ಮಲಯಾಳಿ ಸಮುದಾಯದ ಕೆಂಗಣ್ಣಿಗೆ ಗುರಿಯಾದ ಪ್ರತಾಪ್ ಸಿಂಹ! ಮಾಜಿ ಸಂಸದರ ವಿರುದ್ಧ ಕೊಡಗಿನಲ್ಲಿ ದೂರು; ಏನಿದು ವಿವಾದ?
ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕೇರಳದ ಜನರು ಹಾಗೂ ಮಲಯಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಕೊಡಗಿನಲ್ಲಿ ದೂರು ಸಲ್ಲಿಕೆಯಾಗಿದೆ.
ಪ್ರತಾಪ್ ಸಿಂಹ ವಿರುದ್ಧ ಮಲಯಾಳಿ ಸಮುದಾಯ ಆಕ್ರೋಶ!ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ ಅವರು ಕೇರಳದ ಜನರು ಹಾಗೂ ಮಲಯಾಳಿ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಅವರ ಹೇಳಿಕೆಗಳು ಸಮುದಾಯವನ್ನು ಅವಮಾನಿಸುವುದರ ಜೊತೆಗೆ ದ್ವೇಷ ಭಾವನೆ ಮೂಡಿಸುವಂತಿವೆ ಎಂದು ಕೊಡಗು ಹಿಂದೂ ಮಲಯಾಳಿ ಸಮಾಜದ ಮುಖಂಡರು ಆರೋಪಿಸಿದ್ದಾರೆ.
ಗೋಣಿಕೊಪ್ಪದಲ್ಲಿ ದೂರು ಸಲ್ಲಿಕೆ!
ಅವರ ಹೇಳಿಕೆಗಳು ಸಮುದಾಯವನ್ನು ಅವಮಾನಿಸುವುದರ ಜೊತೆಗೆ ದ್ವೇಷ ಭಾವನೆ ಮೂಡಿಸುವಂತಿವೆ ಎಂದು ಕೊಡಗು ಹಿಂದೂ ಮಲಯಾಳಿ ಸಮಾಜದ ಮುಖಂಡರು ಆರೋಪಿಸಿದ್ದಾರೆ.
ಗೋಣಿಕೊಪ್ಪದಲ್ಲಿ ದೂರು ಸಲ್ಲಿಕೆ!
ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಖಂಡಿಸಿರುವ ಕೊಡಗಿನ ಗೋಣಿಕೊಪ್ಪದ ಕೊಡಗು ಹಿಂದೂ ಮಲಯಾಳಿ ಸಮಾಜದ ಮುಖಂಡರು ಇಂದು ದೂರು ಸಲ್ಲಿಸಿದ್ದಾರೆ.
ಮಲಯಾಳಿ ಸಮುದಾಯದ ಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಂಸದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿವಾದಕ್ಕೆ ಪ್ರತಾಪ್ ಸಿಂಹ ಪ್ರತಿಕ್ರಿಯೆ ಏನಿರಲಿದೆ?

ಸಾರ್ವಜನಿಕ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯೊಂದು ಇದೀಗ ದೂರು ಸಲ್ಲಿಸುವ ಹಂತಕ್ಕೆ ತಲುಪಿದೆ. ಅಷ್ಟಕ್ಕೂ ಪ್ರತಾಪ್ ಸಿಂಹ ಹೇಳಿದ್ದೇನು? ಮಲಯಾಳಿ ಸಮುದಾಯದ ಆಕ್ರೋಶಕ್ಕೆ ಕಾರಣವಾದ ಮಾತುಗಳೇನು? ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ?ಈ ವಿವಾದಕ್ಕೆ ಪ್ರತಾಪ್ ಸಿಂಹ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.