಶೆಟ್ಟಿಗೂ ಎದುರಾಗಿದೆ.
ಕ್ಯಾಪ್ಟನ್ ಆದ ಬೆನ್ನಲ್ಲೇ ಶುರುವಾಯ್ತು ಕಿರಿಕ್!ಕ್ಯಾಪ್ಟನ್ಸಿ ರೇಸ್ನಲ್ಲಿ ಕಿರಣ್ ಶಾಸ್ತ್ರಿ ಅವರನ್ನು ಮಣಿಸಿ ಎರಡನೇ ಬಾರಿಗೆ ಸೌಂದರ್ಯ ಶೆಟ್ಟಿ ಕ್ಯಾಪ್ಟನ್ ಆಗಿದ್ದರು. ಆದರೆ ಕ್ಯಾಪ್ಟನ್ ಪಟ್ಟಕ್ಕೇರಿದ ಬೆನ್ನಲ್ಲೇ ಮನೆಯ ಕೆಲಸಗಳ ಹಂಚಿಕೆ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು.
ಜಗದೀಶ್ ಅವರಿಗೆ ಕಿಚನ್ ಸ್ಲ್ಯಾಬ್ ಕ್ಲೀನ್ ಮಾಡಲು ಹಾಗೂ ಕಿರಣ್ ಶಾಸ್ತ್ರಿ ಅವರಿಗೆ ಪಾತ್ರೆ ತೊಳೆಯಲು ಸೌಂದರ್ಯ ಸೂಚಿಸಿದ್ದರು. ಆದರೆ ಸೌಂದರ್ಯ ಕೆಲಸ ಹೇಳಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ ಜಗದೀಶ್ ಮತ್ತು ಕಿರಣ್, ಕ್ಯಾಪ್ಟನ್ ವಿರುದ್ಧ ತಿರುಗಿಬಿದ್ದಿದ್ದರು.ಸೌಂದರ್ಯ ವಿರುದ್ಧ ಒಂದಾದ ಗಗನ್, ಕಿರಣ್, ಜಗದೀಶ್!
ಕಳಪೆ ಪ್ರಕ್ರಿಯೆಯಲ್ಲಿ ಸೌಂದರ್ಯ ಶೆಟ್ಟಿ ವಿರುದ್ಧ ಗಗನ್ ಚಿನ್ನಪ್ಪ, ಕಿರಣ್ ಶಾಸ್ತ್ರಿ ಹಾಗೂ ಜಗದೀಶ್ ಅಸಮಾಧಾನ ಹೊರಹಾಕಿದ್ದಾರೆ. ಸೌಂದರ್ಯ ಸರಿಯಾಗಿ ಕೆಲಸ ಮಾಡುವುದಿಲ್ಲ, ಇತರರಿಗೆ ಕೆಲಸ ಹೇಳುವ ರೀತಿಯೂ ಸರಿಯಿಲ್ಲ ಎಂಬ ಕಾರಣಗಳನ್ನು ನೀಡಿ ಕಳಪೆ ಪಟ್ಟ ನೀಡಿದ್ದಾರೆ.
ಕ್ಯಾಪ್ಟನ್ ಆಗಿದ್ದರೂ ಮನೆಮಂದಿಯಿಂದಲೇ ಕಳಪೆ ಪಟ್ಟ ಬಂದಿರುವುದು ಸೌಂದರ್ಯಗೆ ಬೇಸರ ತರಿಸಿದೆ.‘ನಾನು ಕಳಪೆ ತಗೊಳ್ಳಲ್ಲ’ ಎಂದ ಶೆಟ್ಟಿ; ಬಾತ್ರೂಮ್ನಲ್ಲಿ ಕಣ್ಣೀರು!
ಮನೆಮಂದಿ ನೀಡಿದ ಕಾರಣಗಳನ್ನು ಸ್ವೀಕರಿಸಲಾಗದ ಸೌಂದರ್ಯ, ‘ನಾನು ಇದನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿ ಕಳಪೆ ಪ್ರಕ್ರಿಯೆಯ ಮಧ್ಯದಲ್ಲೇ ಎದ್ದು ಹೋಗಿದ್ದಾರೆ. ಬಳಿಕ ಬಾತ್ರೂಮ್ಗೆ ತೆರಳಿ ಗಳಗಳನೇ ಕಣ್ಣೀರಿಟ್ಟಿದ್ದಾರೆ.
ಸೌಂದರ್ಯ ಅವರ ಈ ನಡೆಗೆ ಮನೆಯ ಇತರ ಸ್ಪರ್ಧಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಗಾನವಿ ಪ್ರಶ್ನೆ, ಜಗದೀಶ್ ಖಡಕ್ ತಿರುಗೇಟು!
‘ನಾವು ಇಲ್ಲಿ ಕೆಲಸವಿಲ್ಲದೆ ಕೂತಿದ್ದೀವಾ?’ ಎಂದು ಗಾನವಿ ಗೌಡ ಪ್ರಶ್ನಿಸಿದ್ದಾರೆ. ಇತ್ತ ಜಗದೀಶ್, ‘ಉತ್ತಮ ಹಾಕಿಕೊಂಡು ಓಡಿಹೋದಳಲ್ಲ, ಈಗ ಕಳಪೆ ತೆಗೆದುಕೊಳ್ಳಲು ಆಗಲ್ಲವಾ?’ ಎಂದು ಸೌಂದರ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ವಾರ ಕಳಪೆ ಪಟ್ಟ ಸ್ವೀಕರಿಸಲು ಹಿಂದೇಟು ಹಾಕಿದ್ದ ಗಾನವಿ, ಇದೀಗ ಸೌಂದರ್ಯ ಅವರ ನಡೆಗೆ ಪ್ರಶ್ನೆ ಮಾಡಿರುವುದು ಕೂಡ ಗಮನ ಸೆಳೆದಿದೆ.ವಾರದ ಪಂಚಾಯಿತಿಯಲ್ಲಿ ಕಿಚ್ಚ ಯಾರ ಪರ ನಿಲ್ಲುತ್ತಾರೆ?
ಕ್ಯಾಪ್ಟನ್ ಆಗಿರುವ ಸೌಂದರ್ಯ ಶೆಟ್ಟಿ ಮನೆಮಂದಿಯ ಅಭಿಪ್ರಾಯವನ್ನು ಸ್ವೀಕರಿಸಬೇಕಿತ್ತಾ? ಸ್ಪರ್ಧಿಗಳು ನೀಡಿರುವ ಕಾರಣಗಳು ಸಮಂಜಸವಾಗಿವೆಯಾ? ಅಥವಾ ಸೌಂದರ್ಯ ವಿರುದ್ಧ ಮನೆಮಂದಿಯ ಅಸಮಾಧಾನಕ್ಕೆ ಬೇರೆ ಕಾರಣವಿದೆಯಾ?
ಕಳೆದ ವಾರ ಗಾನವಿ, ಈ ವಾರ ಸೌಂದರ್ಯ ಕಳಪೆ ಪಟ್ಟ ಸ್ವೀಕರಿಸಲು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಈ ವಿಚಾರವನ್ನು ಹೇಗೆ ಪ್ರಸ್ತಾಪಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.