ಮದುವೆಗೆ ವಿರೋಧಿಯಲ್ಲ, ಆದರೆ ಕೆಲವು ಸಂಬಂಧಗಳು ಬೇಡ ನಿತ್ಯಾ ಮೆನನ್ ಓಪನ್ ಟಾಕ್!!
ಪಾಡ್ಕ್ಯಾಸ್ಟ್ ಒಂದರಲ್ಲಿ ಮಾತನಾಡಿರುವ ನಿತ್ಯಾ ಮೆನನ್ ಮದುವೆಯ ಕುರಿತ ನಿಲುವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ನಟಿ ಹೇಳಿದ್ದೇನು ಗೊತ್ತಾ?
ಸಿನಿಮಾ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿರುವ ನಟಿ ನಿತ್ಯಾ ಮೆನನ್, ವೈಯಕ್ತಿಕ ಜೀವನದ ವಿಚಾರದಲ್ಲೂ ಆಗಾಗ್ಗೆ ಸುದ್ದಿಯಾಗುತ್ತಾರೆ. ವಿಶೇಷವಾಗಿ ಮದುವೆ ಮತ್ತು ಸಂಬಂಧಗಳ ಬಗ್ಗೆ ಅವರು ವ್ಯಕ್ತಪಡಿಸುವ ಅಭಿಪ್ರಾಯಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತವೆ. ಇದೀಗ ಪಾಡ್ಕ್ಯಾಸ್ಟ್ ಒಂದರಲ್ಲಿ ಮಾತನಾಡಿರುವ ನಿತ್ಯಾ ಮೆನನ್ ಮದುವೆಯ ಕುರಿತ ನಿಲುವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ
ಗೋಬಿನಾಥ್ ಅವರ ಪಾಡ್ಕ್ಯಾಸ್ಟ್ನಲ್ಲಿ ಭಾಗವಹಿಸಿದ್ದ ನಿತ್ಯಾ ಮೆನನ್, ತಮ್ಮ ಜೀವನದಲ್ಲಿ ಎದುರಿಸಿದ ಸಂಬಂಧಗಳ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಕೆಲವು ಸಂಬಂಧಗಳು ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ. ಅಂತಹ ಸಂಬಂಧಗಳಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮನ್ನು ಉಸಿರುಗಟ್ಟಿಸುವಂತಹ ಸಂಬಂಧಗಳಿಂದ ದೂರ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಸಂಬಂಧದಲ್ಲಿ ಸ್ವಾತಂತ್ರ್ಯ ಇಲ್ಲದಿದ್ದರೆ ನೆಮ್ಮದಿಯೂ ಇಲ್ಲ

ಹಾಗೆಯೇ ಹಿಂದಿನ ಸಂಬಂಧಗಳಲ್ಲಿ ತಾವು ಹಲವು ರೀತಿಯ ನಿರ್ಬಂಧಗಳನ್ನು ಅನುಭವಿಸಿದ್ದಾಗಿ ನಿತ್ಯಾ ಮೆನನ್ ಹೇಳಿದ್ದಾರೆ. ತಮ್ಮನ್ನು ಸೀಮಿತಗೊಳಿಸಲಾಗುತ್ತಿದೆ, ಹಿಡಿದಿಟ್ಟುಕೊಳ್ಳಲಾಗುತ್ತಿದೆ ಮತ್ತು ಇಷ್ಟದ ಕೆಲಸಗಳನ್ನು ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ಭಾವನೆ ಮೂಡಿತ್ತು ಎಂದು ವಿವರಿಸಿದ್ದಾರೆ. ಇಂತಹ ಅನುಭವಗಳು ವ್ಯಕ್ತಿಯನ್ನು ಮಾನಸಿಕವಾಗಿ ಸಣ್ಣವರನ್ನಾಗಿ ಮತ್ತು ದುರ್ಬಲರನ್ನಾಗಿ ಮಾಡಬಹುದು ಎಂಬ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.
ಆದರೆ ಇಂತಹ ಸಂಬಂಧಗಳಿಂದ ದೂರ ಸರಿದ ಬಳಿಕ ತಮಗೆ ನೆಮ್ಮದಿ ಸಿಕ್ಕಿತು ಎಂದು ನಿತ್ಯಾ ಹೇಳಿದ್ದಾರೆ. ಒಂದು ನಿರ್ಬಂಧದಿಂದ ಹೊರಬಂದಾಗ ಹೊಸ ಜಗತ್ತು ತೆರೆದುಕೊಂಡಂತೆ ಭಾಸವಾಗುತ್ತದೆ. ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ತಮ್ಮ ಜೀವನವನ್ನು ತಮಗೆ ಬೇಕಾದ ರೀತಿಯಲ್ಲಿ ನಡೆಸುವ ಸ್ವಾತಂತ್ರ್ಯ ಸಿಗುತ್ತದೆ ಎಂದು ತಮ್ಮ ಅನುಭವವನ್ನು ವಿವರಿಸಿದ್ದಾರೆ.
ನಿತ್ಯಾ ಮೆನನ್ ಮದುವೆ ಕುರಿತ ಹೇಳಿಕೆಗಳು ಆಗಾಗ್ಗೆ ಚರ್ಚೆಯಾಗುತ್ತಿರುತ್ತವೆ. ಅವರು ಮದುವೆಯಾಗಲು ಇಷ್ಟಪಡುವುದಿಲ್ಲ ಎಂಬ ಅಭಿಪ್ರಾಯ ಕೆಲವರಲ್ಲಿ ಮೂಡಿದೆ. ಆದರೆ ಈ ಬಗ್ಗೆ ಪಾಡ್ಕ್ಯಾಸ್ಟ್ನಲ್ಲಿ ಸ್ಪಷ್ಟನೆ ನೀಡಿರುವ ನಟಿ, ತಾವು ಎಂದಿಗೂ ಮದುವೆಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಹೇಳಿದ್ದಾರೆ. ಮದುವೆಯಾಗುವ ಆಸೆ ಇದೆ. ಆದರೆ ಕೇವಲ ಮದುವೆಯಾಗಬೇಕು ಎಂಬ ಕಾರಣಕ್ಕೆ ಯಾವುದೇ ಸಂಬಂಧವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ನಟಿ ತಿಳಿಸಿದ್ದಾರೆ.
ತಮಗೆ ಯಾವ ರೀತಿಯ ಸಂಬಂಧ ಬೇಕು ಎಂಬ ಅರಿವು ಇದೆ ಎಂದು ಹೇಳಿರುವ ನಿತ್ಯಾ, ಮದುವೆ ಎನ್ನುವುದಕ್ಕಿಂತ ಸರಿಯಾದ ವ್ಯಕ್ತಿಯೊಂದಿಗೆ ಸರಿಯಾದ ಸಂಬಂಧ ಹೊಂದುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಸ್ವಾತಂತ್ರ್ಯವನ್ನು ಗೌರವಿಸುವ, ಬೆಳೆಯಲು ಅವಕಾಶ ನೀಡುವ ಮತ್ತು ತಮ್ಮ ವ್ಯಕ್ತಿತ್ವವನ್ನು ಒಪ್ಪಿಕೊಳ್ಳುವ ವ್ಯಕ್ತಿ ಸಿಕ್ಕರೆ ಮಾತ್ರ ಮದುವೆಯ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದಾರೆ.
ವೈಯಕ್ತಿಕ ಜೀವನದ ವಿಚಾರಗಳ ಜೊತೆಗೆ ನಿತ್ಯಾ ಮೆನನ್ ತಮ್ಮ ಸಿನಿಮಾ ಕೆಲಸಗಳಲ್ಲೂ ನಿರತರಾಗಿದ್ದಾರೆ. ಕಳೆದ ವರ್ಷ ರವಿ ಮೋಹನ್ ಜೊತೆ ಕಾದಲಿಕ್ಕ ನೆರಮಿಲೈ, ವಿಜಯ್ ಸೇತುಪತಿ ಜೊತೆ ತಲೈವನ್ ತಲೈವಿ ಮತ್ತು ಧನುಷ್ ಅಭಿನಯದ ಇಡ್ಲಿ ಕಡೈ ಸಿನಿಮಾಗಳಲ್ಲಿ ನಟಿಸಿದ್ದರು.
ಇದೀಗ ಹಿಂದಿ ಸಿನಿಮಾ ಮಿಸ್ಟರ್ & ಮಿಸೆಸ್ ಗ್ರೇ ಮೂಲಕವೂ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಅಂಕುರ್ ಪಜ್ನಿ ಮತ್ತು ವಿಶಾಲ್ ರಂಜನ್ ಮಿಶ್ರಾ ಅವರ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿವಾಹೇತರ ಸಂಬಂಧ ಮತ್ತು ಆರ್ಥಿಕ ವಂಚನೆಯ ನಡುವೆ ಸಿಲುಕುವ ವ್ಯಕ್ತಿಯ ಕಥೆಯನ್ನು ಸಿನಿಮಾ ಒಳಗೊಂಡಿದೆ. ಡಿಸೆಂಬರ್ 11ರಂದು ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.