5 ಗ್ರಾಂ ಚಿನ್ನದ ಉಂಗುರಕ್ಕೆ ಸಂಸಾರ ಸರ್ವನಾಶ! ಕಳೆದೋದ ಉಂಗುರಕ್ಕಾಗಿ ಗಂಡ ಹೆಂಡತಿ ಬಲಿ!

5 ಗ್ರಾಂ ಚಿನ್ನದ ಉಂಗುರಕ್ಕೆ ಸಂಸಾರ ಸರ್ವನಾಶ! ಕಳೆದೋದ ಉಂಗುರಕ್ಕಾಗಿ ಗಂಡ ಹೆಂಡತಿ ಬಲಿ!

5 ಗ್ರಾಂ ಚಿನ್ನದ ಉಂಗುರದ ವಿಷ್ಯಕ್ಕೆ ಶುರುವಾದ ಗಲಾಟೆ ಇಬ್ಬರ ಜೀವ ತೆಗೆದಿದೆ.. ಹೆಂಡ್ತಿಯ ಗಲಾಟೆ ಸಹಿಸೋದಕ್ಕಾಗದ ಗಂಡ ನೇಣಿಗೆ ಕೊರಳೊಡ್ತಿದ್ದಂತೆ ಪತ್ನಿಯೂ ಸಾವಿನ ಮನೆ ಸೇರಿದ್ದಾಳೆ. ಅಪ್ಪ-ಅಮ್ಮನ ದುಡುಕಿನ ನಿರ್ಧಾರಕ್ಕೆ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಬದುಕು ಅನ್ನೋದು ಅಂದ್ಕೊಂಡಂತೆ ಅಲ್ಲ, ಹೊಂದಿಕೊಂಡು ಹೋದಂತೆ ಅಂತಾರಲ್ಲ ಈ ಮಾತು ನೂರಕ್ಕೆ ನೂರು ಸತ್ಯ. ಯಾಕಂದ್ರೆ, ಅಂದ್ಕೊಳ್ಳೋದು ಬೇರೆ, ಆಸೆ ಪಡೋದೂ ಬೇರೆ. ಆದ್ರೆ, ರಿಯಾಲಿಟಿಯೇ ಇನ್ನೇನೋ ಆಗಿರುತ್ತೆ. ಹೀಗಾಗಿ ಅಂದ್ಕೊಂಡಿದ್ದನ್ನ ಬಿಟ್ಟು, ಯಾರು ಹೊಂದ್ಕೊಂಡು ಹೋಗ್ತಾರೋ ಅಂತವ್ರ ಬದುಕು ಬಂಗಾರ ಆಗಿರುತ್ತೆ.
ಆದ್ರೆ, ಇಂದಿನ ಮನಸ್ಸುಗಳು ಹೊಂದ್ಕೊಂಡು ಹೋಗೋದನ್ನೇ ಮರೆತು ನಿಂತಿವೆ. ಸಣ್ಣ ಸಣ್ಣ ವಿಷ್ಯಕ್ಕೂ ಗಲಾಟೆ, ಕ್ಷುಲ್ಲಕ ಕಾರಣಕ್ಕೆ ಜಗಳ. ಇಂತಾ ವಿಷ್ಯಗಳೇ ಅದೆಷ್ಟೋ ಜನರ ಜೀವ ತೆಗೀತಿವೆ. ಇವ್ರಿಬ್ಬರ ವಿಷ್ಯದಲ್ಲಿ ಆಗಿದ್ದೂ ಇದೆ. ಸಣ್ಣದೊಂದು ರಿಂಗ್‌ ವಿಷ್ಯಕ್ಕೆ ಶುರುವಾದ ಗಲಾಟೆ, ಗಂಡ ಹೆಂಡ್ತಿ ಇಬ್ಬರನ್ನೂ ಹೆಣವಾಗಿಸಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದ ಘಟನೆ ಇಡೀ ಊರಿನವ್ರನ್ನೇ ಬೆಚ್ಚಿ ಬೀಳಿಸಿದೆ. ನಿದ್ದೆಯಿಂದ ಏಳೋದಕ್ಕೂ ಮೊದಲೇ ಅಪ್ಪಳಿಸಿದ ಸಾವಿನ ಸುದ್ದಿ, ಇಡೀ ಊರಿನವ್ರನ್ನ ಕಂಗಾಲಾಗಿಸಿದೆ. ಗಂಡ ದನದ ಕೊಟ್ಟಿಗೆಯಲ್ಲಿ ಹೆಣವಾಗಿದ್ರೆ, ಪತ್ನಿ ರೂಂನಲ್ಲಿ ನೇತಾಡ್ತಿದ್ದಳು. ಇತ್ತ ಏನೂ ಅರಿಯದ ಇಬ್ಬರು ಮಕ್ಕಳು ಅಪ್ಪ ಬೇಕು, ಅಮ್ಮ ಬೇಕು ಅಂತಾ ಬಿಕ್ಕಿ ಬಿಕ್ಕಿ ಅಳ್ತಿದ್ದರು.

ಹೌದು.. ಅಪ್ಪಾಶಿ ಹಾಗೂ ರಾಜೇಶ್ವರಿ ದಂಪತಿ ನೇಣು ಬಿಗಿದುಕೊಂಡು ಮಕ್ಕಳನ್ನು ತಬ್ಬಲಿ ಮಾಡಿದ್ದಾರೆ. 8 ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ದಂಪತಿ ಅವಿಭಕ್ತ ಕುಟುಂಬ ಆಗಿದ್ರಿಂದ ಎಲ್ರೂ ಖುಷಿ ಖುಷಿಯಾಗಿಯೇ ಒಟ್ಟಿಗೆ ಜೀವನ ನಡೆಸ್ತಿದ್ರು. ಆದ್ರೆ, ನಿನ್ನೆ ರಾತ್ರಿ ನಡೆದ ಜಗಳ ಇಡೀ ಕುಟುಂಬವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಕಳೆದೋಗಿದ್ದ ಉಂಗುರದ ವಿಷ್ಯಕ್ಕೆ ಶುರುವಾದ ಗಲಾಟೆ, ಇಬ್ಬರು ಸಾವಿನ ಮನೆ ಸೇರುವಂತೆ ಮಾಡಿದೆ.

6 ತಿಂಗಳ ಹಿಂದೆ ರಾಜೇಶ್ವರಿಯ 5 ಗ್ರಾಂ ಚಿನ್ನದ ಉಂಗುರ ಕಳೆದೋಗಿತ್ತಂತೆ. ಇದೇ ವಿಷ್ಯವಾಗಿ ಆಗಾಗ ಜಗಳ ಆಗ್ತಿತ್ತು. ರಾಜೇಶ್ವರಿ ಪದೇ ಪದೇ ಕುಟುಂಬಸ್ಥರ ಮೇಲೆಯೇ ಅನುಮಾನ ಪಡ್ತಿದ್ದಳಂತೆ. ಹೀಗಾಗಿ ರಾಜೇಶ್ವರಿ ಅತ್ತೆ, ನಾನೇ ನಿನಗೊಂದು ಹೊಸ ಉಂಗುರ ಮಾಡಿಸಿಕೊಡ್ತೀನಿ. ಆ ವಿಷ್ಯವನ್ನ ಬಿಟ್ಬಿಡು ಅಂತಾ ಬುದ್ಧಿ ಹೇಳಿದ್ರಂತೆ.

ಆದ್ರೆ, ರಾಜೇಶ್ವರಿ ಮಾತ್ರ ಗಲಾಟೆ ಮಾಡೋದನ್ನ ನಿಲ್ಲಿಸಿರ್ಲಿಲ್ಲ. ನಿನ್ನೆ ಕೂಡಾ ಗಂಡ ಹೆಂಡ್ತಿ ಮಧ್ಯೆ ಉಂಗುರದ ವಿಷ್ಯಕ್ಕೆ ಗಲಾಟೆ ಶುರುವಾಗಿತ್ತು. ಇದನ್ನ ನೋಡಿದ ಅಪ್ಪಾಶಿಯ ತಾಯಿ ಹಾಗೂ ಅಣ್ಣ, ಇಬ್ಬರನ್ನೂ ಸಮಾಧಾನ ಮಾಡಿ ಬುದ್ಧಿ ಹೇಳಿದ್ರಂತೆ. ಎಲ್ರೂ ನಿದ್ದೆಗೆ ಜಾರ್ತಿದ್ದಂತೆ ನಸುಕಿನ ಜಾವ ಎದ್ದ ಅಪ್ಪಾಶಿ, ದನದ ಕೊಟ್ಟಿಗೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗ್ಗೆ ಎದ್ದ ರಾಜೇಶ್ವರಿಗೆ ಗಂಡ ಕಾಣಿಸಿಲ್ಲ. ಹೀಗಾಗಿ ಇಷ್ಟು ಬೆಳಗ್ಗೆ ಎಲ್ಲೋದ್ರು ಅಂತಾ ಹೊರಗಡೆ ನೋಡೋದಕ್ಕೆ ಹೋಗಿದ್ದಾಳೆ. ಈ ವೇಳೆ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡಿದ್ದು ಕಾಣ್ತಿದ್ದಂತೆ ಗೋಳಾಡೋದಕ್ಕೆ ಶುರು ಮಾಡಿದ್ಲು. ಮನೆಯವ್ರೆಲ್ಲಾ ಎದ್ದು ಬರೋದ್ರೊಳಗೆ ಮನೆ ಮಗನ ಕಥೆ ಮುಗಿದಾಗಿತ್ತು. ಇತ್ತ ಕುಟುಂಬಸ್ಥರೆಲ್ಲಾ ಕಾಡಿ ಬೇಡ್ತಿದ್ರೆ, ಅತ್ತ ರಾಜೇಶ್ವರಿ ತನ್ನ ರೂಂ ಸೇರಿಕೊಂಡು 16 ವರ್ಷದ ಮಗುವಿಗಾಗಿ ಕಟ್ಟಿದ್ದ ಜೋಳಿಗೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆಯವ್ರು ಬಂದು ಬಾಗಿಲು ತೆಗೆದು ನೋಡೋದ್ರೊಳಗೆ ರಾಜೇಶ್ವರಿಯೂ ಹೆಣವಾಗಿದ್ಲು. ಗಂಡ ಹೆಂಡ್ತಿಯ ದುಡುಕಿನ ನಿರ್ಧಾರಕ್ಕೆ 4 ವರ್ಷದ ಮಗುವಿನ ಜೊತೆಗೆ 16 ತಿಂಗಳ ಇನ್ನೊಂದು ಮಗು ಅನಾಥವಾಗಿದೆ. ಮಾತಲ್ಲೇ ಬಗೆಹರಿಸಿಕೊಳ್ಬೇಕಿದ್ದ ವಿಷಯ ಸಾವಿನಲ್ಲಿ ಅಂತ್ಯವಾಗಿದೆ.
ಟಾಪ್​ ವಿಡಿಯೋಗಳು.

Leave a Reply

Your email address will not be published. Required fields are marked *