‘ನನ್ನ ತಂದೆ ತೀರಿಕೊಂಡಿದ್ದಾರೆ, ದಯವಿಟ್ಟು ನನ್ನನ್ನು ಅಲ್ಲಿಗೆ ತಲುಪಿಸಿ’; ವಿಮಾನ ನಿಲ್ದಾಣದಲ್ಲಿ ಕಣ್ಣೀರಿಟ್ಟ ಮಗ! ಸ್ಪೈಸ್ಜೆಟ್ ವಿರುದ್ಧ ಆಕ್ರೋಶ!!
ಹೆತ್ತ ತಂದೆಯನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಕೊನೆಯ ಬಾರಿಗೆ ತಂದೆಯ ಮುಖ ನೋಡಲು ಸಾಧ್ಯವಾಗುತ್ತೋ ಇಲ್ಲವೋ ಎಂಬ ಆತಂಕ ಮತ್ತೊಂದೆಡೆ. ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತುರ್ತಾಗಿ ಊರಿಗೆ ಹೊರಟಿದ್ದ ಮಗನಿಗೆ ವಿಮಾನ ವಿಳಂಬದಿಂದ ಮತ್ತೊಂದು ಸಂಕಷ್ಟ ಎದುರಾಗಿದೆ. ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಮುಂದೆ ಕಣ್ಣೀರಿಡುತ್ತಾ ಮನವಿ ಮಾಡಿರುವ ಪ್ರಯಾಣಿಕನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರ ಮನಕಲಕುವಂತಿದೆ.
ತಂದೆಯ ಸಾವಿನ ಸುದ್ದಿ ಕೇಳಿ ಊರಿಗೆ ಹೊರಟಿದ್ದ ಮಗ!ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ತಂದೆಯ ನಿಧನದ ಸುದ್ದಿ ತಿಳಿದ ಪ್ರಯಾಣಿಕನೊಬ್ಬ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ಪಾಟ್ನಾಗೆ ತೆರಳುವ ಸ್ಪೈಸ್ಜೆಟ್ ವಿಮಾನದ ಟಿಕೆಟ್ ಬುಕ್ ಮಾಡಿದ್ದ.
ಆದರೆ, ಆದಷ್ಟು ಬೇಗ ಮನೆ ತಲುಪಬೇಕು ಎಂಬ ಆತುರದಲ್ಲಿದ್ದ ಆತನಿಗೆ ವಿಮಾನ ನಿಲ್ದಾಣದಲ್ಲೇ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.‘ದಯವಿಟ್ಟು ನನ್ನನ್ನು ಅಲ್ಲಿಗೆ ತಲುಪಿಸಿ’ ಎಂದು ಕಣ್ಣೀರಿಟ್ಟ ಪ್ರಯಾಣಿಕ!
ಒಂದೆಡೆ ತಂದೆಯನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ವಿಮಾನ ಯಾವಾಗ ಹೊರಡುತ್ತದೆಯೋ ಎಂಬ ಅನಿಶ್ಚಿತತೆ. ದಿಕ್ಕು ತೋಚದಂತಾದ ಪ್ರಯಾಣಿಕ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಮುಂದೆ ಕಣ್ಣೀರಿಟ್ಟಿದ್ದಾನೆ.
‘ನನ್ನ ತಂದೆ ತೀರಿಕೊಂಡಿದ್ದಾರೆ. ದಯವಿಟ್ಟು ನನ್ನನ್ನು ಅಲ್ಲಿಗೆ ತಲುಪಿಸಿ’ ಎಂದು ಅಸಹಾಯಕತೆಯಿಂದ ಮನವಿ ಮಾಡುತ್ತಿರುವ ದೃಶ್ಯ ವೈರಲ್ ವಿಡಿಯೋದಲ್ಲಿ ಕಂಡುಬಂದಿದೆ.ಮಧ್ಯಾಹ್ನ 1.50ರ ವಿಮಾನ ಸಂಜೆ 6.30ಕ್ಕೆ ಮುಂದೂಡಿಕೆ!
ವರದಿಗಳ ಪ್ರಕಾರ, ದೆಹಲಿಯಿಂದ ಪಾಟ್ನಾಗೆ ತೆರಳಬೇಕಿದ್ದ ಸ್ಪೈಸ್ಜೆಟ್ ವಿಮಾನ ಮಧ್ಯಾಹ್ನ 1.50ಕ್ಕೆ ಹೊರಡಬೇಕಿತ್ತು. ಆದರೆ ವಿಮಾನದ ನಿರ್ಗಮನ ಸಮಯವನ್ನು ಸಂಜೆ 6.30ಕ್ಕೆ ಮುಂದೂಡಲಾಗಿತ್ತು. ಬರೋಬ್ಬರಿ 4 ಗಂಟೆ 40 ನಿಮಿಷಗಳಷ್ಟು ವಿಳಂಬದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು.
ಅಷ್ಟೇ ಅಲ್ಲದೆ, ವಿಮಾನ ನಿಲ್ದಾಣದ ಡಿಸ್ಪ್ಲೇಯಲ್ಲಿ ಬೋರ್ಡಿಂಗ್ ಗೇಟ್ ಮುಚ್ಚಿರುವುದಾಗಿ ತೋರಿಸುತ್ತಿದ್ದರೂ, ಬೋರ್ಡಿಂಗ್ ಪ್ರಕ್ರಿಯೆ ಆರಂಭವಾಗಿರಲಿಲ್ಲ ಎನ್ನಲಾಗಿದೆ. ಇದು ಪ್ರಯಾಣಿಕರ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿತ್ತು.
ಸೇವೆ ಕೊಡಲು ಆಗದಿದ್ದರೆ ಟಿಕೆಟ್ ಬುಕ್ ಮಾಡಿಕೊಳ್ಳುವುದೇಕೆ?ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ ದಬಾಸ್ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರಯಾಣಿಕರಿಗೆ ಸರಿಯಾದ ಸೇವೆ ನೀಡಲು ಸಾಧ್ಯವಾಗದಿದ್ದರೆ ಟಿಕೆಟ್ ಬುಕ್ಕಿಂಗ್ ಏಕೆ ಸ್ವೀಕರಿಸುತ್ತೀರಿ ಎಂದು ಸ್ಪೈಸ್ಜೆಟ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ತಂದೆಯ ಅಂತ್ಯಕ್ರಿಯೆಗೆ ತೆರಳಬೇಕಾದ ಮಗನೊಬ್ಬ ಇಂತಹ ಪರಿಸ್ಥಿತಿ ಎದುರಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಿಡಿಯೋ ವೈರಲ್; ಸ್ಪೈಸ್ಜೆಟ್ ವಿರುದ್ಧ ನೆಟ್ಟಿಗರ ಆಕ್ರೋಶ!
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪೈಸ್ಜೆಟ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ವಿಮಾನ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರೂ ವಿಮಾನ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ತಾವು ಈ ಹಿಂದೆ ವಿಮಾನ ಪ್ರಯಾಣದ ವೇಳೆ ಎದುರಿಸಿದ್ದ ಸಮಸ್ಯೆಗಳನ್ನೂ ಹಂಚಿಕೊಂಡಿದ್ದಾರೆ.
ಕಳೆದುಹೋದ ಸಮಯವನ್ನು ಮತ್ತೆ ಕೊಡಲು ಸಾಧ್ಯವೇ?ವಿಮಾನ ವಿಳಂಬವಾದರೆ ಹಣವನ್ನು ವಾಪಸ್ ನೀಡಬಹುದು, ಪರ್ಯಾಯ ವಿಮಾನದ ವ್ಯವಸ್ಥೆಯನ್ನೂ ಮಾಡಬಹುದು. ಆದರೆ ಹೆತ್ತ ತಂದೆಯನ್ನು ಕೊನೆಯ ಬಾರಿಗೆ ನೋಡುವ ಅವಕಾಶ ತಪ್ಪಿಹೋದರೆ ಆ ಕ್ಷಣವನ್ನು ಮತ್ತೆ ಮರಳಿ ಕೊಡಲು ಸಾಧ್ಯವೇ?
ವಿಮಾನ ವಿಳಂಬಕ್ಕೆ ತಾಂತ್ರಿಕ ಅಥವಾ ಕಾರ್ಯಾಚರಣೆಯ ಕಾರಣಗಳಿರಬಹುದು. ಆದರೆ ಇಂತಹ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ನೋವನ್ನು ಅರ್ಥಮಾಡಿಕೊಂಡು ಸಾಧ್ಯವಾದಷ್ಟು ನೆರವು ನೀಡುವುದು ಅತ್ಯಂತ ಮುಖ್ಯವಾಗಿದೆ.
ಅಷ್ಟಕ್ಕೂ ಆ ಪ್ರಯಾಣಿಕ ತಂದೆಯ ಅಂತ್ಯಕ್ರಿಯೆಗೆ ಸಮಯಕ್ಕೆ ಸರಿಯಾಗಿ ತಲುಪಿದನಾ? ವಿಮಾನ ವಿಳಂಬಕ್ಕೆ ನಿಖರ ಕಾರಣವೇನು? ಈ ಬಗ್ಗೆ ಸ್ಪೈಸ್ಜೆಟ್ ಏನು ಹೇಳಲಿದೆ ಎಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.