**ಮಂಗಳಮುಖಿಯ ವೇಷದಲ್ಲಿ ಹಣ ವಸೂಲಿ ಆರೋಪ!ಅಸಲಿ ಮಂಗಳಮುಖಿಯರು ಬೆನ್ನಟ್ಟುತ್ತಿದ್ದಂತೆ ಕೆರೆಗೆ ಹಾರಿದ ಯುವಕ;ಅರ್ಧ ಗಂಟೆ ಹೈಡ್ರಾಮಾ!**
ಮಂಗಳಮುಖಿಯ ವೇಷ ಧರಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದ ಎನ್ನಲಾದ ಯುವಕನೊಬ್ಬನಿಗೆ ಅಸಲಿ ಮಂಗಳಮುಖಿಯರು ಎದುರಾಗಿದ್ದಾರೆ. ಹಣ ವಸೂಲಿ ವಿಚಾರಕ್ಕೆ ಶುರುವಾದ ಗಲಾಟೆ ಕೊನೆಗೆ ಯುವಕನ ಜೀವಕ್ಕೇ ಅಪಾಯ ತಂದಿಟ್ಟಿದೆ.
ತನ್ನನ್ನು ಬೆನ್ನಟ್ಟುತ್ತಿದ್ದವರಿಂದ ತಪ್ಪಿಸಿಕೊಳ್ಳಲು ಯುವಕ ನೇರವಾಗಿ ಆಳವಾದ ಕೆರೆಗೆ ಹಾರಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ನೀರಿನ ಮಧ್ಯದಲ್ಲೇ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡಿದ್ದಾನೆ.
ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಯುವಕನ ಬಳಿ ಚಾಕು ಇತ್ತು ಎಂಬ ಆರೋಪ ಕೇಳಿಬಂದಿದ್ದೇಕೆ? **ಹಣ ವಸೂಲಿ ವಿಚಾರಕ್ಕೆ ಶುರುವಾಯ್ತು ಗಲಾಟೆ!**
ಈ ಘಟನೆ ನಡೆದಿರೋದು ಮಧ್ಯಪ್ರದೇಶದ ಜಬಲ್ಪುರದಲ್ಲಿ. ವಿಜಯನಗರದ ಆದಿ ಪ್ಲಾಜಾ ಬಳಿ ಮಂಗಳಮುಖಿಯರ ನಡುವೆ ಹಣ ವಸೂಲಿ ಹಾಗೂ ಪ್ರದೇಶದ ಹಕ್ಕಿನ ವಿಚಾರವಾಗಿ ಗಲಾಟೆ ಶುರುವಾಗಿದೆ.
ಮಂಗಳಮುಖಿಯ ವೇಷ ಧರಿಸಿಕೊಂಡು ಯುವಕನೊಬ್ಬ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಿ ಮಂಗಳಮುಖಿಯರು ಆತನನ್ನು ಪ್ರಶ್ನಿಸಿದ್ದಾರೆ.ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಯುವಕನನ್ನು ಮಂಗಳಮುಖಿಯರು ಬೆನ್ನಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
**ಹೊಡೆತದ ಭಯಕ್ಕೆ ಕೆರೆಗೆ ಹಾರಿದ ಯುವಕ!**ತನ್ನನ್ನು ಸುತ್ತುವರಿಯುತ್ತಿರುವುದನ್ನು ಗಮನಿಸಿದ ಯುವಕ ಅಲ್ಲಿಂದ ತಪ್ಪಿಸಿಕೊಳ್ಳಲು ಓಡಲು ಶುರು ಮಾಡಿದ್ದಾನೆ.
ತನ್ನ ಮೇಲೆ ಹಲ್ಲೆ ನಡೆಯಬಹುದು ಎಂಬ ಭಯದಿಂದ ಸಮೀಪದಲ್ಲಿದ್ದ ಆಳವಾದ ಕೆರೆಗೆ ಹಾರಿದ್ದಾನೆ.ಆದರೆ ಕೆರೆಗೆ ಹಾರಿದ ಯುವಕನಿಗೆ ಅಲ್ಲಿಂದ ಹೊರಬರಲು ಸಾಧ್ಯವಾಗಿಲ್ಲ. ಸುಮಾರು ಅರ್ಧ ಗಂಟೆಗಳ ಕಾಲ ನೀರಿನ ಮಧ್ಯದಲ್ಲೇ ಸಿಲುಕಿಕೊಂಡು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾನೆ.
ಇದನ್ನು ನೋಡಲು ಕೆರೆಯ ಸುತ್ತಮುತ್ತ ನೂರಾರು ಜನರು ಜಮಾಯಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. **ಯುವಕನ ಬಳಿ ಚಾಕು ಇತ್ತು ಎಂಬ ಆರೋಪ!**
ಇದೇ ವೇಳೆ ಕೆರೆಗೆ ಹಾರಿದ ಯುವಕನ ಬಳಿ ಹರಿತವಾದ ಚಾಕು ಇತ್ತು. ಆತ ಹಲ್ಲೆ ನಡೆಸಲು ಮುಂದಾಗಿದ್ದ ಎಂದು ಮಂಗಳಮುಖಿಯರು ಆರೋಪಿಸಿದ್ದಾರೆ.ಈ ಆರೋಪದಿಂದ ಸ್ಥಳದಲ್ಲಿದ್ದ ಜನರಲ್ಲಿ ಮತ್ತಷ್ಟು ಆತಂಕ ಉಂಟಾಗಿತ್ತು.
ಆದರೆ ಪೊಲೀಸರು ಯುವಕನನ್ನು ರಕ್ಷಿಸಿ ಪರಿಶೀಲನೆ ನಡೆಸಿದಾಗ ಆತನ ಬಳಿ ಯಾವುದೇ ಚಾಕು ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. **ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಜೀವ ಉಳಿಸಿದ ಪೊಲೀಸರು!**
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಡಯಲ್-112 ಹಾಗೂ ವಿಜಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸುಮಾರು 30 ನಿಮಿಷಗಳ ಸತತ ಪ್ರಯತ್ನದ ಬಳಿಕ ಯುವಕನನ್ನು ಸುರಕ್ಷಿತವಾಗಿ ಕೆರೆಯಿಂದ ಹೊರತೆಗೆದಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
**ಅಷ್ಟಕ್ಕೂ ಯುವಕ ಯಾರು?**ಯುವಕ ನಿಜವಾಗಿಯೂ ಮಂಗಳಮುಖಿಯ ವೇಷ ಧರಿಸಿ ಹಣ ವಸೂಲಿ ಮಾಡುತ್ತಿದ್ದನಾ? ಗಲಾಟೆಗೆ ಹಣ ವಸೂಲಿಯೇ ಕಾರಣನಾ? ಅಥವಾ ಇದರ ಹಿಂದೆ ಬೇರೆ ಏನಾದರೂ ಕಾರಣವಿದೆಯಾ?
ಈ ಎಲ್ಲಾ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ವಿಜಯನಗರ ಪೊಲೀಸ್ ಠಾಣೆಯ ಮುಖ್ಯ ಪೇದೆ ರಾಜೇಂದ್ರ ರಘುವಂಶಿ ಅವರು ಯುವಕನನ್ನು ಸುರಕ್ಷಿತವಾಗಿ ರಕ್ಷಿಸಿರುವುದನ್ನು ದೃಢಪಡಿಸಿದ್ದಾರೆ.
ಹಣ ವಸೂಲಿ ವಿಚಾರಕ್ಕೆ ಶುರುವಾದ ಗಲಾಟೆ ಕೊನೆಗೆ ಜೀವಕ್ಕೇ ಅಪಾಯ ತಂದೊಡ್ಡಿದ್ದು, ಜಬಲ್ಪುರದಲ್ಲಿ ನಡೆದ ಈ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ.