ಪಕ್ಷದ ಶಾಸಕನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ದಳಪತಿ ವಿಜಯ್
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ನಿಧನರಾದ ತಮ್ಮ ಪಕ್ಷದ ಶಾಸಕ ವಿ.ಎಸ್. ಬಾಬು ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಅಂತಿಮ ಗೌರವ ಸಲ್ಲಿಸಿದರು. ಚೆನ್ನೈನ ಪೆರಂಬೂರಿನಿಂದ ವಿದ್ಯುತ್ ಚಿತಾಗಾರದವರೆಗೂ ಶವವಾಹನದ ಜೊತೆ ನಡೆದುಕೊಂಡೇ ಸಾಗುವ ಮೂಲಕ ತಮ್ಮ ಆಪ್ತ ಶಾಸಕನಿಗೆ ಭಾವುಕ ವಿದಾಯ ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ಶುಕ್ರವಾರ ತಮ್ಮ ಪಕ್ಷದ ಶಾಸಕ ವಿ.ಎಸ್. ಬಾಬು ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಭಾವುಕರಾದರು. ಕೊಲತ್ತೂರು ಕ್ಷೇತ್ರದ ಶಾಸಕರಾಗಿದ್ದ ಬಾಬು ಅವರ ಪಾರ್ಥಿವ ಶರೀರಕ್ಕೆ ವಿಜಯ್ ಸ್ವತಃ ಹೆಗಲು ಕೊಟ್ಟರು. ಚೆನ್ನೈನ ಪೆರಂಬೂರಿನಲ್ಲಿರುವ ಬಾಬು ಅವರ ನಿವಾಸದಿಂದ ಅಂತಿಮ ಯಾತ್ರೆ ಆರಂಭವಾದಾಗ ಈ ಭಾವುಕ ಕ್ಷಣ ಕಂಡುಬಂತು.
ಶೋಕತಪ್ತರಾಗಿದ್ದ ಮುಖ್ಯಮಂತ್ರಿ ವಿಜಯ್ ಅವರು ಮನೆಯಿಂದ ಪಾರ್ಥಿವ ಶರೀರವನ್ನು ಹೆಗಲ ಮೇಲೆ ಹೊತ್ತು ತಂದು ವಾಹನದಲ್ಲಿ ಇರಿಸಿದರು. ಬಳಿಕ ತಿರು ವಿ ಕಾ ನಗರದ ವಿದ್ಯುತ್ ಚಿತಾಗಾರದವರೆಗೂ ಸಾಗಿದ ಅಂತಿಮ ಯಾತ್ರೆಯಲ್ಲಿ ಅವರು ನಡೆದುಕೊಂಡೇ ಸಾಗಿದರು. ದಾರಿಯುದ್ದಕ್ಕೂ ಶವವಾಹನವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಹೆಜ್ಜೆ ಹಾಕುವ ಮೂಲಕ ತಮ್ಮ ಆಪ್ತ ಶಾಸಕನಿಗೆ ಗೌರವ ಸಲ್ಲಿಸಿದರು.
ಈ ಅಂತಿಮ ಯಾತ್ರೆಯಲ್ಲಿ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ , ರಾಜ್ಯ ಸಚಿವರು ಹಾಗೂ ಟಿವಿಕೆ ಪಕ್ಷದ ಶಾಸಕರು ಪಾಲ್ಗೊಂಡಿದ್ದರು. ಪಕ್ಷದ ಹಿರಿಯ ಪದಾಧಿಕಾರಿಗಳು ಮತ್ತು ಸಾವಿರಾರು ಕಾರ್ಯಕರ್ತರು ಮುಖ್ಯಮಂತ್ರಿಗಳ ಜೊತೆ ಹೆಜ್ಜೆ ಹಾಕಿದರು. ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡ ದುಃಖದಲ್ಲಿ ಕಾರ್ಯಕರ್ತರು ಕಣ್ಣೀರು ಹಾಕಿದರು.
ಕೊಲತ್ತೂರು ಶಾಸಕ ವಿ.ಎಸ್. ಬಾಬು ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದೀರ್ಘಕಾಲದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಗುರುವಾರ ಹೃದಯಾಘಾತ ಸಂಭವಿಸಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಗುರುವಾರ ಪಾರ್ಥಿವ ಶರೀರವನ್ನು ಮನೆಗೆ ತಂದ ತಕ್ಷಣವೇ ಸಿಎಂ ವಿಜಯ್ ಅವರು ಬಾಬು ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಕೂಡ ಅಗಲಿದ ಶಾಸಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಯಾರು ಈ ಶಾಸಕ ವಿ.ಎಸ್. ಬಾಬು?
ತಮಿಳುನಾಡಿನ ಕೊಳತ್ತೂರು ವಿಧಾನಸಭಾ ಕ್ಷೇತ್ರದ ಟಿವಿಕೆ ಶಾಸಕ ವಿ.ಎಸ್. ಬಾಬು ಅವರು ನವೆಂಬರ್ 19ರ ಗುರುವಾರ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಬು ಅವರನ್ನು ಸೆಪ್ಟೆಂಬರ್ 9ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಎರಡು ತಿಂಗಳಿಗೂ ಹೆಚ್ಚು ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯ ಸ್ಥಿತಿ ಹದಗೆಟ್ಟು ಗುರುವಾರ ಮಧ್ಯಾಹ್ನ 2.24ಕ್ಕೆ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ತಿಳಿಸಿದೆ.