2026ರ ಮಿಸ್ ಯೂನಿವರ್ಸ್ ಕಿರೀಟ ಪೋರ್ಟೊ ರಿಕೊ ಸುಂದರಿಯ ಮುಡಿಗೆ! ಜೆನ್ನಿಫರ್ ಬ್ಯಾರೆಟೊ ಗೆಲುವಿನೊಂದಿಗೆ ಹೊಸ ಇತಿಹಾಸ!
ವಿಶ್ವದ ಗಮನ ಸೆಳೆದಿದ್ದ 75ನೇ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಗೆ ತೆರೆ ಬಿದ್ದಿದೆ. ಸೌಂದರ್ಯ, ಆತ್ಮವಿಶ್ವಾಸ ಹಾಗೂ ಬುದ್ಧಿವಂತಿಕೆಯ ಪ್ರದರ್ಶನದ ಮೂಲಕ ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ 2026ರ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೆಕ್ಸಿಕೊದ ಹಾಲಿ ಮಿಸ್ ಯೂನಿವರ್ಸ್ ಫಾತಿಮಾ ಬಾಷ್ ತಮ್ಮ ಉತ್ತರಾಧಿಕಾರಿ ಜೆನ್ನಿಫರ್ ಬ್ಯಾರೆಟೊ ಅವರಿಗೆ ಕಿರೀಟ ತೊಡಿಸುವ ಮೂಲಕ ನೂತನ ವಿಶ್ವ ಸುಂದರಿಯನ್ನು ಸ್ವಾಗತಿಸಿದ್ದಾರೆ.ಅಂತಿಮ ಸುತ್ತಿನಲ್ಲಿ ಒಂದೇ ಪ್ರಶ್ನೆ!
ಫಿಲಿಪೈನ್ಸ್, ನ್ಯೂಜಿಲೆಂಡ್, ವೆನೆಜುವೆಲಾ, ಡೊಮಿನಿಕನ್ ಗಣರಾಜ್ಯ ಹಾಗೂ ಪೋರ್ಟೊ ರಿಕೊ ದೇಶಗಳ ಸುಂದರಿಯರು ಟಾಪ್ 5 ಹಂತಕ್ಕೆ ಪ್ರವೇಶಿಸಿದ್ದರು. ಅಂತಿಮ ಸುತ್ತಿನಲ್ಲಿ ಐವರಿಗೂ ಒಂದೇ ಪ್ರಶ್ನೆಯನ್ನು ಕೇಳಲಾಗಿತ್ತು.
ಈ ನಿರ್ಣಾಯಕ ಹಂತದಲ್ಲಿ ಜೆನ್ನಿಫರ್ ಬ್ಯಾರೆಟೊ ನೀಡಿದ ಉತ್ತರ ಅವರಿಗೆ ಕಿರೀಟ ತಂದುಕೊಟ್ಟಿದೆ.
ಡೊಮಿನಿಕನ್ ಗಣರಾಜ್ಯದ ಮೆಲಿಸ್ಸಾ ನುನೆಜ್ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರೆ, ವೆನೆಜುವೆಲಾದ ಕ್ಲಾರಾ ವೇಗಾಸ್ ಗೊಯೆಟ್ಜ್ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ.20 ವರ್ಷಗಳ ಬಳಿಕ ಪೋರ್ಟೊ ರಿಕೊಗೆ ಕಿರೀಟ!
ಜೆನ್ನಿಫರ್ ಬ್ಯಾರೆಟೊ ಅವರ ಗೆಲುವಿನೊಂದಿಗೆ ಪೋರ್ಟೊ ರಿಕೊ ಆರನೇ ಬಾರಿಗೆ ಮಿಸ್ ಯೂನಿವರ್ಸ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ 1970, 1985, 1993, 2001 ಹಾಗೂ 2006ರಲ್ಲಿ ಈ ದೇಶದ ಸುಂದರಿಯರು ಪ್ರಶಸ್ತಿ ಗೆದ್ದಿದ್ದರು.
ಇದೀಗ ಬರೋಬ್ಬರಿ ಎರಡು ದಶಕಗಳ ಬಳಿಕ ಜೆನ್ನಿಫರ್ ಬ್ಯಾರೆಟೊ ಪೋರ್ಟೊ ರಿಕೊಗೆ ಮತ್ತೊಮ್ಮೆ ಮಿಸ್ ಯೂನಿವರ್ಸ್ ಕಿರೀಟ ತಂದುಕೊಟ್ಟಿದ್ದಾರೆ.
