37 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಐತಿಹಾಸಿಕ ಬೆಳವಣಿಗೆ! ಸಕ್ರಿಯ ಸ್ಥಳೀಯ ಉಗ್ರರ ಸಂಖ್ಯೆ ಶೂನ್ಯ; ಭಾರತೀಯ ಸೇನೆಯ ಮುಂದಿನ ಗುರಿ ಏನು?
ದಶಕಗಳಿಂದ ಭಯೋತ್ಪಾದನೆಯ ನೆರಳಿನಲ್ಲಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ಮಹತ್ವದ ಬೆಳವಣಿಗೆಯಾಗಿದೆ. ಕಳೆದ 37 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯ ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ ಪಾಕಿಸ್ತಾನ ಮೂಲದ ಸುಮಾರು 35 ಉಗ್ರರಿಗಾಗಿ ಭದ್ರತಾ ಪಡೆಗಳು ಶೋಧ ಮುಂದುವರಿಸಿವೆ. ಸಂಪೂರ್ಣ ಭಯೋತ್ಪಾದನೆ ಮುಕ್ತ ಕಾಶ್ಮೀರದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆಯಾ?
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಲು ದಶಕಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆ ಹಾಗೂ ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ಸಿಕ್ಕಿದೆ ಎನ್ನಲಾಗಿದೆ. ಲಷ್ಕರ್-ಎ-ತೋಯ್ಬಾ ಕಮಾಂಡರ್ ಲತೀಫ್ ಭಟ್ ಎನ್ಕೌಂಟರ್ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯ ಸ್ಥಳೀಯ ಉಗ್ರರು ಉಳಿದಿಲ್ಲ ಎಂದು ವರದಿಯಾಗಿದೆ.

37 ವರ್ಷಗಳ ಭಯೋತ್ಪಾದನೆಯ ಅಧ್ಯಾಯಕ್ಕೆ ಅಂತ್ಯ ಹಾಡುವತ್ತ ಕಾಶ್ಮೀರ!1980ರ ದಶಕದ ಅಂತ್ಯದಿಂದ ಭಯೋತ್ಪಾದನೆಯ ಸವಾಲು ಎದುರಿಸುತ್ತಿರುವ ಕಾಶ್ಮೀರದಲ್ಲಿ ಇದೀಗ ಸ್ಥಳೀಯ ಉಗ್ರರ ನೇಮಕಾತಿ ಗಣನೀಯವಾಗಿ ಕುಸಿದಿದೆ.
ಒಂದು ಕಾಲದಲ್ಲಿ ನೂರಾರು ಸ್ಥಳೀಯ ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಯಾಗುತ್ತಿದ್ದರು. ಆದರೆ ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆ ಹಾಗೂ ಭಯೋತ್ಪಾದಕ ಸಂಘಟನೆಗಳ ಪ್ರಭಾವ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ವರ್ಷದಿಂದ ವರ್ಷಕ್ಕೆ ಕುಸಿದ ಸ್ಥಳೀಯ ಉಗ್ರರ ನೇಮಕಾತಿ!ವರದಿಯಲ್ಲಿ ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಯಾದ ಸ್ಥಳೀಯ ಯುವಕರ ಸಂಖ್ಯೆ ಹೀಗಿದೆ.
018ರಲ್ಲಿ 196ರಷ್ಟಿದ್ದ ಸ್ಥಳೀಯ ಉಗ್ರರ ನೇಮಕಾತಿ 2026ರಲ್ಲಿ ಶೂನ್ಯಕ್ಕೆ ಇಳಿದಿದೆ ಎನ್ನಲಾಗಿದೆ. ಈ ಬೆಳವಣಿಗೆ ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ಸ್ಥಳೀಯ ನೇಮಕಾತಿ ಜಾಲ ದುರ್ಬಲಗೊಂಡಿರುವುದನ್ನು ಸೂಚಿಸುತ್ತದೆ.
ಪಾಕಿಸ್ತಾನ ಬೆಂಬಲಿತ ಉಗ್ರ ಜಾಲಕ್ಕೆ ಹಿನ್ನಡೆ!

ಸ್ಥಳೀಯವಾಗಿ ಹೊಸ ಉಗ್ರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಗಡಿಯಾಚೆಯಿಂದ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಭದ್ರತಾ ಪಡೆಗಳು ಹೆಚ್ಚಿನ ನಿಗಾ ವಹಿಸಿವೆ. ಒಳನುಸುಳುವಿಕೆ ತಡೆಗಟ್ಟಲು ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಸೇನೆ ಎಚ್ಚರಿಕೆ ವಹಿಸಿದೆ.
ಭಾರತೀಯ ಸೇನೆಯ ಮುಂದಿನ ಗುರಿ 35 ವಿದೇಶಿ ಉಗ್ರರು!

ಕಾಶ್ಮೀರದಲ್ಲಿ ಸದ್ಯ ಸುಮಾರು 35 ಪಾಕಿಸ್ತಾನ ಮೂಲದ ಭಯೋತ್ಪಾದಕರು ಸಕ್ರಿಯವಾಗಿರಬಹುದು ಎಂದು ಸೇನಾ ಮೂಲಗಳು ಅಂದಾಜಿಸಿವೆ.
ಈ ಉಗ್ರರನ್ನು ಪತ್ತೆಹಚ್ಚಲು ಭಾರತೀಯ ಸೇನೆ ಹಾಗೂ ಇತರ ಭದ್ರತಾ ಸಂಸ್ಥೆಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುವ ಜಾಲಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.
ಅಮಿತ್ ಶಾ ನೀಡಿದ ಮಹತ್ವದ ಸಂದೇಶ!

ಲತೀಫ್ ಭಟ್ ಎನ್ಕೌಂಟರ್ ಬಳಿಕ ಪ್ರತಿಕ್ರಿಯಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಶ್ಮೀರವು ಸಕ್ರಿಯ ಸ್ಥಳೀಯ ಭಯೋತ್ಪಾದಕರಿಂದ ಮುಕ್ತವಾಗಿದ್ದು, ಇದೀಗ ಪಾಕಿಸ್ತಾನ ಮೂಲದ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂಬ ಸಂದೇಶ ನೀಡಿದ್ದರು ಎಂದು ವರದಿಯಾಗಿದೆ.
ಆಪರೇಷನ್ ಸಿಂಧೂರ ಬಳಿಕ ಭಯೋತ್ಪಾದನೆ ವಿರುದ್ಧ ಭಾರತ ಅನುಸರಿಸುತ್ತಿರುವ ಕಠಿಣ ನಿಲುವಿನ ನಡುವೆಯೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಸಂಪೂರ್ಣ ಭಯೋತ್ಪಾದನೆ ಮುಕ್ತವಾಗುತ್ತಾ ಕಾಶ್ಮೀರ?

ಸ್ಥಳೀಯ ಉಗ್ರರ ಸಂಖ್ಯೆ ಶೂನ್ಯಕ್ಕೆ ಇಳಿದಿರುವುದು ಮಹತ್ವದ ಸಾಧನೆಯಾದರೂ, ವಿದೇಶಿ ಉಗ್ರರ ಉಪಸ್ಥಿತಿ ಹಾಗೂ ಗಡಿಯಾಚೆಗಿನ ಭಯೋತ್ಪಾದಕ ಜಾಲಗಳು ಇನ್ನೂ ಸವಾಲಾಗಿವೆ.
ದಶಕಗಳ ಕಾಲ ಭಯೋತ್ಪಾದನೆಯಿಂದ ನಲುಗಿದ್ದ ಕಾಶ್ಮೀರದಲ್ಲಿ ಶಾಂತಿಯ ಹೊಸ ಅಧ್ಯಾಯ ಆರಂಭವಾಗುತ್ತಿದೆಯಾ? ಸ್ಥಳೀಯ ಉಗ್ರರ ನೇಮಕಾತಿಗೆ ಕಡಿವಾಣ ಹಾಕಿರುವ ಭದ್ರತಾ ಪಡೆಗಳು ವಿದೇಶಿ ಉಗ್ರರ ಜಾಲವನ್ನೂ ಮಟ್ಟಹಾಕುತ್ತವಾ? ಸಂಪೂರ್ಣ ಭಯೋತ್ಪಾದನೆ ಮುಕ್ತ ಕಾಶ್ಮೀರದತ್ತ ಭಾರತದ ಮುಂದಿನ ಹೆಜ್ಜೆ ಏನಿರಲಿದೆ ಎಂಬುದು ಸದ್ಯದ ಕುತೂಹಲ.