ಶಾಸಕರ ಮಗಳ ಮದುವೆಯಲ್ಲಿ ನೋಟುಗಳ ಸುರಿಮಳೆ! ಪೊರಕೆಯಲ್ಲಿ ಗುಡಿಸುವಷ್ಟು ಹಣ; 150ಕ್ಕೂ ಹೆಚ್ಚು ಬಗೆಯ ಖಾದ್ಯ! ಯಾರ ಮದುವೆ ಗೊತ್ತಾ?
ಮದುವೆ ಮನೆಯಲ್ಲಿ ಹೂವಿನ ಸುರಿಮಳೆ ಸುರಿಸುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಂದು ಮದುವೆಯಲ್ಲಿ ನೋಟುಗಳ ಸುರಿಮಳೆಯೇ ಸುರಿದಿದೆ! ನೆಲದ ಮೇಲೆ ಬಿದ್ದ ರಾಶಿ ರಾಶಿ ನೋಟುಗಳನ್ನು ಪೊರಕೆಯಿಂದ ಗುಡಿಸಿ ಒಟ್ಟುಗೂಡಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲ, ಮದುವೆಗೆ ಬರಲು ಆಮಂತ್ರಣ ಪತ್ರಿಕೆಯೂ ಬೇಕಿಲ್ಲವಂತೆ! ಬಿಹಾರದ ಶಾಸಕ ಅನಂತ್ ಸಿಂಗ್ ಅವರ ಮಗಳ ಅದ್ಧೂರಿ ವಿವಾಹ ಇದೀಗ ದೇಶದ ಗಮನ ಸೆಳೆದಿದೆ.
ಬಿಹಾರದ ಮೊಕಾಮಾ ಕ್ಷೇತ್ರದ ಶಾಸಕ, ಜೆಡಿಯುನಿಂದ ಉಚ್ಚಾಟಿತರಾಗಿರುವ ಅನಂತ್ ಸಿಂಗ್ ಅವರ ಕಿರಿಯ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹ ಮಹೋತ್ಸವ ಅದ್ಧೂರಿತನದಿಂದಾಗಿ ಸುದ್ದಿಯಾಗಿದೆ.
ಪಾಟ್ನಾ ಜಿಲ್ಲೆಯ ನದವಾನ್ ಗ್ರಾಮದಲ್ಲಿರುವ ಅನಂತ್ ಸಿಂಗ್ ಅವರ ಪೂರ್ವಿಕರ ಮನೆಯಲ್ಲಿ ಬುಧವಾರ ಶಿವಾಂಗಿ ಸಿಂಗ್ ಮತ್ತು ರಿಷಿಕೇಶ್ ಕುಮಾರ್ ಅವರ ವಿವಾಹ ನೆರವೇರಿದೆ.
ಹೂವಿನ ಬದಲು ನೋಟುಗಳ ಸುರಿಮಳೆ!

ಮದುವೆ ಸಂಭ್ರಮದಲ್ಲಿ ಗಾಳಿಯಲ್ಲಿ ನೋಟುಗಳನ್ನು ತೂರಲಾಗಿದ್ದು, ನೆಲದ ಮೇಲೆ ರಾಶಿ ರಾಶಿ ನೋಟುಗಳು ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಚ್ಚರಿಯ ಸಂಗತಿಯೆಂದರೆ, ನೆಲದ ಮೇಲೆ ಬಿದ್ದಿದ್ದ ನೋಟುಗಳನ್ನು ಕೆಲವರು ಪೊರಕೆಯಿಂದ ಗುಡಿಸಿ ಒಟ್ಟುಗೂಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ದೃಶ್ಯಗಳನ್ನು ನೋಡಿದ ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಅಷ್ಟಕ್ಕೂ ಮದುವೆಯಲ್ಲಿ ಎಷ್ಟು ಹಣ ತೂರಲಾಗಿದೆ? ವಿಡಿಯೋದಲ್ಲಿರುವುದು ಅಸಲಿ ನೋಟುಗಳೋ ಅಥವಾ ನಕಲಿ ನೋಟುಗಳೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರಾಜಕೀಯ ರೋಡ್ಶೋ ನೆನಪಿಸಿದ ಶಾಸಕರ ಭರ್ಜರಿ ಎಂಟ್ರಿ!

ಬಿಹಾರದಲ್ಲಿ ‘ಛೋಟೆ ಸರ್ಕಾರ್’ ಎಂದೇ ಖ್ಯಾತರಾಗಿರುವ ಅನಂತ್ ಸಿಂಗ್ ತಮ್ಮ ಮಗಳ ಮದುವೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಎಸ್ಯುವಿ ಕಾರಿನ ಸನ್ರೂಫ್ ಮೂಲಕ ಎದ್ದು ನಿಂತು ಕೇಸರಿ ಗಮ್ಚಾ ಬೀಸುತ್ತಾ ಮದುವೆ ಸಮಾರಂಭಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರನ್ನು ನೋಡಲು ಬೆಂಬಲಿಗರು ಮುಗಿಬಿದ್ದಿದ್ದಾರೆ.
ಮದುವೆ ಸಮಾರಂಭಕ್ಕಿಂತ ಯಾವುದೋ ರಾಜಕೀಯ ರೋಡ್ಶೋ ನಡೆಯುತ್ತಿದೆಯೇನೋ ಎಂಬಂತಿತ್ತು ಅಲ್ಲಿನ ದೃಶ್ಯ.ಆಮಂತ್ರಣ ಪತ್ರಿಕೆ ಬೇಡ; ಯಾರು ಬೇಕಾದರೂ ಮದುವೆಗೆ ಬನ್ನಿ!ಸಾಮಾನ್ಯವಾಗಿ ಅದ್ಧೂರಿ ಮದುವೆಗಳಲ್ಲಿ ಆಹ್ವಾನಿತ ಅತಿಥಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಆದರೆ ಅನಂತ್ ಸಿಂಗ್ ತಮ್ಮ ಮಗಳ ಮದುವೆಗೆ ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದರು.
“ಇದೇನು ಸಿನಿಮಾ ಥಿಯೇಟರ್ ಅಲ್ಲ, ಟಿಕೆಟ್ ತಗೊಂಡು ಬರೋಕೆ. ಯಾರು ಬೇಕಾದರೂ ಬರಬಹುದು” ಎಂದು ಅನಂತ್ ಸಿಂಗ್ ಮೊದಲೇ ಘೋಷಿಸಿದ್ದರು.
ಅದರಂತೆ ಮದುವೆ ಸಮಾರಂಭಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಎಲ್ಲರಿಗೂ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಊಟದ ಮೆನುವಿನಲ್ಲಿತ್ತು ಬರೋಬ್ಬರಿ 150ಕ್ಕೂ ಹೆಚ್ಚು ಬಗೆಯ ಖಾದ್ಯ!

ಮದುವೆಯ ಅದ್ಧೂರಿತನ ಕೇವಲ ಅಲಂಕಾರ ಹಾಗೂ ನೋಟುಗಳ ಸುರಿಮಳೆಗೆ ಸೀಮಿತವಾಗಿರಲಿಲ್ಲ. ಅತಿಥಿಗಳಿಗಾಗಿ ವಿಶೇಷ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಸಾಂಪ್ರದಾಯಿಕ ಬಿಹಾರಿ ಖಾದ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳ ಸುಮಾರು 150ಕ್ಕೂ ಹೆಚ್ಚು ಬಗೆಯ ರುಚಿಕರ ಅಡುಗೆಗಳನ್ನು ಸಿದ್ಧಪಡಿಸಲಾಗಿತ್ತು ಎಂದು ವರದಿಯಾಗಿದೆ.
ವಧು ಹಾಗೂ ಕುಟುಂಬಸ್ಥರಿಗೆ ದುಬಾರಿ ಉಡುಗೊರೆಗಳೂ ಹರಿದುಬಂದಿವೆ ಎನ್ನಲಾಗಿದೆ.ಮದುವೆಯ ಅದ್ಧೂರಿತನಕ್ಕಿಂತ ನೋಟುಗಳದ್ದೇ ಹೆಚ್ಚು ಸದ್ದು!ಒಂದೆಡೆ ಶಾಸಕರ ಮಗಳ ಅದ್ಧೂರಿ ವಿವಾಹ, ಮತ್ತೊಂದೆಡೆ ನೋಟುಗಳ ಸುರಿಮಳೆ, ಭರ್ಜರಿ ಭೋಜನ ಹಾಗೂ ಶಾಸಕರ ರೋಡ್ಶೋ ಶೈಲಿಯ ಎಂಟ್ರಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಆದರೆ ಇಡೀ ಮದುವೆಯ ಸಂಭ್ರಮಕ್ಕಿಂತ ಪೊರಕೆಯಲ್ಲಿ ನೋಟುಗಳನ್ನು ಗುಡಿಸುತ್ತಿರುವ ವಿಡಿಯೋವೇ ಹೆಚ್ಚು ಗಮನ ಸೆಳೆದಿದೆ. ಅಷ್ಟಕ್ಕೂ ಆ ನೋಟುಗಳು ಅಸಲಿಯೋ, ನಕಲಿಯೋ? ಮದುವೆಗಾಗಿ ಎಷ್ಟು ಹಣ ಖರ್ಚು ಮಾಡಲಾಗಿದೆ? ಈ ಪ್ರಶ್ನೆಗಳಿಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ.