ಮಕ್ಕಳಂತೆ ಬೆಳೆಸಿದ ಕಾಫಿ ತೋಟ ಕಣ್ಣೆದುರೇ ನಾಶ! ಕಾಡಾನೆಗಳ ದಾಳಿಗೆ ಕಣ್ಣೀರಿಟ್ಟ ರೈತ; ಮಲೆನಾಡಿನಲ್ಲಿ 39 ಆನೆಗಳ ಆತಂಕ!
ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ ಕಾಫಿ ತೋಟ ಕ್ಷಣಾರ್ಧದಲ್ಲೇ ನೆಲಸಮವಾಗಿದೆ. ಬದುಕಿಗೆ ಆಧಾರವಾಗಿದ್ದ ತೋಟದ ದುಸ್ಥಿತಿ ಕಂಡು ರೈತರೊಬ್ಬರು ತೋಟದಲ್ಲೇ ಕುಳಿತು ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ, 39 ಕಾಡಾನೆಗಳು ನಾಲ್ಕು ಗುಂಪುಗಳಾಗಿ ಬೇರ್ಪಟ್ಟಿದ್ದು, ಮಲೆನಾಡಿನ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರ್ಗಲ್ ಗ್ರಾಮದಲ್ಲಿ ಕಾಡಾನೆಗಳ ಹಾವಳಿಗೆ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಗಿಡಗಳನ್ನು ತುಳಿದು ನೆಲಸಮ ಮಾಡಿದೆ. ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ್ದ ಕಾಫಿ ಗಿಡಗಳ ದುಸ್ಥಿತಿ ಕಂಡು ತೋಟದ ಮಾಲೀಕ ಪ್ರಹ್ಲಾದ್ ಕಣ್ಣೀರಿಟ್ಟಿದ್ದಾರೆ.ಮೂರು ಎಕರೆ ತೋಟವೇ ಬದುಕಿಗೆ ಆಧಾರ!

ಮೂರು ಎಕರೆ ಕಾಫಿ ತೋಟವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಪ್ರಹ್ಲಾದ್ ದಂಪತಿಗೆ ಇದೀಗ ಬದುಕಿನ ಚಿಂತೆ ಎದುರಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪ್ರಹ್ಲಾದ್, ತೋಟದ ನಾಶದಿಂದ ತೀವ್ರವಾಗಿ ನೊಂದಿದ್ದಾರೆ.
‘ಮಕ್ಕಳಂತೆ ಬೆಳೆಸಿದ ತೋಟ ಹೋಯ್ತು. ನಾನು, ನನ್ನ ಹೆಂಡತಿ ಎಲ್ಲಿಗೂ ಬರುವುದಿಲ್ಲ, ಇಲ್ಲೇ ಇರುತ್ತೇವೆ’ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರೈತನ ಮನವೊಲಿಸಲು ಮುಂದಾಗಿದ್ದಾರೆ.
ಮತ್ತೊಬ್ಬ ರೈತನ ಮೂರು ಎಕರೆ ಬೆಳೆ ನಾಶ!

ಇದು ಕೇವಲ ಪ್ರಹ್ಲಾದ್ ಅವರೊಬ್ಬರ ನೋವಲ್ಲ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿಯ ನಾಗಲಾಪುರದಲ್ಲೂ ಕಾಡಾನೆಗಳು ದಾಂಧಲೆ ನಡೆಸಿವೆ. ಸುಪ್ರೀತ್ ಎಂಬುವವರ ಮೂರು ಎಕರೆ ಗದ್ದೆ ಹಾಗೂ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.
‘ಗದ್ದೆಯ ಸ್ಥಿತಿ ನೋಡಿದರೆ ಹೊಟ್ಟೆಗೆ ಬೆಂಕಿ ಬಿದ್ದಂತಾಗುತ್ತದೆ’ ಎಂದು ರೈತರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.ನಾಲ್ಕು ಗುಂಪುಗಳಾದ 39 ಕಾಡಾನೆಗಳು!

ಮೂಡಿಗೆರೆ ಭಾಗದಲ್ಲಿ ಈಗಾಗಲೇ ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಇದೀಗ 39 ಕಾಡಾನೆಗಳು ನಾಲ್ಕು ಗುಂಪುಗಳಾಗಿ ಬೇರ್ಪಟ್ಟಿರುವುದು ಗ್ರಾಮಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಒಂದೆಡೆ ಬೆಳೆ ಕಳೆದುಕೊಳ್ಳುವ ಭೀತಿ, ಮತ್ತೊಂದೆಡೆ ಜೀವಕ್ಕೆ ಎದುರಾಗಿರುವ ಅಪಾಯದಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.
‘ನಮ್ಮ ತಾಳ್ಮೆ ಕೆಡುವ ಮುನ್ನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಅಷ್ಟಕ್ಕೂ ಮಲೆನಾಡಿನ ರೈತರ ಈ ಸಂಕಷ್ಟಕ್ಕೆ ಕೊನೆ ಯಾವಾಗ? ಕಾಡಾನೆಗಳ ಹಾವಳಿ ತಡೆಯಲು ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸುತ್ತಾ? ಬೆಳೆ ಕಳೆದುಕೊಂಡ ರೈತರ ನೆರವಿಗೆ ಧಾವಿಸುತ್ತಾ? ಎಂಬ ಪ್ರಶ್ನೆಗಳು ಇದೀಗ ಎದುರಾಗಿವೆ.